ಜೀರ್ಣಕ್ರಿಯೆ ಸಮಸ್ಯೆ ಕುರಿತು ಹೊಸ ಅಧ್ಯಯನ; ನಿದ್ರಾ ಹೀನತೆಯಿಂದ ವ್ಯಕ್ತಿಯ ಜೀರ್ಣಕ್ರಿಯೆಗೆ ತೊಂದರೆಯಂತೆ.!

0
797

ಮೊಬೈಲ್ ಪ್ರತಿಯೊಬ್ಬರ ಅಮೂಲ್ಯ ನಿದ್ದೆಯ ಸಮಯವನ್ನು ಹಾಳುಮಾಡುತ್ತಿದೆ, ಇನೇನು ಮಲಗಬೇಕು ಎಂದು ಬೆಡ್ ಮೇಲೆ ಮೊಬೈಲ್ ಹಿಡಿದು ಮಲಗಿದರೆ ಎರಡು-ಮೂರು ಘಂಟೆ ಮೊಬೈಲ್ ನೋಡುವುದೇ ಆಗುತ್ತೆ ಇದರಿಂದ ನಿದ್ದೆ ಹಾಳಾಗಿ ಆರೋಗ್ಯ ಕೆಟ್ಟು ಹೋಗುತ್ತೆ, ಈ ಬಗ್ಗೆ ಒಂದು ಅಧ್ಯಯನ ಕೂಡ ನಡೆದು. ವ್ಯಕ್ತಿಯಲ್ಲಿ ನಿದ್ರಾಹೀನತೆ ತಿಂದ ಆಹಾರವನ್ನು ಸರಿಯಾಗಿ ಜೀರ್ಣ ಆಗದಿರುವ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಹಾಗಾದ್ರೆ ನಿದ್ರೆಗೂ ಜೀರ್ಣ ಕ್ರಿಯೆಗೂ ಹೇಗೆ ಸಂಬಂಧ ಎನ್ನುವುದು ಇಲ್ಲಿದೆ ನೋಡಿ.

Also read: ಚಹಾ ಕುರಿತು ಹೊಸ ಸಂಶೋಧನೆ; ನೆನಪಿನ ಶಕ್ತಿ ಹೆಚ್ಚಿಸಲು ನಿಯಮಿತವಾಗಿ ಚಹಾ ಕುಡಿಯಬೇಕಂತೆ.!

ಏನಿದು ಸಂಶೋಧನೆ?

ಹೌದು ಲಂಡನ್ ನ ಅಧ್ಯಯನವೊಂದು ವ್ಯಕ್ತಿಯಲ್ಲಿ ನಿದ್ರಾಹೀನತೆ ಅಥವಾ ಕಡಿಮೆ ನಿದ್ದೆಯಿಂದ ಊಟ ಮಾಡಿದ ನಂತರವೂ ಹೊಟ್ಟೆ ತುಂಬದಂತೆ ಆಗುವುದು ಅಥವಾ ತಿಂದ ಆಹಾರ ಸರಿಯಾಗಿ ಜೀರ್ಣ ಆಗದಿರುವ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ತಿಳಿಸಿದೆ. ಅದರಂತೆ ಲಿಪಿಡ್ ರಿಸರ್ಚ್ ಎಂಬ ಪತ್ರಿಕೆಯಲ್ಲಿ ಅಧ್ಯಯನ ಪ್ರಕಟಗೊಂಡಿದ್ದು. ಇದನ್ನು ನಡೆಸಿದ್ದು ಲಂಡನ್ ನ ಪೆನ್ನಿಸೆಲ್ವೆನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಓರ್ಫ್ಯೂ ಬಕ್ಸ್ಟನ್, ವ್ಯಕ್ತಿಯ ದೇಹಕ್ಕೆ ಎಷ್ಟು ಅಗತ್ಯವೊ ಅಷ್ಟು ನಿದ್ದೆ ಸಿಗದಿದ್ದರೆ ಸ್ಥೂಲಕಾಯ ಮತ್ತು ಸಕ್ಕರೆ ಕಾಯಿಲೆ ಕಂಡುಬರಬಹುದು. ಎಂದು ತಿಳಿಸಿದ್ದು ವ್ಯಕ್ತಿಗಳ ಜೊತೆ ಚರ್ಚೆ, ಆಟಗಳಲ್ಲಿ ಭಾಗಿಯಾಗಿ, ಅವರ ಜೊತೆ ನಿರಂತರ ಮಾತನಾಡಿ ಈ ತೀರ್ಮಾನಕ್ಕೆ ಸಂಶೋಧಕರು ಬಂದಿದ್ದಾರೆ.

