ವಿದ್ಯಾರ್ಥಿಗಳೇ ಎಚ್ಚರ; ದೇಶದಲ್ಲಿ 24 ನಕಲಿ university-ಗಳು ಪತ್ತೆಯಾಗಿವೆ ಅದರಲ್ಲಿ ಕರ್ನಾಟಕದ ಕೆಲವು ವಿವಿ-ಗಳು ಈ ಪಟ್ಟಿಯಲ್ಲಿವೆ..

0
807

ಮುಂದುವರೆದ ಸಮಾಜದಲ್ಲಿ ಒಂದು ಡಿಗ್ರಿ ಇದ್ರೇನೆ ಚಂದ. ಅದರಂತೆ ಈಗೀಗ ಯಾವುದೇ ಉದ್ಯೋಗಕ್ಕೆ ಸೇರಲು ಮುಖ್ಯವಾಗಿ ಡಿಗ್ರಿ ಬೇಕಾಗುತ್ತೆ. ಹಾಗೆಯೇ ಮದುವೆ ವೇಳೆಯಲ್ಲಿ ಸಹ ಏನ್ ಓದಿದ್ದಾರೆ ನಿಮ್ಮ ಮಗಳು ಮಗ ಎನ್ನುವ ಪ್ರಶ್ನೆ ಮೂಡುತ್ತೆ. ಈ ಎಲ್ಲ ಹಿನ್ನೆಲೆಯಲ್ಲಿ ಅತ್ಯುತ್ತಮ ಶಿಕ್ಷಣ ಪಡೆಯಬೇಕು ಎನ್ನುವುದು ಪ್ರತಿಯೊಬ್ಬರ ಹಂಬಲವಾಗಿರುತ್ತೆ. ಇಂತಹ ಅಭ್ಯರ್ಥಿಗಳು ಸರಳವಾಗಿ ಪದವಿ, ಅಥವಾ ಡಿಗ್ರಿ ಕೊಡುವ ವಿಶ್ವವಿದ್ಯಾಲಯಗಳಿಗೆ ಮೊರೆ ಹೋಗುತ್ತಿದ್ದಾರೆ. ಅಂತಹ ಕೆಲವೊಂದು ವಿವಿಗಳು ಹಣ ನೀಡಿದರೆ ಒಂದೇ ದಿನಕ್ಕೆ ಡಿಗ್ರಿ ಕೊಡುತ್ತಿವೆ. ಇದೆ ವಿಷಯಕ್ಕೆ ದೇಶದ ತುಂಬೆಲ್ಲ ಹಲವು ವಿವಾದಗಳನ್ನು ನಡೆದು ಓಪನ್ ಯುನಿವರ್ಸಿಟಿ -ಗಳನ್ನು ರದ್ದು ಮಾಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿದವು.

Also read: ಪ್ರತಿಷ್ಠಿತ ಕಂಪನಿಗಳ ಪ್ರಾಜೆಕ್ಟ್ ವರ್ಕ್ ಕೊಡಿಸುವುದಾಗಿ ನಂಬಿಸಿ 2 ಕೋಟಿ ರೂ. ವಂಚನೆ; ಮಾಜಿ ಶಾಸಕರ ಸಂಬಂಧಿ ಸೇರಿ ಮೂವರ ಬಂಧನ..

ಏಕೆಂದರೆ ಉತ್ತಮ ವಿದ್ಯ ನೀಡುವ ವಿವಿಗಳು ಹಣಕ್ಕೆ ಆಸೆ ಮಾಡಿ ನಕಲಿಯಾದರೆ ಹೇಗೆ ಎನ್ನುವ ವಿಚಾರದಲ್ಲಿ ಹಲವು ಸತ್ಯಗಳು ಹೊರ ಬಿದ್ದಿವೆ. ಇಂತಹ ವಿವಿಗಳು ದೇಶದಲ್ಲಿ ನಾಯಿ ಕೊಡೆಗಳಂತೆ ಬೆಳೆಯಿತ್ತಿವೆ ಇವುಗಳ ಮುಖ್ಯ ಉದ್ದೇಶ ಹಣ ಪಡೆದು ನಕಲಿ ಮಾರ್ಕ್ಸ್ ಕಾರ್ಡ್ ಸೃಷ್ಟಿಸಿ ಮಾರಾಟ ಮಾಡುತ್ತಿವೆ, ಇವುಗಳ ವಿರುದ್ದ ಕೆಲವು ವಿದ್ಯಾರ್ಥಿಗಳೇ ಕೇಸ್ ಮಾಡಿದ್ದಾರೆ. ಇನ್ನೂ ಈ ವಿವಿಗಳಿಂದ ಪಡೆದ ಶಿಕ್ಷಣ ಯಾವುದಕ್ಕೂ ಪ್ರಯೋಜನ ವಿಲ್ಲದೆ ರದ್ದಿಯಾಗಿದೆ ಇವುಗಳೆಲ್ಲವನ್ನು ಗಮನಕ್ಕೆ ತೆಗೆದುಕೊಂಡ ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್ ಸುಮಾರು 24 ನಕಲಿ ವಿವಿಗಳನ್ನು ಪತ್ತೆ ಹಚ್ಚಿದೆ ಅದರಲ್ಲಿ 2 ವಿವಿಗಳು ಯುಜಿಸಿಯಿಂದ ಎಫ್ ಐ ಆರ್ ಸಹ ಪಡೆದುಕೊಂಡಿವೆ.

