ಜ್ಯೋತಿಷ್ಯದ ಪ್ರಕಾರ ಹಳೆ ಮನೆಗೆ ವಾಪಸ್ ಬಂದ ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರಾ..!

0
649

ಹೌದು ಜ್ಯೋತಿಷ್ಯದ ಪ್ರಕಾರ ಮತ್ತೆ ತಮ್ಮ ಹಳೆ ಮನೆಗೆ ಕುಮಾರಸ್ವಾಮಿ ಹೋಗಿದ್ದಾರೆ. ಇದಕ್ಕೆ ಕಾರಣ ಜ್ಯೋತಿಷ್ಯದ ಮೇಲೆ ಅಪಾರ ನಂಬಿಕೆ ಇರುವ ಕಾರಣ ಕುಮಾರಸ್ವಾಮಿ ಮತ್ತೆ ತಮ್ಮ ಅದೃಷ್ಟದ ಮನೆಗೆ ವಾಪಸ್ ಬಂದಿದ್ದಾರೆ.

ಜೆಪಿ ನಗರದ ಮನೆಯಲ್ಲಿ ವಾಸ್ತು ಸರಿ ಇಲ್ಲ ಅಂತಾ ಬದಲಾಯಿಸೋಕೆ ಮುಂದಾಗಿದ್ರು. ಒಮ್ಮೆ ಮನೆ ಮಾರಾಟಕ್ಕೂ ಚಿಂತನೆ ಮಾಡಿದ್ರು. ಆದ್ರೆ ಮನೆ ಖಾಲಿ ಮಾಡುವಾಗ ಕರಿನಾಗರ ಹಾವು ಕಾಣಿಸಿಕೊಂಡಿತ್ತು. ಆಗ ವಾಸ್ತುದೋಷ ಸರಿಪಡಿಸಿ ಇದೇ ಮನೆಯಲ್ಲಿ ವಾಸಿಸಲು ಜ್ಯೋತಿಷಿಗಳು ಸಲಹೆ ನೀಡಿದ್ರು.

ಈಗ ಮನೆ ರಿನೋವೇಶನ್ ಮಾಡಿಸಿ, ಈಗ ಮತ್ತೆ ಗೃಹ ಪ್ರವೇಶ ಮಾಡಿದ್ದಾರೆ. ಕಳೆದ ಎರಡೂವರೆ ವರ್ಷದಿಂದ ಮನೆಯನ್ನ ನವೀಕರಣ ಮಾಡಲಾಗುತ್ತಿತ್ತು. ಇಂದು ಮುಂಜಾನೆಯಿಂದ ವಿಶೇಷ ಪೂಜೆ ಹೋಮಗಳು ನಡೀತಿವೆ. 2006 ರಲ್ಲಿ ಸಿಎಂ ಆಗಿದ್ದಾಗ ಇದೇ ಮನೆಯಲ್ಲಿ ಎಚ್‍ಡಿಕೆ ವಾಸವಿದ್ದರು.

ಕುಮಾರಸ್ವಾಮಿ ಮತ್ತೆ ಈ ಮನೆಗೆ ಬಂದಿರುವುದು ಹಲವು ವಿಚಾರಗಳ ಚರ್ಚೆಗೆ ಕಾರಣವಾಗಿದೆ. ಅಂದು ಸಿಎಂ ಆಗಿದ್ದು ಇದೆ ಮನೆಯಲ್ಲಿ ಮತ್ತೆ ಈಗ ಅದೇ ಮನೆಗೆ ಕುಮಾರಸ್ವಾಮಿ ವಾಪಸ್ ಬಂದಿದ್ದಾರೆ. ಮತ್ತೊಮ್ಮೆ ಕುಮಾರಸ್ವಾಮಿ ರಾಜ್ಯದ ಸಿಎಂ ಆಗಬಹುದು ಅನ್ನೋದು ಅವರ ಅಭಿಮಾನಿಗಳ ಮಾತಾಗಿದೆ.