Also read: ಇಂತಹ ಆಹಾರವನ್ನು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂದು ಹೇಳುತ್ತಿದೆ ಹೊಸ ಅಧ್ಯಯನ..!!

ಅಧ್ಯಯನದಲ್ಲಿ ಭಾಗಿಯಾದವರಿಗೆ ಅಧಿಕ ಕೊಬ್ಬಿನ ಅಂಶ ಇರುವ ರಾತ್ರಿಯ ಭೋಜನ ನೀಡಲಾಗಿತ್ತು. ನಂತರ ಒಂದು ಬೌಲ್ ಮೆಣಸಿನ ಪದಾರ್ಥ ನೀಡಲಾಗಿತ್ತು. ಇವರಿಗೆ ಸತತ ನಾಲ್ಕು ದಿನ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಬಿಡುತ್ತಿರಲಿಲ್ಲ. ನಿದ್ದೆ ಸರಿಯಾಗದಿದ್ದಾಗ ಉತ್ತಮ ಕೊಬ್ಬು ಪೂರಿತ ಆಹಾರ ಕೊಟ್ಟರೂ ಅಧ್ಯಯನಕ್ಕೊಳಪಟ್ಟವರಿಗೆ ಹೊಟ್ಟೆ ತುಂಬಿದಂತೆ ಅನಿಸುತ್ತಿರಲಿಲ್ಲ. ನಂತರ ಅವರ ರಕ್ತದ ಮಾದರಿಯನ್ನು ಪರೀಕ್ಷಿಸಲಾಯಿತು.ಸರಿಯಾಗಿ ಆಹಾರ ಜೀರ್ಣವಾಗುತ್ತಿರಲಿಲ್ಲ, ಇದು ಸಹಜವಾಗಿ ದೇಹದಲ್ಲಿ ಕೊಬ್ಬು ಉತ್ಪತ್ತಿ ಮಾಡುತ್ತಿತ್ತು. ಅಧ್ಯಯನದಲ್ಲಿ ಪುರುಷರು ಮಾತ್ರ ಭಾಗಿಯಾಗಿದ್ದರು. ಈ ಸಮಸ್ಯೆ ಮಹಿಳೆಯರಲ್ಲಿವೂ ಕೂಡ ಕಂಡು ಬರುತ್ತೆ ಎಂದು ಸಂಶೋಧಕರು ತಿಳಿಸಿದ್ದಾರೆ.

ನಿದ್ರಾ ಹೀನ ಸಮಸ್ಯೆಗೆ ಮನೆಮದ್ದುಗಳು?

1. ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿ
ದೀರ್ಘಕಾಲ ಹಾಗೂ ದಣಿವಾದ ದಿನವಾಗಿದ್ದರೆ ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿಕೊಂಡರೆ ಅದು ನಿಮ್ಮನ್ನು ರಿಲ್ಯಾಕ್ಸ್ ಅನ್ನಾಗಿ ಮಾಡುತ್ತದೆ. ಅಲ್ಲದೆ, ನಿದ್ದೆಗೆ ಪ್ರೇರೇಪಿಸುತ್ತದೆ. ನಿದ್ದೆ ಮಾಡುವುದಕ್ಕೂ ಎರಡು ಗಂಟೆ ಮುನ್ನ ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿದರೆ ಉತ್ತಮ.

