ಸಿಕ್ಕಾಪಟ್ಟೆ ಬಾಯಿರಿಕೆಯಾಗಿದ್ದಾಗ , ಸುಸ್ತು ಶಮನವಾಗಲು ಲಾವಂಚದ ಶರಬತ್ತು ಮಾಡ್ಕೊಂಡು ಕುಡೀರಿ…

0
1703

ಲಾವಂಚ ಹುಲ್ಲಿನ ಜಾತಿಗೆ ಸೇರಿದ, ದಪ್ಪ ದರ್ಬೆಯಂತಿರುವ ಬಹುವಾರ್ಷಿಕ ಸಸ್ಯ. ಉಶೀರಾ ವೆಂಬ ಹೆಅಸರಿನಿಂದ ಆಯುರ್ವೇದದಲ್ಲಿ ಪ್ರಚಲಿತವಿರುವ ಲಾವಂಚವು ಉತ್ತಮ ಪಿತ್ತಶಾಮಕ. ಬಾಯಾರಿಕೆ, ಜ್ವರ, ಮೈಯುರಿ, ಬೆವರಿನ ವಾಸನೆಗಳನ್ನು ಹೋಗಲಾಡಿಸುವುದಲ್ಲದೆ ರಕ್ತ ಶುದ್ಧಿಯನ್ನು ಮಾಡುತ್ತದೆ.

ಲಾವಂಚದ ಶರಬತ್ತನ್ನು ತಯಾರಿಸುವ ವಿಧಾನ:

ಬೇಕಾಗುವ ಸಾಮಗ್ರಿಗಳು:
ಲಾವಂಚದ ಬೇರಿನ ಪುಡಿ: ೧ ಭಾಗ
ಸಕ್ಕರೆ : ಅರ್ಧ ಭಾಗ
ಏಲಕ್ಕಿ ಕೇಸರಿ ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
-ಚೆನ್ನಾಗಿ ಕುಟ್ಟಿದ ಒಂದು ಭಾಗ ಲಾವಂಚದ ಬೇರಿನ ಪುಡಿಗೆ ಹದಿನಾರು ಭಾಗ ನೀರು ಸೇರಿಸಿ ಕುಧಿಸಿ ಅರ್ಧ ಭಾಗಕ್ಕೆ ಇಂಗಿಸಿ ಶೋಧಿಸಿಕೊಳ್ಳಬೇಕು.
-ಈ ಕಷಾಯಕ್ಕೆ ಅರ್ಧ ಭಾಗ ಸಕ್ಕರೆ ಸೇರಿಸಿ ಎಳೆಎಳೆಯಾಗಿ ಪಾಕ ಬರುವ ವರೆಗೂ ಕುಡಿಸಿ ಕೆಳಗಿಳಿಸಬೇಕು.
– ಇದಕ್ಕೆ ರುಚಿಗೆ ತಕ್ಕಷ್ಟು ಏಲಕ್ಕಿ ಪುಡಿ, ಕೇಸರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ನೀರಿಲ್ಲದ ಶುದ್ಧವಾದ ಬಾಟಲಿಯಲ್ಲಿ ಹಾಕಿಡಬೇಕು.

ಸೇವಿಸುವ ಕ್ರಮ:
ಒಂದರಿಂದ ಎರಡು ಚಮಚ ಶರಭಟ್ಟನ್ನು ಒಂದು ಲೋಟ ನೀರು ಅಥವಾ ಹಾಲಿಗೆ ಸೇರಿಸಿ ಕುಡಿಯಬಹುದು.

ಉಪಯೋಗ;
ಪ್ರತಿನಿತ್ಯ ಎರಡು ಬಾರಿ ಸೇವಿಸುವುದರಿಂದ ಅತಿಯಾದ ಬೆವರುವಿಕೆ, ಬಾಯಾರಿಕೆಗಳು ಕಡಿಮೆಯಾಗಿ ರಕ್ತ ಶುದ್ಧವಾಗುತ್ತದೆ.