ಅಮ್ಮನಿಗಾಗಿ ವರ ಬೇಕೆಂದು ಫೇಸ್ಬುಕ್-ನಲ್ಲಿ ಮಗನ ಪೋಸ್ಟ್; ಒಂಟಿಯಾಗಿರುವ ತಂದೆ-ತಾಯಿಗಳಿಗೆ ಮಕ್ಕಳೇ ಮದುವೆ ಮಾಡುತ್ತಿರುವುದಕ್ಕೆ ನೀವೇನ್ ಅಂತಿರಾ.?

0
386

ಮಕ್ಕಳಿಗೆ ವರ ಅಥವಾ ವದು ಹುಡುಕಿ ಮದುವೆ ಮಾಡುವ ಸಮಯದಲ್ಲಿ ತಂದೆ-ತಾಯಿಗಳಿಗೆ ಮಕ್ಕಳೇ ಮದುವೆ ಮಾಡುವುದು ಹೆಚ್ಚಾಗುತ್ತಿದ್ದು ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಂದನ್ ನಗರದ ಫ್ರೆಂಚ್ ಕಾಲೋನಿಯ ನಿವಾಸಿ ಗೌರವ್ ತಾಯಿಗಾಗಿ ಸೂಕ್ತ ವರನನ್ನು ಹುಡುಕುತ್ತಿದ್ದಾರೆ. ಈ ಕುರಿತು ಅಮ್ಮನಿಗೆ ವರ ಬೇಕಿದೆ ಎಂದು ಫೇಸ್‍ಬುಕ್ ಪೋಸ್ಟ್ ಮಾಡಿದ್ದಾರೆ. ಯುವಕನ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಏಕೆಂದರೆ ತಾವು ಮದುವೆಯಾಗಿವ ವಯಸ್ಸಿನಲ್ಲಿ ತಾಯಿಯಾ ಭಾವನೆಯ ಬಗ್ಗೆ ಚಿಂತನೆ ಮಾಡುವುದು ಒಂದು ಉತ್ತಮ ಕೆಲಸವೆಂದು ಹಲವು ಪ್ರತಿಕ್ರಿಯೇ ನೀಡಿದ್ದಾರೆ.

ಹೌದು ಕೆಲವೇ ದಿನಗಳ ಹಿಂದೆ ಆಸ್ತಾ ವರ್ಮಾ ಎಂಬ ಕಾನೂನು ವಿದ್ಯಾರ್ಥಿನಿ ತನ್ನ 50 ವರ್ಷದ ತಾಯಿಗೆ ಸೂಕ್ತ ವರ ಬೇಕು ಎಂದು ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದರು. ತನ್ನ ತಾಯಿಗೊಂದು ಸೂಕ್ತ ಸಂಗಾತಿ ಹುಡುಕುವ ಆಸ್ತಾರ ಪ್ರಯತ್ನವನ್ನು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದರು ಅದಕ್ಕಾಗಿ ಈ ಆಸ್ತಾ ಅದೆಷ್ಟೋ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ. ಆದಾದ ನಂತರ ಮತ್ತೊಬ್ಬ ಯುವತಿ ತನ್ನ 56 ವರ್ಷದ ತಾಯಿಗೆ ಸೂಕ್ತ ವರ ಬೇಕು ಎಂದು ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದರು ಮೋಹಿನಿ ಎಂಬ ಈ ಯುವತಿ ತನ್ನ ತಾಯಿ ಜೊತೆ ಸೆಲ್ಫಿ ಕ್ಲಿಕ್ಕಿಸಿ ಆ ಫೋಟೋವನ್ನು ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿ ತನ್ನ ತಾಯಿಗೆ ಸೂಕ್ತ ವರ ಬೇಕಾಗಿದೆ ಎಂದು ಬರೆದುಕೊಂಡಿದ್ದರು.

ತಾಯಿಗೆ ಒಳ್ಳೆಯ ಸಂಗಾತಿ ಮತ್ತು ಮಕ್ಕಳಿಗೆ ತಂದೆಯ ಸ್ಥಾನವನ್ನು ತುಂಬುವವರು ಬೇಕು ಎಂದಿರುವ ಮೋಹಿನಿ, ತಾನು ಆಸ್ತಾ ವರ್ಮಾರಿಂದ ಸ್ಫೂರ್ತಿ ಪಡೆದಿದ್ದಾಗಿಯೂ ಬರೆದುಕೊಂಡಿದ್ದಾರೆ. ಅಂದು ಆಸ್ತಾರ ಟ್ವೀಟ್‌ಗೆ ನೆಟ್ಟಿಗರು ಯಾವ ರೀತಿ ಧನಾತ್ಮಕವಾಗಿ ಪ್ರತಿಕ್ರಿಯಿಸಿದರೂ ಮೋಹಿನಿ ಅವರ ಪ್ರಯತ್ನವನ್ನೂ ಜನ ಕೊಂಡಾಡಿದ್ದಾರೆ.

