ಪ್ರಾಚೀನ ಕಾಲದ ಶಿಲ್ಪ ಕಲೆಯ ವೈಭವದ ಪ್ರತೀಕ. ಲೇಪಾಕ್ಷಿ. ವೀರಭದ್ರ ದೇವಸ್ಥಾನ !

0
2214

ಲೇಪಾಕ್ಷಿ ಬೆಂಗಳೂರಿಂದ ಸುಮಾರು 100 ಮೈಲು ದೂರಲ್ಲಿ ಇಪ್ಪ ಒಂದು ಸಣ್ಣ ಹಳ್ಳಿ, ನೆರೆ ರಾಜ್ಯ ಆಂದ್ರಕ್ಕೆ ಸೇರಿದ್ದು. ಆಮೆಯಾಕಾರದ ಕಲ್ಲು ಬಂಡೆ ಇಪ್ಪ ಗುಡ್ಡೆ ಮೇಲೆ ಇಲ್ಲಿ ಒಂದು ಸುಂದರ ದೇವಸ್ಥಾನ ಇದ್ದು. ವೀರಭದ್ರಸ್ವಾಮಿ ಇಲ್ಲಿಯ ಮೂಲ ದೇವರು.

veerabhadra-temple-prangana

ವೀರಭದ್ರ ದೇವಸ್ಥಾನ 16 ನೇ ಶತಮಾನದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ. ವಿಜಯನಗರ ಅರಸರ ಆಳ್ವಿಕೆ ಸಂದರ್ಭದಲ್ಲಿ ಇದು ಸ್ಥಾಪಿತವಾಗಿದೆ. ಹೀಗಾಗಿ ದೇವಾಲಯದಲ್ಲಿ ವಿಜಯನಗರ ಅರಸರ ವಾಸ್ತುಶಿಲ್ಪ ಮಾದರಿಯನ್ನೇ ಕಾಣಬಹುದಾಗಿದೆ.ಈ ದೇವಾಲಯದಲ್ಲಿ ವಿಶ್ವಕರ್ಮ ಬ್ರಾಹ್ಮಣರ ವಾಸ್ತುಶಿಲ್ಪ ಮಾದರಿಯನ್ನು ಹೆಚ್ಚಾಗಿ ಕಾಣಬಹುದು. ಇವರು ತಮ್ಮ ಕಲಾ ವೈಭವವನ್ನು ಇಲ್ಲಿ ಮೆರೆದಿದ್ದಾರೆನ್ನಬಹುದು.

ಅಪೂರ್ವ ಶಿಲ್ಪಕಲಾ ತಾಣ – ಲೇಪಾಕ್ಷಿ

ದೇವಾಲಯದ ಸ್ಥಂಭಗಳಿಗೆ ಯಾವುದೇ ಆಧಾರವಿಲ್ಲ. ಅದನ್ನು ಹಾಗೆಯೆ ನಿಲ್ಲಿಸಲಾಗಿದೆ. ಮೇಲ್ಚಾವಣಿಯಲ್ಲಿನ ಕಮಲದಲ್ಲಿ ಗುರುತ್ವಾಕರ್ಷಣೆಯ ಬಲವನ್ನು ಅಳವಡಿಸಿದ್ದಾರಂತೆ. ಇಲ್ಲಿರುವ ಬಲ ಬದಿಯ ೮ ಅಡಿ ಎತ್ತರದ ಸ್ಥಂಭ ಒಂದು ಕೆಳಗಿನ ನೆಲಕ್ಕೆ ತಾಗದೆ ನಿಂತಿದೆ. ಅಂದರೆ ಸ್ಥಂಭದ ಬುಡ ಕಲ್ಲಿನ ಮೇಲೆ ನಿಂತಿಲ್ಲ. ಮೊದಲೆಲ್ಲಾ ಬಟ್ಟೆ ಅಥವಾ ಕಾಗದವನ್ನು ಒಂದು ಕಡೆಯಿಂದ ಹಾಕಿ ಮತ್ತೊಂದು ಕಡೆಯಿಂದ ತೆಗೆಯುತ್ತಿದ್ದರಂತೆ.

lepakshi-temple-hanging-pillar-216

ದೇವಾಲಯದ ಕಂಬದ ಮೇಲೆ ಸಾಮಾನ್ಯ ಮನುಷ್ಯ ಗಾತ್ರದ ನೃತ್ಯಗಾರ್ತಿ ಹಾಗೂ ಇತರೆ ಸಂಗೀತಗಾರರನ್ನು ಸುಂದರವಾಗಿ ಕೆತ್ತಿಡಲಾಗಿದೆ.

