ಕೆಪಿಸಿಎಲ್‌ ಉದ್ಯೋಗಾವಕಾಶ: 486 ಹುದ್ದೆಗಳಿಗೆ ಅರ್ಜಿ ಆಹ್ವಾನ

0
1400

ನಿರೀಕ್ಷೆಯಂತೆ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತದಲ್ಲಿ ಎಂಜಿನಿಯರ್‌, ಜೂನಿಯರ್‌ ಎಂಜಿನಿಯರ್‌ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದೆ.

source: govtjobsdata.com

ಒಟ್ಟು ಹುದ್ದೆಗಳ ಸಂಖ್ಯೆ : 486

ಅರ್ಜಿ ಸಲ್ಲಿಸಲು ಕೊನೆ ದಿನ: ಆಗಸ್ಟ್‌ 18, 2017

ಹೆಚ್ಚಿನ ಮಾಹಿತಿ ಪಡೆಯಲು: www.karnatakapower.com

ಹುದ್ದೆಗಳ ವಿವರ:

  • ಸಿವಿಲ್‌, ಎಲೆಕ್ಟ್ರಿಕಲ್‌, ಮೆಕ್ಯಾನಿಕಲ್‌ ಮತ್ತು ಇನ್‌ಸ್ಟ್ರುಮೆಂಟೇಶನ್‌ ವಿಭಾಗಗಳಲ್ಲಿ ಒಟ್ಟು 142 ಅಸಿಸ್ಟೆಂಟ್‌ ಎಂಜಿನಿಯರ್‌ ಹುದ್ದೆಗಳು.
  • ಸಿವಿಲ್‌, ಎಲೆಕ್ಟ್ರಿಕಲ್‌ ಹಾಗೂ ಮೆಕ್ಯಾನಿಕಲ್‌ ವಿಭಾಗದಲ್ಲಿ ಒಟ್ಟು 296 ಜೂನಿಯರ್‌ ಎಂಜಿನಿಯರ್‌ ಹುದ್ದೆಗಳು.
  • 8 ಕೆಮಿಸ್ಟ್‌ ಮತ್ತು 40 ಕೆಮಿಕಲ್‌ ಸೂಪರ್‌ವೈಸರ್‌ಹುದ್ದೆಗಳು.
  • ಈ ಬಾರಿಯ ನೇಮಕದಲ್ಲಿ ಒಟ್ಟು ಹುದ್ದೆಗಳ ಪೈಕಿ 348 ಹುದ್ದೆಗಳನ್ನು ಹೈದರಾಬಾದ್‌-ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.

ಅರ್ಹತೆಗಳೇನು?

ಆಯಾ ವಿಭಾಗಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಬಿಇ ಪದವಿ ಪಡೆದಿರುವ ಮತ್ತು ಎಎಂಐಇ (ಭಾರತ) ನಡೆಸುವ ಎಲೆಕ್ಟ್ರಿಕಲ್‌/ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ವಿಭಾಗದ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿರುವ ಅಭ್ಯರ್ಥಿಗಳು ಅಸಿಸ್ಟೆಂಟ್‌ ಎಂಜಿನಿಯರ್‌ ಹುದ್ದೆಗಳಿಗೂ ಮತ್ತು ಎಂಜಿನಿಯರಿಂಗ್‌ ಡಿಪ್ಲೊಮಾ ಪೂರ್ಣಗೊಳಿಸಿದವರು ಜೂನಿಯರ್‌ ಎಂಜಿನಿಯರ್‌ ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ರಸಾಯನಶಾಸ್ತ್ರ ಅಥವಾ ಅನ್ವಯಿಕ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಕೆಮಿಸ್ಟ್‌ ಹುದ್ದೆಗಳಿಗೂ ಮತ್ತು ಇದೇ ವಿಷಯಗಳಲ್ಲಿ ಪದವಿ ಪಡೆದವರು ಸೂಪರ್‌ವೈಸರ್‌ ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ/ಶುಲ್ಕ:

ಅಭ್ಯರ್ಥಿಗಳ ವಯೋಮಿತಿ 18ರಿಂದ 35 ವರ್ಷದೊಳಗಿರಬೇಕು. ಸರ್ಕಾರಿ ನಿಯಮಾನುಸಾರ ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆ. ಅರ್ಜಿ ಶುಲ್ಕ 500 ರೂ. ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳು 250 ರೂ. ಶುಲ್ಕ ಪಾವತಿಸಬೇಕು.

ಗಣಕೀಕೃತ ಅಂಚೆ ಕಚೇರಿ ಮೂಲಕ ಆಗಸ್ಟ್‌ 22ರೊಳಗೆ ಶುಲ್ಕ ಪಾವತಿಸಲು ಸೂಚಿಸಲಾಗಿದೆ.

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯಾ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಮೈಸೂರು, ಶಿವಮೊಗ್ಗ, ಕಲಬುರಗಿ, ಬಳ್ಳಾರಿ ಮತ್ತು ಬೆಳಗಾವಿ