ಸರ್ಕಾರದಿಂದಲೇ ಕನ್ನಡಿಗರಿಗೆ ಮೋಸ, ವಿದ್ಯುತ್ ನಿಗಮದಲ್ಲಿ ಅನ್ಯ ಭಾಷಿಗರನ್ನು ಆಯ್ಕೆ ಮಾಡಿದ KPTCL…!

0
1134

ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಿವೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ, ರಾಜ್ಯ ಸರ್ಕಾರದ ಉದ್ಯೋಗಗಳಲ್ಲಿಯೂ ಅನ್ಯ ರಾಜ್ಯದವರಿಗೆ ಅವಕಾಶ ನೀಡುವುದು ಎಲ್ಲಾದರೂ ಕೇಳಿದ್ದೀರಾ? ಹೌದು ಇದೆ ನಡೆದಿದೆ, ಯಾವ ಇಲಾಖೆಯಲ್ಲಿ ಗೊತ್ತೇ.

ರಾಜ್ಯದ ಜನರಿಗೆಂದೇ ಇರುವ ಹುದ್ದೆಗಳಲ್ಲಿ, ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ ಹಾಗೂ ನಾನಾ ಎಸ್ಕಾಂ-ಗಳ ಸಹಾಯಕ ಕಾರ್ಯನಿರ್ವಾಹಕ (ವಿದ್ಯುತ್‌) ಹಾಗೂ ಸಹಾಯಕ ಎಂಜಿನಿಯರ್‌ (ವಿದ್ಯುತ್‌/ ಸಿವಿಲ್‌) ನೇಮಕಾತಿಯಲ್ಲಿ ಹೊರ ರಾಜ್ಯದ ಸುಮಾರು 30 ಅಭ್ಯರ್ಥಿಗಳಿಗೆ ಅವಕಾಶ ನೀಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಇದರಿಂದ ನೊಂದ ರಾಜ್ಯದ ಅಭ್ಯರ್ಥಿಗಳು ನ್ಯಾಯಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೊರೆ ಹೋಗಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಿದ ಪ್ರಾಧಿಕಾರಕ್ಕೆ ಕನ್ನಡ ಭಾಷಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಗುಣಮಟ್ಟ SSLC ಪ್ರಥಮ ಭಾಷೆ ಕನ್ನಡದ ಗುಣಮಟ್ಟದ ಬದಲಿಗೆ ಪ್ರಾಥಮಿಕ ಹಂತದ ಗುಣಮಟ್ಟದ್ದಾಗಿತ್ತು ಎಂಬುದು ತಿಳಿದುಬಂದಿದೆ.

ಅದಕ್ಕೆ, ಈ ಮೇಲಿನ ಹುದ್ದೆಗಳ ನೇಮಕಕ್ಕೆ ಹೊರಡಿಸಿರುವ ತಾತ್ಕಾಲಿಕ ಪಟ್ಟಿಯಲ್ಲಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ನೇಮಕಾತಿಗೊಂಡಿರುವ ಕನ್ನಡೇತರ ಅಭ್ಯರ್ಥಿಗಳ ಪಟ್ಟಿಯನ್ನು ತಡೆಹಿಡಿದು ಉಳಿದವರ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.

KPTCL ಹಾಗೂ ನಾನಾ ಎಸ್ಕಾಂ-ಗಳಿಗೆ ಸೇರಿ ಒಟ್ಟು 600 ಹುದ್ದೆಗಳ ಭರ್ತಿಗಾಗಿ 2016ರ ಡಿ. 3ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಲಾಗಿತ್ತು. ಇನ್ನು ಕನ್ನಡ ಭಾಷೆಗೆ ನಡೆಸಿದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕಳಪೆಯಾಗಿದೆ, B.E ಮತ್ತು B.TECH ಬೇರೆ-ಬೇರೆ ಎಂದು ಖುದ್ದು AICTE ಹೇಳಿದ್ದರು ನಿಗಮ ಈ ರೀತಿ ಮಾಡಿರುವುದು ಸರಿಯಲ್ಲ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಅಲ್ಲದೆ, 2015ರ ಆಗಸ್ಟ್‌ 28ರಂದು KPTCL ಹೊರಡಿಸಿದ ಅಧಿಸೂಚನೆಯಲ್ಲಿ ಸಹಾಯಕ ಎಂಜಿನಿಯರ್‌ ಹುದ್ದೆಗೆ B.E (ಎಲೆಕ್ಟ್ರಿಕಲ್‌/ E&C) ಪದವಿಯನ್ನು ಮಾತ್ರ ಪರಿಗಣಿಸಲಾಗುವುದು ಎಂದು ಹೇಳಿ ತಾನೇ ನಿಯಮ ಉಲ್ಲಂಘಿಸಿರುವುದು ಎಷ್ಟರ ಮಟ್ಟಿಗೆ ನ್ಯಾಯ ಎಂಬುದು ಅಭ್ಯರ್ಥಿಗಳ ಪ್ರಶ್ನೆ.

ಆಧಾರ-ಕಾರ್ಡ್ನಲ್ಲಿ ಅಭ್ಯರ್ಥಿಗಳ ವಿಳಾಸ ಪರಿಶೀಲಿಸಿದಾಗ ಕನ್ನಡ ಕುಟುಂಬಗಳೇ ಇಲ್ಲದ ತೆಲಂಗಾಣ/ ಆಂಧ್ರದ ತಾಲೂಕು ಕೇಂದ್ರಗಳಿಗೆ ಸೇರಿದವರಾಗಿದ್ದಾರೆ. 150 ಅಂಕಗಳ ಕನ್ನಡ ಭಾಷಾ ಪರೀಕ್ಷೆಯಲ್ಲಿ 50ಕ್ಕೂ ಹೆಚ್ಚು ಪ್ರಶ್ನೆಗಳನ್ನು ಅತ್ಯಂತ ಸುಲಭವಾಗಿದ್ದವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ತಿಳಿಸಿದ್ದಾರೆ.

Also read: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗ ಅವಕಾಶ.! ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ..