ಒಮ್ಮೆಯಾದರು ನೋಡಲೆಬೇಕಾದ ಪುರಾತನ ಕಾಲದ ಕೊನಾರ್ಕ್ ಸೂರ್ಯ ದೇವಾಲಯ

0
2587

Kannada News | Karnataka Temple History

ಪೂರ್ವ ಗಂಗಾ ಸಾಮ್ರಾಜ್ಯವು ನಿರ್ಮಿಸಿದ ಕೊನಾರ್ಕ್‌ ಸೂರ್ಯ ದೇವಾಲಯವು UNESCO ವಿಶ್ವ ಪರಂಪರೆಯ ತಾಣವಾಗಿದೆ.

ಪುರಾತನ ಕಾಲದಿಂದಲೂ ಒಡಿಶಾ ರಾಜ್ಯವು ಆಧ್ಯಾತ್ಮಿಕತೆ, ಧಾರ್ಮಿಕತೆ, ಪಾರಮಾರ್ಥಿಕತೆ, ಸಂಸ್ಕೃತಿ, ಕಲೆ ಮತ್ತು ಪ್ರಕೃತಿಯ ಸೌಂದರ್ಯದಲ್ಲಿ ಆಸಕ್ತಿಯುಳ್ಳವರಿಗೆ ಇಷ್ಟವಾದ ತಾಣವಾಗಿದೆ.

ಪುರಾತನ ಮತ್ತು ಮಧ್ಯಯುಗದ ವಾಸ್ತುಶಿಲ್ಪ, ಸುಂದರ ಕಡಲ ತೀರಗಳು, ಶಾಸ್ತ್ರೀಯ ಮತ್ತು ಜನಾಂಗೀಯ ನೃತ್ಯ ರೂಪಗಳು ಹಾಗೂ ವಿವಿಧ ಉತ್ಸವಗಳು-ಹಬ್ಬಗಳು ಸೇರಿದಂತೆ ಒಡಿಶಾಕ್ಕೆ ತನ್ನದೇ ಆದ ಹಲವು ಪ್ರಮುಖ ಲಕ್ಷಣಗಳಿವೆ.  ಒಡಿಶಾ ಬೌದ್ಧ ಧರ್ಮವನ್ನು ಉಳಿಸಿ, ಬೆಳೆಸಿಕೊಂಡಿದೆ.  ಹಲವು ಶತಮಾನಗಳಿಂದಲೂ ಉಳಿದುಕೊಂಡು ಬಂದಿರುವ ಬೃಹದಾಕಾರದ ರಾಜಶಾಸನ, ಶಿಲಾಶಾಸನ ಬಂಡೆಗಳು, ದಯಾ ನದಿಯ ತೀರದಲ್ಲಿ ತಲೆ ಎತ್ತಿನಿಂತಿವೆ.  ಬಿರೂಪಾ ನದಿಯ ದಂಡೆಯಲ್ಲಿರುವ ಉದಯಗಿರಿ ಮತ್ತು ಖಂಡಗಿರಿ ಗುಹೆಗಳಲ್ಲಿ

ಬೌದ್ಧ ಧರ್ಮದ ಪಂಜಿನ ಜ್ವಾಲೆಯು ಈಗಲೂ ಉರಿಯುತ್ತಿದೆ. ಹೆಸರಾಂತ ಇತಿಹಾಸದ ಅಮೂಲ್ಯ ತುಣುಕುಗಳನ್ನು ಇಲ್ಲಿ ನೋಡಬಹುದಾಗಿದೆ: ಸ್ತೂಪಗಳು, ಬಂಡೆಯಿಂದ ನಿರ್ಮಿತ ಗುಹೆಗಳು, ಬಂಡೆಯ ಮೇಲಿನ ಶಿಲಾಶಾಸನಗಳು, ಅಗೆದು ಹೊರತೆಗೆಯಲಾದ ಮಠಗಳು,ವಿರಕ್ತ, ವೈರಾಗ್ಯದ ಕೇಂದ್ರಗಳು, ವಿಹಾರಗಳು, ಚೈತ್ಯಗಳು ಮತ್ತು ಪವಿತ್ರವಾದ ಅವಶೇಷಗಳನ್ನು ಕಾಯ್ದಿರಿಸಿದ ಸಣ್ಣ ಪೆಟ್ಟಿಗೆಗಳು, ಹಾಗೂ ಅಶೋಕ ಚಕ್ರವರ್ತಿಯ ಶಿಲಾಶಾಸಗಳು ಒಡಿಶಾದಲ್ಲಿವೆ. ಸಮರ್ಪಕವಾಗಿ ರಕ್ಷಿಸಲಾದ ಹಿಂದೂ ದೇವಾಲಯಗಳು, ಅದರಲ್ಲೂ ವಿಶಿಷ್ಟವಾಗಿ ಕೊನಾರ್ಕ್‌ ಸೂರ್ಯ ದೇವಾಲಯಕ್ಕೆ ಒಡಿಶಾ ಪ್ರಸಿದ್ಧವಾಗಿದೆ.

ರಾಜ್ಯದ ಬಹುಸಂಸ್ಕೃತೀಯ ಮತ್ತು ಬಹುಭಾಷೀಯ ಲಕ್ಷಣಕ್ಕೆ ಕೊಡುಗೆ ನೀಡಿದ ವಿವಿಧ ಬುಡಕಟ್ಟು ಜನಾಂಗಗಳಿಗೆ ಒಡಿಶಾ ಮೂಲವಾಸಸ್ಥಾನವಾಗಿದೆ. ಅವರ ಕರಕುಶಲ ಕಲೆಗಳು, ಕೈಕಸಬುದಾರಿಕೆ ವಿವಿಧ ನೃತ್ಯರೂಪಗಳು, ಅರಣ್ಯ ಉತ್ಪನ್ನಗಳು ಮತ್ತು ಅಪೂರ್ವ ಜೀವನಶೈಲಿ, ಜೊತೆಗೆ ಗಿಡಮೂಲಿಕೆಗಳ ಮೂಲಕ ಅಸ್ವಸ್ಥತೆ ಗುಣಪಡಿಸುವ ಅವರ ಪದ್ಧತಿಗಳು ವಿಶ್ವದ ಗಮನ ಸೆಳೆದಿವೆ.

Also Read: ಕಲಶ ಪೂಜೆಯಲ್ಲಿ ವೀಳ್ಯದೆಲೆ ಇಟ್ಟು ಪೂಜೆ ಮಾಡುವ ಹಿಂದಿನ ವೈಜ್ಞಾನಿಕ ಕಾರಣ