ಮತ್ತೆ ಕರ್ನಾಟಕಕ್ಕೆ ಜಲ ಪ್ರಳಯ; ಜಗತ್ತು ಕಂಡರಿಯದ ವಾಯು ಆಘಾತ; ಕರುನಾಡಿಗೆ ಭೀತಿ ಹುಟ್ಟಿಸಿದ ಕೋಡಿ ಮಠದ ಶ್ರೀಗಳ ಭವಿಷ್ಯ!!

0
1311

ರಾಜ್ಯದಲ್ಲಿ ಈಗಾಗಲೇ ಬಂದಿರುವ ಪ್ರವಾಹ ಸಂಕಷ್ಟಕ್ಕೆ ಜನರ ಜೀವನ ಸುದಾರಿಸಲು ವರ್ಷಗಳೇ ಬೇಕಾಗುತ್ತೆ, ಆಗಿರುವ ಆಪಾರ ಹಾನಿಯಿಂದ ಜನರು ಜೀವವನ್ನು ಬದುಕಿಸಿಕೊಂಡು ಹೇಗೋ ಆಶ್ರಯ ಪಡೆಯುತ್ತಿದ್ದಾರೆ. ಇಂತಹ ಜನರಿಗೆ ಮತ್ತೊಂದು ಆಘಾತಕರ ಸುದ್ದಿಯನ್ನು ಕೋಡಿ ಮಠ ಶ್ರೀಗಳು ತಿಳಿಸಿದ್ದು, ಜನರಿಗೆ ಮತ್ತೆ ಪ್ರವಾಹದ ಭೀತಿ ಶುರುವಾಗಿದ್ದು, ಕೋಡಿಮಠದ ಶ್ರೀಗಳು ಈ ಜಲಕಂಟಕ ಇನ್ನೂ ಮುಂದುವರಿಯುತ್ತದೆ, ಇಡೀ ಜಗತ್ತು ಬೆಚ್ಚಿಬೀಳುವಂತಹ, ಹಿಂದೆಂದೂ ಕಂಡು ಕೇಳರಿಯದ ಆಘಾತವೊಂದು ಅಪ್ಪಳಿಸಲಿದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಮತ್ತೆ ಪ್ರವಾಹದ ಭವಿಷ್ಯ ನೀಡಿದ ಶ್ರೀಗಳು?

ಹೌದು ಕೆಲವು ದಿನಗಳ ಹಿಂದೆ ಹೆಚ್ಚು ಮಳೆಯಾಗಿ ಪ್ರವಾಹವಾಗುತ್ತೆ ಎಂದು ಹಲವರು ಭವಿಷ್ಯ ನುಡಿದಿದ್ದರು, ಈಗ ಅದೆಲ್ಲವೂ ನಿಜವಾಗಿದ್ದು, ಜನರು ಸ್ವಾಮಿಜಿಗಳ ಎಚ್ಚರಿಕೆಯನ್ನು ಪಾಲಿಸಬೇಕಿತ್ತು ಎಂದು ಮಾತುಗಳನ್ನು ಆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಕರುನಾಡಿನ ಜನರಿಗೆ ಆಘಾತ ಬರಲಿದ್ದು, ಈ ಜಲಕಂಟಕ ಇನ್ನೂ ಮುಂದುವರಿಯುತ್ತದೆ ಎಲ್ಲಕ್ಕಿಂತ ಹೆಚ್ಚಾಗಿ, ಇಡೀ ಜಗತ್ತು ಬೆಚ್ಚಿಬೀಳುವಂತಹ, ಹಿಂದೆಂದೂ ಕಂಡು ಕೇಳರಿಯದ ಆಘಾತವೊಂದು ಅಪ್ಪಳಿಸಲಿದೆ. ದೊಡ್ಡ ದೊಡ್ಡ ನಗರಗಳಿಗೆ ಅಪಾಯವಾಗಬಹುದು. ಎಂದು ಬಾಗಲಕೋಟೆಯ ಪ್ರವಾಹಪೀಡಿತ ಶಿವಯೋಗಿ ಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿ ಮಠದ ಸ್ವಾಮಿಗಳು ಹೇಳಿದ್ದಾರೆ.

3 ತಿಂಗಳವರೆಗೆ ಜಲ ಕಂಟಕ?