2. ಮಸಾಜ್
ನಿಮ್ಮ ದೇಹ, ಮನಸ್ಸನ್ನು ಶಾಂತವಾಗಿಡಲು ಮಸಾಜ್ ಥೆರಪಿ ಉತ್ತಮ ವಿಧಾನ. ರಾತ್ರಿಯ ವೇಳೆ ಮಸಾಜ್ ಮಾಡಿಸಿಕೊಂಡರೆ ನೋವು, ಆತಂಕ ಮತ್ತು ಖಿನ್ನತೆಯು ಕಡಿಮೆಯಾಗುತ್ತದೆ. ಅಲ್ಲದೆ, ನಿದ್ದೆಯ ಗುಣಮಟ್ಟವು ಉತ್ತಮವಾಗುತ್ತದೆ. ಅಲ್ಲದೆ, ಮಸಾಜ್ ಅನ್ನು ವೃತ್ತಿಪರರಿಂದ ಮಾಡಿಸಿಕೊಳ್ಳಬೇಕೆಂದೇನೂ ಇಲ್ಲ. ಬದಲಾಗಿ ಮನೆಯಲ್ಲಿ ನೀವೇ ಮಾಡಿಕೊಳ್ಳಬಹುದು.

3. ಲ್ಯಾವೆಂಡರ್ ಎಣ್ಣೆ
ನಿಮ್ಮ ಚಿತ್ತ ಅಥವಾ ಮೂಡ್‌ ಸುಧಾರಿಸಲು ಲ್ಯಾವೆಂಡರ್ ಎಣ್ಣೆ ಉತ್ತಮ. ಇದು ನಿದ್ರೆಯನ್ನೂ ಉತ್ತೇಜಿಸುತ್ತದೆ. ಲ್ಯಾವೆಂಡರ್ ಸಪ್ಲಿಮೆಂಟ್‌ಗಳು ಅಥವಾ ಕೆಲವು ಡ್ರಾಪ್‌ಗಳಷ್ಟು ಎಣ್ಣೆಯನ್ನು ಕೈಗೆ ಹಾಕಿಕೊಂಡು ವಾಸನೆ ಕುಡಿಯಿರಿ. ಲ್ಯಾವೆಂಡರ್ ಎಣ್ಣೆಯನ್ನು ಬಳಸುವುದು ಕೂಡ ಸುರಕ್ಷಿತ.

4. ಬಿಸಿ ಹಾಲಿಗೆ ಜೇನುತುಪ್ಪ ಸೇರಿಸಿ ಕುಡಿಯಿರಿ
ಒಂದು ಕಪ್ ಬೆಚ್ಚಗಿನ ಹಾಲಿಗೆ ಜೇನುತುಪ್ಪ ಮಿಶ್ರಣ ಮಾಡಿಕೊಂಡು ಕುಡಿಯಿರಿ. ಹಾಲು – ಜೇನುತುಪ್ಪದ ಮಿಶ್ರಣ ನಿದ್ದೆ ಬರಲು ಉತ್ತಮ ಸಂಯೋಜನೆ ಆಗಿದೆ. ಹಾಲಿನಲ್ಲಿರುವ ಟ್ರಿಪ್ಟೋಫಾನ್ ಅಮೈನೋ ಆ್ಯಸಿಡ್ ನೈಸರ್ಗಿಕವಾಗಿ ನಿದ್ದೆ ಬರಿಸುವ ಮದ್ದಾಗಿ ಕೆಲಸ ಮಾಡುತ್ತದೆ.

Also read: ಧ್ಯಾನ ಮಾಡುವುದರಿಂದ ಎಲ್ಲರಿಗೂ ಮಾನಸಿಕ ನೆಮ್ಮದಿ ಸಿಗುತ್ತದೆ ಎನ್ನುವುದು ಶೇ. 100 ಸುಳ್ಳು; ಯಾಕೆ ಅಂತ ಈ ಅಧ್ಯಯನ ಹೇಳುತ್ತೆ ನೋಡಿ..