ಸೌಂದರ್ಯ ವರ್ಧಕ ನಿಂಬೆ..!

0
1487

Kannada News | Health tips in kannada

೧) ನಿಂಬೆರಸವನ್ನು ಕಡಲೆಹಿಟ್ಟಿನ ಜೊತೆಗೆ ಮುಖಕ್ಕೆ ಲೇಪಿಸಿ, ವರ್ತುಲಾಕಾರವಾಗಿ ತಿಕ್ಕಿ ಅರ್ಧ ಗಂಟೆಯ ಬಳಿಕ ಮುಖ ತೊಳೆದರೆ ಚರ್ಮ ಲಕ ಲಕನೇ ಹೊಳೆಯುತ್ತದೆ.

೨)ಬಾಳೆಹಣ್ಣು ಹಾಗು ನಿಂಬೆ ರಸ ಎರಡನ್ನು ಬೆರೆಸಿ ಫೇಸ್ ಮಾಸ್ಕನಂತೆ ಮುಖಕ್ಕೆ ಲೇಪಿಸಿಕೊಳ್ಳಿ. ಇದರಿಂದ ಚರ್ಮ ಮೃಧುವಾಗುತ್ತದೆ, ಕಾಂತಿ ಹೆಚ್ಚುತ್ತದೆ.

೩) ಒಡೆದ ಪಾದಗಳಿಗೆ ನಿಂಬೆಯ ಸಿಪ್ಪೆಯನ್ನು ೧೫ ನಿಮಿಷಗಳ ಕಾಲ ತಿಕ್ಕಿ ಅನಂತರ ಉಗುರು ಬೆಚ್ಚಗಿನ ನೀರಲ್ಲಿ ಕಾಲನ್ನು ಅದ್ಧಿ ಇಟ್ಟುಕೊಳ್ಳಿ.ಬಳಿಕ ಅರಿಶಿನ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಲೇಪಿಸಿದರೆ ಬಿರುಕು ಬಿಟ್ಟ ಪಾದಗಳು ಸರಿಯಾಗುತ್ತವೆ, ಚರ್ಮವು ಮೃದುವಾಗುತ್ತದೆ.

೪) ಆಗ ತಾನೇ ಎದ್ದ ಮೊಡವೆಗಳಿಗೆ ನಿಂಬೆರಸದಲ್ಲಿ ಕರಿ ಮೆಣಸಿನ ಕಾಳನ್ನು ತೇಯ್ದು ಹಚ್ಚಿದರೆ ಮೊಡವೆಗಳು ಬೇಗನೆ ಮಾಯವಾಗುತ್ತವೆ.

೫) ನಿಂಬೆರಸವನ್ನು ತಲೆಕೂದಲಿನ ಬುಡದಲ್ಲಿ ಹಚ್ಚಿ ಎರಡು ಅಥವಾ ಮೂರು ಗಂಟೆಯ ಬಳಿಕ ಸ್ನಾನ ಮಾಡಿದ್ದಲ್ಲಿ ಕೂದಲು ಕಾಂತಿಯುತವಾಗುತ್ತದೆ ಹಾಗು ತಲೆ ಹೊತ್ತು ನಿವಾರಣೆಯಾಗುತ್ತದೆ.

೬) ನಿಂಬೆರಸ ಮತ್ತು ಜೇನಿನ ಮಿಶ್ರಣದಿಂದ ಮೊಡವೆ ಮತ್ತು ಕಲೆಗಳು ಮಾಯವಾಗುತ್ತವೆ.

೭) ನಿಂಬೆಯ ಒಣಗಿದ ಸಿಪ್ಪೆಯನ್ನು ಪುಡಿ ಮಾಡಿ ನೀರಿನಲ್ಲಿ ಕಲೆಸಿ ಹಚ್ಚಿದರೆ ಚರ್ಮ ಕಾಂತಿಯುತವಾಗುತ್ತದೆ.

೮) ಒಂದು ಭಾಗದಷ್ಟು ನಿಂಬೆರಸ, ಅಷ್ಟೇ ಪ್ರಮಾಣದ ನೆಲ್ಲಿಕಾಯಿ ರಸ, ಪಚ್ಚೆತೆನೆ ರಸ, ಎಳ್ಳೆಣ್ಣೆ ಇವನ್ನೆಲ್ಲ ಸೇರಿಸಿ ಕುಡಿಸಿ ತೈಲ ಮಾಡಿಟ್ಟುಕೊಂಡು , ದಿನವೂ ತಲೆಗೆ ಹಚ್ಚಿಕೊಂಡರೆ ಕೂದಲು ಉದುರುವಿಕೆ ನಿಲ್ಲುತ್ತದೆ.

Also read: ಗಂಡು ಮಕ್ಕಳೇ ತಂದೆ ತಾಯಿ ಹತ್ರ ಧಿಮಾಕು ಮಾಡುದ್ರೆ ಮನೆ ಇಂದ ಹೊರಗೆ ಹೋಗ್ತೀರಾ…