ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಆಯ್ಕೆಯಾದರು ಅಧಿಕೃತ ಘೋಷಣೆಗೆ ವಿಳಂಬ ಮಾಡುತ್ತಿರುವುದು ಯಾಕೇ?

0
219

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕನಕಪುರ ಶಾಸಕ ಡಿಕೆ ಶಿವಕುಮಾರ್​ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಈ ಕುರಿತು ಇಂದು ಸಂಜೆ ಅಥವಾ ನಾಳೆಯೊಳಗೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಎನ್ನುವ ಮಾಹಿತಿ ಇತ್ತು ಆದರೆ ಇನ್ನೂ ಯಾಕೇ ಘೋಷಣೆ ಆಗಿಲ್ಲ ಎನ್ನುವುದು ಹಲವರ ಅನುಮಾನ ಮೂಡಿ ಮತ್ತೆ ಏನಾದರು ಬದಲಾವಣೆ ಇದ್ದೀಯಾ ಎನ್ನುವ ಪ್ರಶ್ನೆಗಳು ಮೂಡಿವೆ. ಈ ಎಲ್ಲ ಪ್ರಶ್ನೆಗಳಿಗೆ ಮಾಹಿತಿಯಂತೆ, ಭಾನುವಾರ ಅಥವಾ ಸೋಮವಾರ ಅಧಿಕೃತ ಘೋಷಣೆಯಾಗುವ ಸಾಧ್ಯತೆಗಳಿದೆ ಎನ್ನಲಾಗಿದೆ.

ಹೌದು ಕಾಂಗ್ರೆಸ್ ಮೂಲಗಳು ಹೇಳಿದಂತೆ ಡಿ.ಕೆ. ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟ ಎನ್ನಲಾಗಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಂತಿಮ ಪ್ರಕಟಣೆಗೆ ತಡೆ
ಹಿಡಿದಿದ್ದು, ಅಧ್ಯಕ್ಷರ ನೇಮಕದ ಫೈಲ್ ತಮ್ಮ ಕಚೇರಿಯಲ್ಲೇ ಇರಿಸಿಕೊಂಡಿದ್ದಾರೆ. ಬಹುತೇಕ ಹೆಸರುಗಳು ಅಂತಿಮವಾದರೂ ಅಧಿಕೃತ ಘೋಷಣೆ ಮಾಡದಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ನಡುವೆ ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಕೇರಳಕ್ಕೆ ತೆರಳಿದ್ದು, ಎಐಸಿಸಿಯಿಂದ ಅಂತಿಮ ಪ್ರಕಟಣೆ ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಇಂದು ಸೋನಿಯಾ ಗಾಂಧಿ ಅಂತಿಮ ಪಟ್ಟಿಗೆ ಒಪ್ಪಿಗೆ ನೀಡಿದರೂ ಅದಕ್ಕೆ ಪ್ರಧಾನ ಕಾರ್ಯದರ್ಶಿಯಾಗಿರುವ ಕೆ.ಸಿ ವೇಣುಗೋಪಾಲ್ ಸಹಿ ಕಡ್ಡಾಯವಾಗಿದೆ.

ಅದರಂತೆ ಕೇರಳದಲ್ಲಿರುವ ವೇಣುಗೋಪಾಲ್ ಭಾನುವಾರ ವಾಪಸ್ ಆಗಲಿದ್ದಾರೆ. ಕೇರಳದಿಂದ ವಾಪಸ್ ಆದ ಬಳಿಕವಷ್ಟೇ ಸೋನಿಯಾ ಗಾಂಧಿ ಮಾತುಕತೆ ನಡೆಸಿದ ಬಳಿಕ ಅಂತಿಮ ಪಟ್ಟಿ ಸಹಿ ಹಾಕಿ ಘೋಷಿಸುವ ಸಾಧ್ಯತೆ ಇದೆ. ಆದರೆ ಇದಕ್ಕೂ ಮೊದಲು ಕೆಪಿಸಿಸಿ ಗಾದಿಗಾಗಿ ಡಿಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಎರಡು ಬಣಗಳು ಮೂಡಿದ್ದರಿಂದ ಯಾರಿಗೆ ಸ್ಥಾನ ನೀಡಬೇಕು ಎಂಬ ಕುರಿತು ಹೈ ಕಮಾಂಡ್​ ದೀರ್ಘ ಚರ್ಚೆ ನಡೆಸಿತ್ತು. ಡಿಕೆ ಶಿವಕುಮಾರ್​ ಸಂಘಟನಾ ಚತುರರಾಗಿದ್ದು, ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೇ ಎಲ್ಲಾ ಸಂದರ್ಭದಲ್ಲಿಯೂ ಪಕ್ಷವನ್ನು ಮುನ್ನಡೆಸಿದ ಕೀರ್ತಿ ಕೂಡ ಅವರಿಗೆ ಇದೆ. ಈ ಹಿನ್ನೆಲೆಯಲ್ಲಿ ಅವರಿಗೆ ಈ ಹುದ್ದೆ ನೀಡಲು ಹೈ ಕಮಾಂಡ್​ ನಿರ್ಧರಿಸಿದೆ ಎನ್ನಲಾಗಿದೆ.

ಡಿಕೆ ಶಿವಕುಮಾರ್​ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ, ಪಕ್ಷದಲ್ಲಿ ತಮ್ಮ ವರ್ಚಸ್ಸು ಕಡಿಮೆಯಾಗಲಿದೆ ಎಂದು ಸಿದ್ದರಾಮಯ್ಯ, ಡಿಕೆಶಿ ಬದಲು ಲಿಂಗಾಯತ ಹಾಗೂ ಉತ್ತರ ಕರ್ನಾಟಕ ವ್ಯಕ್ತಿಯನ್ನು ಈ ಹುದ್ದೆಗೆ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದ್ದರು. ರಾಜ್ಯ ಕಾಂಗ್ರೆಸ್​ನಲ್ಲಿ ಡಿಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಎರಡು ಬಣಗಳು ಮೂಡಿದ್ದರಿಂದ ಯಾರಿಗೆ ಸ್ಥಾನ ನೀಡಬೇಕು ಎಂಬ ಕುರಿತು ಹೈ ಕಮಾಂಡ್​ ದೀರ್ಘ ಚರ್ಚೆ ನಡೆಸಿತ್ತು. ಡಿಕೆ ಶಿವಕುಮಾರ್​ ಸಂಘಟನಾ ಚತುರರಾಗಿದ್ದು, ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೇ ಎಲ್ಲಾ ಸಂದರ್ಭದಲ್ಲಿಯೂ ಪಕ್ಷವನ್ನು ಮುನ್ನಡೆಸಿದ ಕೀರ್ತಿ ಕೂಡ ಅವರಿಗೆ ಇದೆ. ಈ ಹಿನ್ನೆಲೆಯಲ್ಲಿ ಅವರಿಗೆ ಈ ಹುದ್ದೆ ನೀಡಲು ಹೈ ಕಮಾಂಡ್​ ನಿರ್ಧರಿಸಿದೆ ಎನ್ನಲಾಗಿದೆ.