lepakshi-temple-hanging-pillar-12

ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಬೃಹದಾಕಾರದ ನಂದಿಯ ವಿಗ್ರಹವಿದೆ. ಇದು ೧೬ ಅಡಿ ಎತ್ತರ ಮತ್ತು ೨೭ ಅಡಿ ಉದ್ದವಿದೆ. ಇದು ಭಾರತದಲ್ಲಿಯೇ ಅತಿ ಎತ್ತರವಾದ ನಂದಿಯ ವಿಗ್ರಹ.

nandi_lepakshi2

ದೇವಾಲಯದಲ್ಲಿ ಬೃಹತ್ ಆಕಾರದ ಏಳು ಹೆಡೆಯ ನಾಗನ ಮೇಲೆ ಕುಳಿತಿರುವ ನಾಗಲಿಂಗವಿದೆ. ನಾಗಲಿಂಗನ ಕೆತ್ತನೆಯ ಕತೆ ಹೀಗಿದೆ. ಪ್ರಧಾನ ಶಿಲ್ಪಿಗಳು ಊಟ ಮಾಡಲು ಬಂದಾಗ ಅವರ ತಾಯಿ ಇನ್ನೂ ಅಡಿಗೆ ಮಾಡುತ್ತಿದ್ದರಂತೆ. ತನ್ನ ತಾಯಿ ಅಡಿಗೆ ಮುಗಿಸುವಷ್ಟರಲ್ಲಿ ಶಿಲ್ಪಿಗಳು ಈ ನಾಗಲಿಂಗವನ್ನು ಕೆತ್ತಿದ್ದರಂತೆ. ನಾಗಲಿಂಗನ ಎದುರಿನ ಕೋಣೆಯೇ ಅಡಿಗೆ ಮನೆಯಾಗಿದ್ದು , ಅದಕ್ಕೊಂದು ಪರದೆ ಕಟ್ಟಿ ತಾವು ನಾಗಲಿಂಗನ ಕೆತ್ತನೆಗೆ ತೊಡಗಿಸಿಕೊಂಡಿದ್ದರಂತೆ. ತಾಯಿ ಅಡಿಗೆ ಮುಗಿಸಿ ಹೊರಬಂದು ನಾಗಲಿಂಗನನ್ನು ನೋಡಿ ಆಶ್ಚರ್ಯ ಪಟ್ಟಾಗ ಅವರ ಕಣ್ಣು ತಾಗಿ ನಾಗಲಿಂಗ ಬಿರುಕು ಬಿಟ್ಟಿತಂತೆ. ಆದರೆ ಈಗ ಅದನ್ನು ಸಿಮೆಂಟಿನಿಂದ ಮುಚ್ಚಲಾಗಿದೆ.

lepakshi_veerabhadra_temple-2

ಮದುವೆಯ ಸಂದರ್ಭದಲ್ಲಿನ ಧಾರೆಯೆರೆಯುವ ದೃಶ್ಯಾವಳಿಯ ಕೆತ್ತನೆ ಮತ್ತು ಪಾರ್ವತಿಯನ್ನು ಹೆಂಗಸರು ವಿವಾಹಕ್ಕಾಗಿ ಸಿದ್ದತೆ ಮಾಡುತ್ತಿರುವುದು, ಹೆಣ್ಣು ತನ್ನ ಹಣೆಯಲ್ಲಿ ಕುಂಕುಮವಿಟ್ಟುಕೊಳ್ಳುವ ವಿಧಾನ, ಮತ್ತು ಹೆಂಗಸರು ಎತ್ತರದ ಹಿಮ್ಮಡಿ ಇರುವ ಚಪ್ಪಲಿ ಧರಿಸುವ ಪದ್ದತಿ ಆಗ ಸಹ ರೂಢಿಯಲ್ಲಿತ್ತು ಎನ್ನುವುದು ಅಲ್ಲಿರುವ ಶಿಲ್ಪಗಳಿಂದ ತಿಳಿಯುತ್ತದೆ. ಹಾಗೆ ಇನ್ನೂ ಮುಂದೆ ಬಂದಾಗ ಆಗಿನ ಕಾಲದಲ್ಲಿ ಉಪಯೋಗಿಸುತ್ತಿದ್ದಂತ ಊಟದ ತಟ್ಟೆಗಳುನ್ನೂ ಕೆತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಸೀತಾಪಾದವೆಂದು ಹೇಳುವಲ್ಲಿ ಆಕೆಯ ಬಲಪಾದದ ಗುರುತು ಇದ್ದು, ಹೆಬ್ಬೆಟ್ಟಿನ ಬದಿಯಿಂದ ವರ್ಷದ ಎಲ್ಲಾ ಕಾಲದಲ್ಲಿಯೂ ಅಲ್ಲಿಂದ ನೀರು ಜಿನುಗುತ್ತದಂತೆ. ಅಲ್ಲಿಂದ ಮುಂದೆ ಹಳೆಕನ್ನಡದಲ್ಲಿ ಕೆತ್ತಿದ ಶಾಸನವಿದೆ.

sitas_foot