ಭಾರತದ ಹೆಮ್ಮೆಯ ಪ್ರತೀಕವಾದ ತ್ರಿವರ್ಣ ಧ್ವಜ ಹಾಗೂ ಲಂಚನಗಳ ಬಗ್ಗೆ ಈ ವಿಷಯಗಳನ್ನು ತಿಳಿದುಕೊಂಡ್ರೆ ಆಶ್ಚರ್ಯ ಪಡ್ತೀರ..

0
1943

ಭಾರತದ ಹೆಮ್ಮೆಯ ಪ್ರತೀಕವಾದ ತ್ರಿವರ್ಣ ಧ್ವಜ ಹಾಗೂ ಲಾಂಚನಗಳ ಬಗ್ಗೆ ಈ ವಿಷಯಗಳನ್ನು ತಿಳಿದುಕೊಂಡ್ರೆ ಆಶ್ಚರ್ಯ ಪಡ್ತೀರ..

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

70ನೇ ಗಣರಾಜ್ಯೋತ್ಸವವನ್ನೇನೋ ದೇಶಾದ್ಯಂತ ಸಂಭ್ರಮದಿಂದ ಆಚರಿಸಿದ್ದೇವೆ. ತ್ರಿವರ್ಣಧ್ವಜವನ್ನು ಹಾರಿಸಿ, ಅದಕ್ಕೊಂದು ಸಲ್ಯೂಟ್‌ ಹೊಡೆದು ದೇಶಾಭಿಮಾನದಿಂದ ಬೀಗಿದ್ದೇವೆ. ಆದರೆ ಈ ರಾಷ್ಟ್ರ ಧ್ವಜದ ಬಗ್ಗೆ ನಾವೆಷ್ಟು ಅರಿತಿದ್ದೇವೆ? ದೇಶದ ಪ್ರಮುಖ ಸ್ಥಳಗಳಲ್ಲಿ ಬಳಸಲಾಗುವ ಈ ರಾಷ್ಟ್ರಧ್ವಜ ತಯಾರಾಗುವುದು ನಮ್ಮ ಕರ್ನಾಟಕದಲ್ಲೇ ಎಂಬುದು ನಮಗೊಂದು ಹೆಮ್ಮೆಯ ವಿಷಯ. ಪ್ರತಿಯೊಬ್ಬ ಭಾರತೀಯನೂ ಅರಿತಿರಲೇಬೇಕಾದ ರಾಷ್ಟ್ರಧವಜ ನಿರ್ಮಾಣದ ಬಗ್ಗೆ ಅರಿಯೋಣ..

ರಾಷ್ಟ್ರಧ್ವಜ ನಿರ್ಮಾಣಕ್ಕಾಗಿ ದೇಶಾದ್ಯಂತ ಹಲವು ಚರ್ಚೆಗಳು ಆರಂಭವಾಗಿದ್ದವು. ಈ ಮಧ್ಯೆ 1904ರಲ್ಲಿ ಸ್ವಾಮಿ ವಿವೇಕಾನಂದರ ಐರಿಶ್ ಶಿಷ್ಯೆ ಸಿಸ್ಟರ್ ನಿವೇದಿತಾ ದೇಶದ ಮೊದಲ ರಾಷ್ಟ್ರಧ್ವಜವನ್ನು ತಯಾರಿಸಿದ್ದರು. ಅದು ಕೆಂಪು, ಹಳದಿ ಬಣ್ಣ ಹೋಂದಿದ್ದು ವಜ್ರದ ಚಿತ್ರವಿತ್ತು. ಹಸಿರು ಎಂಬ ಮೂರ ಬಣ್ಣಗಳನ್ನು ಹೊಂದಿತ್ತು. ಧ್ವಜದ ಮೇಲೆ ಒಂದು ಕಮಲ ಸೇರಿಸಿದ್ದು ವಿಶೇಷವಾಗಿತ್ತು. ನಂತರ 1931ರಲ್ಲಿ ಪಿಂಗಾಳಿ ವೆಂಕಯ್ಯ ಎಂಬುವವರು ರಚಿಸಿದ ತಿರಂಗ ಧ್ವಜವನ್ನು ಅಧಿಕೃತವಾಗಿ ಭಾರತದ ಸಂವಿಧಾನದ ಪ್ರಮುಖ ಸಭೆಯೊಂದರಲ್ಲಿ 22 ನೇ ಜುಲೈ 1947 ರಂದು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ಆದರೆ ಪಿಂಗಾಳಿಯವರು ರಚಿಸಿದ ಧ್ವಜದಲ್ಲಿ ಕೇಸರಿ, ಬಿಳಿ ಹಸಿರು ಮತ್ತು ನಡುವಣ ಚರಕವಿತ್ತು. ಇದನ್ನು ತೆಗೆದು ಅಶೋಕಚಕ್ರವನ್ನು ಇರಿಸಲಾಯ್ತು.

ಈ ಮೂರೂ ಬಣ್ಣಗಳು ಭಿನ್ನ ವಿಷಯಗಳನ್ನು ಪ್ರತಿನಿಧಿಸುತ್ತವೆ. ಕೇಸರಿ- ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆಯುವ ಬಲಿದಾನಗಳ ಸಂಕೇತವಾಗಿದೆ. ಬಿಳಿಬಣ್ಣ-ಪವಿತ್ರ ಮನಸ್ಸಿನವರೊಂದಿಗೆ ನಿತ್ಯವೂ ಸತ್ಯ ಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯ ಮಾರ್ಗದ ಸಂಕೇತವಾಗಿದೆ. ಹಸಿರು ಬಣ್ಣ- ಪ್ರಕೃತಿಯೊಡನೆ ಮನುಷ್ಯನಿಗಿರಬೇಕಾದ ಅವಿನಾಭಾವ ಸಂಬಂಧವನ್ನು ತಿಳಿಸುತ್ತಾ, ಹಸಿರು ಜೀವರಾಶಿಗಳನ್ನು ಅವಲಂಬಿಸಿರುವ ಮನುಷ್ಯ ಮತ್ತು ಭೂಮಿಯ ಅನೂಹ್ಯ ಬಾಂಧವ್ಯಗಳ ಸಂಕೇತವಾಗಿದೆ. ಬಾವುಟದ ಮಧ್ಯದಲ್ಲಿ ಇಪ್ಪತ್ತುನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ. ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುತ್ತದೆ.

ಈ ಅಶೋಕ ಚಕ್ರವನ್ನು ಚಕ್ರವರ್ತಿ ಅಶೋಕನ ಲಾಂಛನದಲ್ಲಿರುವಂತೆಯೇ ವಿನ್ಯಾಸಗೊಳಿಸಲಾಗಿದೆ. ಸ್ವತಂತ್ರ ಭಾರತದ ಎರಡನೆಯ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣನ್ ರವರು ತಿಳಿಸಿದಂತೆ ಈ ಲಾಂಛನವನ್ನು ಧರ್ಮ ಮತ್ತು ಕಾನೂನಿನ ಪ್ರತಿನಿಧಿಯ ರೂಪದಲ್ಲಿ ಅಳವಡಿಸಿಕೊಳ್ಳಲಾಗಿದೆ. ಇನ್ನು 1950 ಜನವರಿ 26 ರ ತನಕ ಸ್ವತಂತ್ರ ಭಾರತದ ಸ್ವರಾಜ್ಯಭಾರದ ಬಾವುಟವಾಗಿ ನಂತರದ ದಿನಗಳಲ್ಲಿ ಗಣರಾಜ್ಯ ಭಾರತದ ಬಾವುಟವಾಗಿದೆ. ಆಗಸ್ಟ್ 31 ರಂದು ಮೊದಲ ಬಾರಿ ಧ್ವಜಾರೋಹಣ ಮಾಡಿದ ಫಲವಾಗಿ ಆ ದಿನವನ್ನು ಧ್ವಜ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದ ರಾಷ್ಟ್ರೀಯ ಧ್ಯೇಯ ವಾಕ್ಯ ಸತ್ಯಮೇವ ಜಯತೇ(ಸತ್ಯವೊಂದೇ ಸದಾ ಗೆಲ್ಲುತ್ತದೆ) ಪ್ರಾಚೀನ ಭಾರತೀಯ ಗ್ರಂಥ ಮುಂಡಕ ಉಪನಿಷತ್ತಿನಲ್ಲಿನ ಒಂದು ಮಂತ್ರ. ರಾಷ್ಟ್ರೀಯ ಲಾಂಛನದ ತಳಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಇದನ್ನು ಕೆತ್ತಲಾಗಿದೆ. ಲಾಂಛನ ಮತ್ತು “ಸತ್ಯಮೇವ ಜಯತೇ” ಪದಗಳನ್ನು ಎಲ್ಲಾ ಭಾರತೀಯ ನಾಣ್ಯ ಮತ್ತು ನಗದು ನೋಟುಗಳಲ್ಲಿ ಅಚ್ಚು ಮಾಡಲಾಗುತ್ತದೆ.

ನೊಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಗೋರ್ ಬರೆದ ಗೀತೆ ಜನ ಗಣ ಮನ. ಅವರು ಸಂಸ್ಕೃತ ಮಿಶ್ರಿತ ಬಂಗಾಳಿಯಲ್ಲಿ ಬರೆದ ಬ್ರಹ್ಮೋ ಮಂತ್ರದ ಈ ಗೀತೆಯನ್ನು ಜನವರಿ 24, 1950ರಲ್ಲಿ ಭಾರತ ಸರಕಾರವು ರಾಷ್ಟ್ರಗೀತೆ ಎಂದು ಘೋಷಿಸಿತು. ವಂದೇ ಮಾತರಂ ಗೀತೆಯನ್ನು ರಚಿಸಿದ್ದು ವಂಗ ದೇಶಭಕ್ತ ಬಂಕಿಮಚಂದ್ರ ಚಟ್ಟೋಪಾಧ್ಯಾಯ. 1882 ರಲ್ಲಿ ಚಟರ್ಜಿಯವರು ಸಂಸ್ಕೃತ ಮತ್ತು ಬಂಗಾಳಿ ಭಾಷೆಯಲ್ಲಿ ಕವಿತೆಯನ್ನು ಸಂಯೋಜಿಸಿದರು ಮತ್ತು ಜಧುನಾಥ್ ಭಟ್ಟಾಚಾರ್ಯ ರಾಗವನ್ನು ಹೊಂದಿದರು. 1950 ರಲ್ಲಿ ಭಾರತದ ರಾಷ್ಟ್ರೀ ಹಾಡನ್ನಾಗಿ ಅಧಿಕೃತಗೊಂಡಿತು.

ಸ್ವಾತಂತ್ರ್ಯಕ್ಕಾಗಿ ರಾಷ್ಟ್ರೀಯ ಕೂಗು ಎಂದು ಹೊರಹೊಮ್ಮಿದ ಈ ಹಾಡು, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮೇಲೆ ಬಹಳ ಆಳವಾದ ಪ್ರಭಾವವನ್ನು ಹೊಂದಿತ್ತು. ವಾಸ್ತವವಾಗಿ, ಪ್ರಚಲಿತದಲ್ಲಿರುವ ಭಾರತೀಯ ಜನತೆಯ ಸಂಭಾವ್ಯ ಅಪಾಯದ ಬಗ್ಗೆ ಬ್ರಿಟಿಷರು ಒಂದು ಹಂತದಲ್ಲಿ “ವಂದೇ ಮಾತರಂ” ಶಬ್ದಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ನಿಷೇಧಿಸಿದರು, ಮತ್ತು ಅನೇಕ ಸ್ವಾತಂತ್ರ್ಯ ಕಾರ್ಯಕರ್ತರನ್ನು ಕಾನೂನು ಬಾಹಿರವಾಗಿ ವಿರೋಧಿಸಿದ್ದಕ್ಕಾಗಿ ಬಂಧಿಸಲಾಯಿತು.

Also read: ಭಾರತಿಯರಾಗಿ ಗಣರಾಜ್ಯೋತ್ಸವ ಯಾಕೆ ಆಚರಿಸುತ್ತೀವಿ ಮತ್ತು ಅದರ ಮಹತ್ವ ತಿಳಿದು ಒಳ್ಳೆಯ ಪ್ರಜೆಗಳಾಗಿ!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522