ಈ ವರ್ಷ ಅತಿ ಹೆಚ್ಚು ಮಳೆಯಾಗಲಿದೆ… ಕೋಡಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ

0
1256

ಧಾರವಾಡ :  ಕೋಡಿಮಠದ ಶ್ರೀ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ಯುಗಾದಿಯ ದಿನ ವರ್ಷ್ ಭವಿಷ್ಯವನ್ನ ಹೇಳಿದ್ದು, ಈ ಬಾರಿ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದಿದ್ದಾರೆ. ಕಳೆದ ಬಾರಿ ಅನಾವೃಷ್ಠಿಯಿಂದ ರೈತನ ಭವಿಷ್ಯ ಕೆಟ್ಟಿತ್ತು, ಈ ಬಾರಿ ಅತಿವೃಷ್ಠಿಯಿಂದ ಕೆಡಲಿದೆ ಎಂಬ ಭವಿಷ್ಯ ನುಡಿದಿದ್ದಾರೆ.

ಬುಧವಾರ ಇಲ್ಲಿನ ಗಾಂಧಿನಗರದಲ್ಲಿರುವ ಬಂಡೆಮ್ಮದೇವಿ ದೇವಸ್ಥಾನದ ಪ್ರಥಮ ವರ್ಷದ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ವರ್ಷ ಶೇ. 50ರಷ್ಟು ಪ್ರದೇಶದಲ್ಲಿ ಮಳೆ, ಬೆಳೆ, ಸುಖ, ಶಾಂತಿ, ಸಮೃದ್ಧಿ ಇರಲಿದೆ. ಇನ್ನು ಶೇ. 50ರಷ್ಟು ಪ್ರದೇಶದಲ್ಲಿ ವಿಪರೀತ ಮಳೆಯಾಗಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ವಿಪರೀತ ಮಳೆಯಾಗುವ ಲಕ್ಷಣ ಇದ್ದು, ಮಳೆಯಿಂದಲೇ ಈ ಬಾರಿ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದರು. ಗುರುರಾಜ ಹುಣಸಿಮರದ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.

ರಾಜ್ಯ ರಾಜಕಾರಣ ಹಾಗೂ ದೆಶದ ರಾಜಕೀಯ, ಬಗ್ಗೆ ಮಾತನಾಡಲು ಇಚ್ಛಿಸಿದ ಸ್ವಾಮೀಜಿ, ಈ ವರ್ಷ ಶಾಂತಿ ಸುಖ ನೆಮ್ಮದಿ ಸಮೃದ್ದಿ ಮಳೇ ಆಗುತ್ತದೆ ಎಂದಷ್ಟೇ ಹೇಳಿದ್ದಾರೆ.  ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ, ಈ ಬಾರಿ ಹೆಚ್ಚು ಮಳೆಯಾಗಲಿದೆ ಎಂಬ ಭವಿಷ್ಯವಾಣಿ ಸ್ವಲ್ಪ ನೆಮ್ಮದಿ ತಂದಿದೆ.