Also read: ಭಾರತೀಯ ವಾಯುಪಡೆಯಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ಮಗನ ನೆನಪಿಗಾಗಿ 350 ಸ್ಲಂ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ದಂಪತಿಗಳು.!

ಗೌರವ್ ತಾಯಿಗಾಗಿ ಸೂಕ್ತ ವರನನ್ನು ಹುಡುಕುತ್ತಿದ್ದಾರೆ. ಐದು ವರ್ಷಗಳ ಹಿಂದೆ ನನ್ನ ತಂದೆ ವಿಧಿವಶರಾಗಿದ್ದು, 45 ವರ್ಷದ ನನ್ನ ಅಮ್ಮ ಮನೆಯಲ್ಲಿ ಏಕಾಂಗಿ ಆಗಿರುತ್ತಾರೆ. ಮದ್ಯ ಸೇವಿಸದ ಮತ್ತು ಶುದ್ಧ ಸಸ್ಯಹಾರಿಯಾಗಿರುವ ವರ ಬೇಕಿದೆ ಎಂದು ಗೌರವ್ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದು. ನನ್ನ ತಂದೆ ಕುಲ್ಟಿಯಲ್ಲಿ ನೌಕರಿ ಮಾಡುತ್ತಿದ್ದರು. 2014ರಲ್ಲಿ ತಂದೆಯ ನಿಧನದ ಬಳಿಕ ಅಮ್ಮ ಮನೆಯಲ್ಲಿ ಏಕಾಂಗಿಯಾಗಿದ್ದಾರೆ ಎಂಬುವುದು ನನ್ನ ಅಭಿಪ್ರಾಯ. ನಾನು ಬೆಳಗ್ಗೆ ಏಳು ಗಂಟೆಗೆ ಕೆಲಸಕ್ಕಾಗಿ ಮನೆಯಿಂದ ಹೋದರೆ ರಾತ್ರಿ ಹಿಂದಿರುಗುತ್ತೇನೆ. ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಓರ್ವ ಗೆಳೆಯನ ಅವಶ್ಯಕತೆ ಇರುತ್ತದೆ.

Also read: ಮಗು ಸತ್ತ ದುಃಖದಲ್ಲಿ ಮಗುವಿನ ಶವ ಹೂಳಲು ಹೋದ ತಂದೆಗೆ ಮೂರು ಅಡಿ ಗುಂಡಿ ತೆಗೆದ ನಂತರ ಸಿಕ್ತು ಮತ್ತೊಂದು ಜೀವಂತ ಮಗು.!

ಅದಕ್ಕಾಗಿ ಮದುವೆ ಬಗ್ಗೆ ಅಮ್ಮನ ಜೊತೆ ಮಾತನಾಡಿದ್ದೇನೆ. ಅಮ್ಮ ಸಹ ಈ ಕುರಿತು ಯೋಚನೆ ಮಾಡುತ್ತಿದ್ದಾರೆ. ಏಕಾಂಗಿಯಾಗಿರುವ ಅಮ್ಮನಿಗೆ ಸಂಗಾತಿ ಹುಡುಕುವುದು ನಮ್ಮ ಕರ್ತವ್ಯ. ಹಾಗಾಗಿ ಪೋಸ್ಟ್ ಮಾಡಿದ್ದೇನೆ ಜನರು ಬೆನ್ನ ಹಿಂದೆ ನೂರು ಮಾತನಾಡಬಹುದು. ಯಾರಿಗೂ ನನ್ನ ಮುಂದೆ ಮಾತನಾಡಲ್ಲ. ಸಮಾಜದಲ್ಲಿ ಮಾಡುವ ಪ್ರತಿಯೊಂದು ಕೆಲಸಗಳಿಗೆ ಕೊಂಕು ಮಾತನಾಡುವ ಜನ ಇರುತ್ತಾರೆ. ಹಾಗಾಗಿ ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ಕೆಲವರು ಪ್ರಚಾರ ಪಡೆದುಕೊಳ್ಳಲು ಈ ರೀತಿಯ ಪೋಸ್ಟ್ ಮಾಡಿದ್ದೇನೆ ಎಂದು ಮಾತನಾಡಿಕೊಂಡಿದ್ದಾರೆ. ಮುಂದೆ ಮಾತನಾಡದೇ ಇರುವ ಜನರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕೆಲವರು ಸಮಾಜಕ್ಕೆ ಹೆದರಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ ಎಂದು ಗೌರವ್ ಬೇಸರ ವ್ಯಕ್ತಪಡಿಸುತ್ತಾರೆ. ಇವರ ಈ ಪೋಸ್ಟ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.