ಧಾರ್ಮಿಕ ಭಾವನೆಯನ್ನು ಉತ್ತೇಜಿಸುವ ರಮಣೀಯ ತಾಣ ಲೇಪಾಕ್ಷಿ. ಮರೆಯದೇ ಒಮ್ಮೆ ಭೇಟಿ ಕೊಡಿ…

0
1217
lepakshi_architecture_wonder

ಶಿಲ್ಪ ಕಲೆಯ ಸಾಕ್ಷಿಗೆ ಲೇಪಾಕ್ಷಿ

ಎತ್ತ ನೋಡಿದರೂ ಬೃಹತ್ ಕಲ್ಲು ಬಂಡೆಗಳು, ಕೆಲವೆಡೆ ಭಿನ್ನವಾಗಿರುವ ಶಿಲೆಗಳು, ಅದು ಕಲೆಯ ವೈಭವದ ಪ್ರತೀಕ ವಾಗಿದೆ. ಧಾರ್ಮಿಕ ಭಾವನೆಯನ್ನು ಉತ್ತೇಜಿಸುವ ರಮಣೀಯ ತಾಣ. ಅಲ್ಲಿ ಶಿಲ್ಪ ಕಲೆಯ ಅದ್ಭುತಗಳ ದರ್ಶನವಾಗುತ್ತದೆ. ಪ್ರಮುಖವಾಗಿ ಶಿವ, ವಿಷ್ಣು ಹಾಗೂ ವೀರಭದ್ರ ಸ್ವಾಮಿ ದೇವರುಗಳು ಇಲ್ಲಿ ನೆಲೆಸಿದ್ದಾರೆ.

ಅದು ಬೆಂಗಳೂರಿನಿಂದ ಸುಮಾರು 120 ಕಿ.ಮೀ ದೂರ ದಲ್ಲಿರುವ ಶಿಲ್ಪ ಕಲೆಯ ನೆಲೆ ಲೇಪಾಕ್ಷಿ. ಶಿಲಾಸ್ತಂಭ ಲೇಪಾಕ್ಷಿಯ ಸುಂದರ ಉದ್ಯಾನಗಳು ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಆನಂತರವೇ ಪ್ರಮುಖ ದೇವಾಲಯ ಸಿಗುತ್ತದೆ. ಇಲ್ಲಿನ ಮುಖ್ಯಗೋಪುರವನ್ನು ಪ್ರವೇಶಿಸುತ್ತಿದ್ದಂತೆಯೇ ನಾಲ್ಕುಸ್ತಂಭಗಳಿಂದ ಕೂಡಿದ ಪೌಳಿಗಳಿವೆ. ಇದನ್ನು ಹಾದು ಹೋದರೆ ಮುಖ್ಯ ಮಂಟಪ ಎದುರಾಗುತ್ತದೆ. ಇಲ್ಲಿ ಸುಂದರ ಕೆತ್ತನೆಗಳುಳ್ಳ ಶಿಲಾ ಸ್ತಂಭಗಳಿವೆ. ಒಂದೊಂದು ಸ್ತಂಭವೂ ವಿಭಿನ್ನವಾಗಿದ್ದು, ಎಲ್ಲದರಲ್ಲೂ ಶಿವನ ವಿವಿಧ ರೂಪಗಳನ್ನು ಕಾಣಬಹುದು. ರಾಮಾಯಣ, ಮಹಾಭಾರತದ ದೃಶ್ಯಗಳನ್ನು ದೇಗುಲದ ಗೋಡೆ ಮೇಲೆ ಕೆತ್ತಲಾಗಿದೆ. ಇದನ್ನು ನೋಡುವುದೇ ಮನಮೋಹಕ.

