ಒತ್ತಡ ಜೀವನದಿಂದ ಮುಕ್ತಿ ಹೊಂದಬೇಕೆ? ಹೀಗೆ ಮಾಡಿ

0
596

ಇಂದಿನ ನಿತ್ಯ ಜೀವನದಲ್ಲಿ ಯಾರಿಗೂ ಯಾವಾಗ ಏನಾಗುತ್ತೋ ಗೊತ್ತೇ ಆಗುವುದಿಲ್ಲ, ಜಂಕ್ ಫುಡ್, ಪೊಲ್ಯೂಶನ್ ಟ್ರಾಫಿಕ್ ಕಿರಿಕಿರಿ, ನೂರೆಂಟು ರೋಗ ಇವನ್ನೆಲ್ಲ ಮ್ಯಾನೇಜ್ ಮಾಡುವುದರಲ್ಲಿ ಸಾಕು ಸಾಕಾಗುತ್ತದೆ. ಹಾಗಾದರೆ ಈ ಒತ್ತಡದಿಂದ ಮುಕ್ತಿ ಬೇಕಾದರೆ ಈ ಕೆಳಗಿನಂತೆ ಮಾಡಿ.

*ನಿತ್ಯ ಏಳು ಗಂಟೆ ನಿದ್ದೆ: ಈಗಿನ ಜನರಿಗೆ ಕಣ್ತುಂಬ ನಿದ್ದೆ ಅಂದರೆ ಗೊತ್ತೇ ಆಗಲ್ಲ ಯಾಕಂದರೆ ಮಲಗೊದು ರಾತ್ರಿ 3 ಗಂಟೆಯಾದರೂ ಮತ್ತೆ ಬೇಗ ಎದ್ದು ಆಫೀಸ್, ಕೋರ್ಟ್ ಕಚೇರಿ ಅಂತ ಬ್ಯೂಸಿಯಾಗಿ ಬಿಡುತ್ತಾರೆ. ಆದರೆ ಜೊತೆಗೆ ನಿತ್ಯ ಕನಿಷ್ಟ ಏಳು ಗಂತೆಯಾದರೂ ನಿದ್ದೆ ಮಾಡಿದರೆ ದೇಹಕ್ಕೂ ಒಳ್ಳೆಯದು, ಕೆಲಸ ಮಾಡೋ ಪರಿಸರವೂ ಚೆನ್ನಾಗಿರುತ್ತದೆ.

*ಕಡಿಮೆ ಉಪ್ಪು ಬಳಸಿರಿ: ನಿತ್ಯ ಆರೋಗ್ಯದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಇದ್ದಷ್ಟು ಒಳಿತು, ಯಾಕೆಂದರೆ ಉಪ್ಪಿನಲ್ಲಿ ಸೋಡಿಯಂ ಪ್ರಮಾಣ ಜಾಸ್ತಿ ಇರುವುದರಿಂದ ಆರೋಗ್ಯಕ್ಕೆ ಇದು ಒಳ್ಳೆಯದಲ್ಲ.

*ನಿತ್ಯ ಯೋಗ, ವ್ಯಾಯಾಮ: ನಿತ್ಯ ಯೋಗ, ವ್ಯಾಯಾಮ ಮಾಡಿದರೆ ಆಲಸಿತನ ದೂರವಾಗುತ್ತದೆ. ದಿನವಿಡೀ ಲವಲವಿಕೆಯಿಂದ ಇರಲು ಯೋಗ, ವ್ಯಾಯಾಮ ಸಹಾಯ ಮಾಡುತ್ತದೆ. ಜೊತೆಗೆ ಆರೋಗ್ಯ ವೃದ್ಧಿಆಗಿ ದೀರ್ಘಯುಷಿಗಳಾಗಲು ಸಹಾಯವಾಗುತ್ತದೆ.

*10 ನಿಮಿಷ ಧ್ಯಾನಕ್ಕೆ ಮೀಸಲಿಡಿ: ಕೇವಲ 10 ನಿಮಿಷ ಧ್ಯಾನ ಮಾಡಿದರೆ ಅದೆಷ್ಟೋ ರೋಗಗಳು ತಡೆಯಲು ಸಹಾಯಕಾರಿಯಾಗುತ್ತದೆ. ಹೀಗಿರುವಾಗ ನಿಮ್ಮ ಒತ್ತಡದ ಜೀವನವನ್ನು ಸ್ವಲ್ಪ ಹಗುರಾಗಿಸಿಕೊಳ್ಳಲು ದಿನಕ್ಕೆ 10 ನಿಮಿಷ ಧ್ಯಾನ ಮಾಡುವುದು ಒಳ್ಳೆಯದು.

*ಹಣ್ಣುತರಕಾರಿ ಯಥೆಚ್ಛವಾಗಿ ಬಳಸಿ: ನಿಮ್ಮ ಆಹಾರ ನಿಮ್ಮ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು. ಹೆಚ್ಚೆಚ್ಚು ತರಕಾರಿ, ಹಣ್ಣು ಬಳಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಜಂಕ್ ಫುಡ್ ತಿನ್ನುವುದನ್ನು ಬಿಟ್ಟರೆ ಒಳ್ಳೆಯದು.

*ತೂಕ ಕಡಿಮೆ ಇರಲಿ: ಮುಖ್ಯವಾಗಿ ನಿಮ್ಮ ದೇಹದ ತೂಕದ ಮೇಲೆ ನಿಮಗೆ ನಿಯಂತ್ರಣವಿರಲಿ, ಕಡಿಮೆ ಇದ್ದಷ್ಟು ನಿಮ್ಮ ದೇಹ ಚುರುಕಾಗಿ ಕೆಲಸ ಮಾಡುತ್ತದೆ. ಜೊತೆಗೆ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ.