ಹಾಲಿನ ದರ ಏರಿಕೆ ರಾಜ್ಯದ ಜನರಿಗೆ ಬಿಸಿ ತಟ್ಟಲಿದೆ

0
472

ಬಿಸಿಲ ಬೇಗೆ ನಡುವೆ ರಾಜ್ಯದ ಜನರಿಗೆ ಹಾಲಿನ ದರ ಏರಿಕೆ ಬಿಸಿ ತಟ್ಟಲಿದೆ. ಹಾಲು ಮತ್ತು ಮೊಸರಿನ ಬೆಲೆಯನ್ನ ಹೆಚ್ಚಿಸಲು ಕೆಎಂಎಫ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಹಾಲು ಮತ್ತು ಮೊಸರಿನ ಬೆಲೆಯಲ್ಲಿ ಲೀಟರ್`ಗೆ ತಲಾ 2 ರೂಪಾಯಿ ಹೆಚ್ಚಿಸಲು ನಿರ್ಧರಿಸಲಾಗಿದೆ. ಪರಿಷ್ಕೃತ ದರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.

 

ರಾಜ್ಯದ ರೈತರು ಬರದ ಹಿನ್ನೆಲೆಯಲ್ಲಿ ತತ್ತರಿಸುತ್ತಿದ್ದಾರೆ. ಕಷ್ಟದಲ್ಲಿ ಹೈನುಗಾರಿಕೆ ಮಾಡುತ್ತಿದ್ದು, ದರ ಏರಿಕೆಯ ಸಂಪೂರ್ಣ ಹಣವನ್ನ ರೈತರಿಗೆ ನೀಡಲಾಗುತ್ತೆ ಎಂದು ಕೆಎಂಎಫ್ ತಿಳಿಸಿದೆ.

 

ಬೆಲೆ ಏರಿಕೆ ಬಳಿಕ ಸಾಮಾನ್ಯ ಹಾಲಿನ ದರ 36 ರೂ.ನಿಂದ 38 ರೂ,ಗೆ ಏರಿಕೆಯಾಗಲಿದ್ದು, ಪ್ರತೀ ಲೀಟರ್ ಮೊಸರಿನ ದರ 38 ರೂ.ನಿಂದ 40 ರೂಪಾಯಿಗೆ ಏರಿಕೆಯಾಗಲಿದೆ.

ಹಸಿರು ಪ್ಯಾಕೆಟ್ ಹಾಲಿನ ದರ 38 ರೂ.ನಿಂದ 40 ರೂ.ಗೆ ಏರಿಕೆಯಾಗಲಿದೆ. ಕೇಸರಿ ಪಪ್ಯಾಕೆಟ್ ಹಾಲಿನ ದರ 40 ರೂ.ನಿಂದ 42 ರೂ.ಗೆ ಏರಿಕೆಯಾಗಲಿದೆ.