ನೇತಾಡುವ ಕಂಬ, ಕಲ್ಲಿನ ಸರಪಣಿ, ದುರ್ಗಾ ಪಾದ, ನರ್ತಿಸುತ್ತಿರುವ ಸ್ತ್ರೀಯರು ಸೇರಿದಂತೆ ಹಲವು ಆಕರ್ಷಣೆಗಳು ಇಲ್ಲಿ ನೋಡುಗರನ್ನು ಸೆಳೆಯುತ್ತವೆ. ಕೂರ್ಮಾಕೃತಿಯ ಹೆಬ್ಬಂಡೆ ಇಲ್ಲಿಂದ ಒಂದು ಸುತ್ತು ಪ್ರದಕ್ಷಿಣೆ ಹೊರಟರೆ ದೇಗುಲಕ್ಕೆ ತಾಗಿಕೊಂಡಿರುವ ಕೂರ್ಮಾ ಕೃತಿಯ ಹೆಬ್ಬಂಡೆಯ ಮೇಲೆಯೇ ದೇಗುಲವನ್ನು ಕಟ್ಟಿದ್ದಾರೆ. ಪಕ್ಕದಲ್ಲಿ ಗಣಪತಿ, ಜೇಡರ ಹುಳ, ಬೇಡರ ಕಣ್ಣಪ್ಪ, ಹಾವು, ಶಿವಲಿಂಗಕ್ಕೆ ಪೂಜೆ ಮಾಡುತ್ತಿರುವ ಆನೆಗಳು, ಏಳು ತಲೆಗಳ ಏಕಶಿಲಾ ನಾಗಲಿಂಗವು ಆಕರ್ಷಿಸು ತ್ತದೆ. ಇದನ್ನು ನೋಡಿ ಮುಂದುವರೆದಾಗ ಕಲಾಕೃತಿಯಿರುವ ಪಾರ್ವತಿ-ಪರಮೇಶ್ವರರ ಕಲ್ಯಾಣ ಮಂಟಪದಲ್ಲಿ ದೇವೇಂದ್ರ, ಅಗ್ನಿ, ವಿಶ್ವಾಮಿತ್ರ, ಗಣಪ, ವರುಣ, ಬೃಹಸ್ಪತಿ, ಬ್ರಹ್ಮ, ವಿಷ್ಣು, ವಾಯು, ಕುಬೇರ, ವಶಿಷ್ಠ, ಈಶ್ವರ ತಮ್ಮ ವಾಹನಗಳ ಮೇಲೆ ಕುಳಿತಿರುವುದನ್ನು ಸ್ತಂಭಗಳಲ್ಲಿ ಕೆತ್ತಿದ್ದಾರೆ. ಅನಂತಶಯನ, ದತ್ತಾತ್ರೇಯ, ಚತುರ್ಮುಖ ಬ್ರಹ್ಮ, ನಾರದ ಮತ್ತು ರಂಭಾ ಇವರೆಲ್ಲರೂ ಶಿವಪಾರ್ವತಿ ಯರ ವಿವಾಹಕ್ಕೆ ಬಂದಿರುವ ಸನ್ನಿವೇಶವಿದೆ.

ಅದ್ಬುತ ಕೆತ್ತನೆ ಇಲ್ಲಿನ ಪ್ರತಿಯೊಂದು ಸ್ತಂಭಗಳಲ್ಲಿ ಅತ್ಯದ್ಭುತವಾದ ಕೆತ್ತನೆಗಳಿವೆ. ಆದರೆ, ಮೇಲ್ಚಾ ವಣಿ ಇಲ್ಲ. ಎಲ್ಲವನ್ನೂ ನೋಡಿ ಗರ್ಭಗುಡಿ ಯನ್ನು ಪ್ರವೇಶಿಸಿದಾಗ ಅಲ್ಲಿನ ಸ್ತಂಭಗಳಲ್ಲಿ ವಾಸ್ತುಪುರುಷ, ಪದ್ಮಿನಿ, ಗಜಾಸುರ ಸಂಹಾರ, ನಾಟ್ಯಗಣಪತಿ, ದುರ್ಗಾ ದೇವಿ ಮೂರ್ತಿ ಗಳಿವೆ. ಹರಿಹರರಿಗೆ ಭೇದ ವಿಲ್ಲವೆನ್ನಲು ಶಿವ ಮತ್ತು ವಿಷ್ಣುವಿನ ವಿಗ್ರಹ ಗಳನ್ನು ಪ್ರತಿಷ್ಠೆ ಮಾಡಿದ್ದಾರೆ. ಜೊತೆಗೆ ಬೆಳ್ಳಿಯ ಕಣ್ಣುಗಳು, ಮೀಸೆ ಮತ್ತು ವಿಭೂತಿಯ ಪಟ್ಟೆಗಳನ್ನು ಧರಿಸಿರುವ ವೀರ ಭದ್ರಸ್ವಾಮಿಯ ದರ್ಶನ ಮಾಡ ಬಹುದು. ಇದರೊಳಗಿರುವ ಗುಹೆಯಲ್ಲಿಯೇ ಅಗಸ್ತ್ಯ ಮುನಿಗಳು ತಪ¸ ತಪಸ್ಸನ್ನು ಮಾಡಿದ್ದಾರೆ ಎಂಬ ಪ್ರತೀತಿಯಿದೆ.