ಇದೆ ವೇಳೆ ಮಾತನಾಡಿದ ಸ್ವಾಮೀಜಿಗಳು ಮುಂದಿನ 3 ತಿಂಗಳವರೆಗೆ ಜಲ ಕಂಟಕ ಇದ್ದು, ಇದೇ ತಿಂಗಳಲ್ಲಿ ಮತ್ತೊಮ್ಮೆ ಭೀಕರ ಪ್ರವಾಹ ಬರುತ್ತದೆ. ಇನ್ನೆರಡು ತಿಂಗಳ ಬಳಿಕ ಬರುವ ಕಾರ್ತಿಕ ಮಾಸದವರೆಗೂ ಈ ಜಲಬಾಧೆ ಮುಂದುವರಿಯುತ್ತದೆ. ಈ ವರ್ಷ ಜಲ ಆಘಾತ, ಭೂ ಆಘಾತ ಹಾಗೂ ವಾಯು ಆಘಾತಗಳು ಸಂಭವಿಸುತ್ತವೆ. ಈಗ ಜಲ ಆಘಾತವಾಗುತ್ತಿದೆ. ಮುಂದಿನ ದಿನಗಳಲ್ಲಿ ಭೂ ಆಘಾತಗಳಾಗುತ್ತವೆ. ಭೂಮಿ ನಡುಗುವುದು, ಭೂಕುಸಿತವಾಗುವುದು ಮತ್ತು ದೊಡ್ಡ ದೊಡ್ಡ ನಗರಗಳಲ್ಲಿ ಕಟ್ಟಡಗಳು ಕುಸಿಯುವುದು ಸಂಭವಿಸುತ್ತವೆ. ಹಾಗೆಯೇ ಜಗತ್ತು ಕಂಡರಿಯದ ವಾಯು ಆಘಾತವೊಂದು ಆಗುವ ಲಕ್ಷಣ ಇದೆ ಎಂದು ಕೋಡಿ ಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಆದರೆ, ಯಾವ ರೀತಿಯ ವಾಯು ಆಘಾತ ಎಂಬುದನ್ನು ಅವರು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.

ಜನರಲ್ಲಿ ಭಕ್ತಿಭಾವ, ದೈವ ನಂಬಿಕೆ, ವಿಶ್ವಾಸಗಳು ಕಡಿಮೆಯಾಗಿವೆ. ಪ್ರಕೃತಿಯೇ ಈ ರೀತಿಯಲ್ಲಿ ಜನರನ್ನು ಎಚ್ಚರಿಸುತ್ತಿದೆ. ಧರ್ಮದ ದಾರಿ ತಪ್ಪುವ ಮನುಷ್ಯನಿಗೆ ದೈವರು ಒಂದೊಂದೇ ಸೂಚನೆ ಕೊಡುವಂತೆ ಈ ಪ್ರವಾಹವೂ ಒಂದು ಸೂಚನೆಯಾಗಿದೆ ಎಂದು ಶ್ರೀಗಳು ತಮ್ಮದೇ ವ್ಯಾಖ್ಯಾನ ನೀಡಿದರು. ಇನ್ನು, ಪ್ರವಾಹದಿಂದ ಶಿವಯೋಗಿ ಮಂದಿರಕ್ಕೆ ಹಾನಿಯಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಇಲ್ಲಿ ನೂರಾರು ಕೋಟಿ ರೂ ನಷ್ಟವಾಗಿದೆ. ಸರ್ಕಾರ ಮತ್ತು ಜನರು ಈ ಮಂದಿರಕ್ಕೆ ಸಹಾಯ ಮಾಡಲು ಮುಂದಾಗಬೇಕೆಂದು ಕರೆ ನೀಡಿದ್ದಾರೆ. ಈಗಾಗಲೇ ರಾಜ್ಯದ ಸುಮಾರು 17 ಜಿಲ್ಲೆಗಳಲ್ಲಿ ಜಲಪ್ರವಾಹ ಹಾಗೂ ಭೂಕುಸಿತ ಉಂಟಾಗಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆ ಶ್ರೀಗಳ ಭವಿಷ್ಯ ಜನರನ್ನು ಮತ್ತೆ ಆತಂಕ ಮೂಡಿಸಿದೆ.

Also read: ಪ್ರವಾಹದಿಂದ ಪಾರು ಮಾಡಿ ಜೀವ ಉಳಿಸಿದ ವೀರಯೋಧರಿಗೆ ರಾಖಿ ಕಟ್ಟಿ ಕಣ್ಣೀರಿನ ವಿದಾಯ ಹೇಳಿದ ಸಂತ್ರಸ್ತರು.!