ಇದರಲ್ಲಿ ಕರ್ನಾಟಕದ ಒಂದು ವಿವಿ ಕೂಡ ನಕಲಿ ಪಟ್ಟಿಗೆ ಸೇರಿದೆ. ಕರ್ನಾಟಕದ ಬದಗನ್ವಿ ಸರ್ಕಾರ್ ಓಪನ್ ಯುನಿವರ್ಸಿಟಿ ಸಹ ಫೇಕ್ ವಿವಿಗಳ ಪಟ್ಟಿಯಲ್ಲಿ ಇದೆ. ಈ ವಿಶ್ವವಿದ್ಯಾನಿಲಯಗಳಲ್ಲಿ ಡಿಗ್ರಿ ಪಡೆದುಕೊಳ್ಳಲು ಮುಂದಾಗಿದ್ದರೆ ಒಮ್ಮೆ ಯೋಚನೆ ಮಾಡಿ. ಈಗಾಗಲೇ ಈ ವಿವಿ ಯಿಂದ ಪಡೆದ ಮಾರ್ಕ್ಸ್ ಕಾರ್ಡ್-ಗಳು ಕೂಡ ನಕಲಿಯಾಗಿವೆ ಎಂದು ತಿಳಿಸಿದೆ. ಅದರಂತೆ ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್ ಪತ್ತೆ ಹಚ್ಚಿದ 24 ವಿವಿಗಳ ವಿವರ ಇಲ್ಲಿದೆ.

Also read: ಗಂಡು ಮಗು ಬೇಕು ಅಂತ ಹೆಣ್ಣು ಮಗು ದ್ವೇಷಿಸುವ ಸಮಾಜಕ್ಕೆ ಮಾದರಿಯಾದ ಕತೆ; ಹೆಣ್ಮಗು ಆಯ್ತು ಅಂತಾ ಕೋಟಿ ವೆಚ್ಚದ ಗುಡಿ ಕಟ್ಟಿದ ತಂದೆ..

ಯುಜಿಸಿಯಿಂದ ಎಫ್ ಐ ಆರ್ ಪಡೆದುಕೊಂಡ ವಿವಿಗಳು:

1. ಇಸ್ಟಿಟ್ಯೂಟ್ ಆಫ್ ಪ್ಲಾನಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್[ಐಐಪಿಎಂ] ನವದೆಹಲಿ
2. ಬಯೋ ಕೆಮಿಕ್ ಎಜುಕೇಶನ್ ಗ್ರಾಂಟ್ಸ್ ಕಮಿಷನ್ ನೋಯ್ಡಾ, ಪಶ್ಚಿಮ ಜಜ್ಮ್ಹ್ಹೈಉಬ್ ಒಇಒಇಬ್ ಇಪ್ ಬಂಗಾಳ

ಯುಜಿಸಿ ಪ್ರಕಾರ ನಕಲಿ ವಿವಿಗಳು:

1. ಮೈಥಿಲಿ ಯುನಿವರ್ಸಿಟಿ , ದರ್ಭಾಂಗಾ ಬಿಹಾರ್
2. ಕಮರ್ಷಿಯಲ್ ಯುನಿವರ್ಸಿಟಿ ಲಿಮಿಟೆಡ್, ದೆಹಲಿ
3. ಯುನೈಟೆಡ್ ನೇಶನ್ ಯುನಿವರ್ಸಿಟಿ
4. ವಕೇಶನಲ್ ಯುನಿವರ್ಸಿಟಿ, ದೆಹಲಿ
5. ಎಡಿಆರ್‌-ಸೆಂಟ್ರಿಕ್ ಜುರ್ಡಿಶಿಯಲ್ ಯುನಿವರ್ಸಿಟಿ, ನವದೆಹಲಿ
6. ಇಂಡಿಯನ್ ಇಸ್ಟಿಟ್ಯೂಟ್ ಆಫ್ ಸೈನ್ಸ್, ನವದೆಹಲಿ
7. ವಿಶ್ವಕರ್ಮ ಒಪನ್ ಯುನಿವರ್ಸಿಟಿ, ದೆಹಲಿ
8. ಆಧ್ಯಾತ್ಮಿಕ ವಿಶ್ವವಿದ್ಯಾನಿಲಯ, ದೆಹಲಿ
9. ಬದಗನ್ವಿ ಸರ್ಕಾರ್ ಓಪನ್ ಯುನಿವರ್ಸಿಟಿ, ಗೋಕಾಕ, ಕರ್ನಾಟಕಕ
10. ಸೆ.ಜಾನ್ಸ್ ಯುನಿವರ್ಸಿಟಿ, ಕಿಶಾನಟ್ಟಂ, ಕೇರಳ
11. ರಾಜಾ ರೆಬಿಕ್ ಯುನಿವರ್ಸಿಟಿ, ನಾಗಪುರ, ಮಹಾರಾಷ್ಟ್ರ
12. ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಅರ್ಲನೇಟಿವ್ ಮೆಡಿಸಿನ್. ಕೋಲ್ಕತಾ
13. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅರ್ಲನೇಟಿವ್ ಮೆಡಿಸಿನ್ ರಿಸರ್ಚ್, ಥಕುರ್ಪುರ್‌ಕರ್, ಕೋಲ್ಕತಾ
14. ವರಂಸೇಯಾ ಸಂಸ್ಕೃತ ವಿಶ್ವವಿದ್ಯಾನಿಲಯ, ವಾರಣಾಸಿ
15. ಮಹಿಳಾ ಗ್ರಾಮ್ ವಿದ್ಯಾಪೀಠ, ಕಾನ್ಪುರ, ಉತ್ತರ ಪ್ರದೇಶ
17. ನೇತಾಜಿ ಸುಭಾಷ್ ಚಂದ್ರ ಬೋಸ್ ಯುನಿವರ್ಸಿಟಿ, ಅಲಿಘಡ, ಉತ್ತರ ಪ್ರದೇಶ
18. ಉತ್ತರ ಪ್ರದೇಶ ವಿಶ್ವವಿದ್ಯಾನಿಲಯ, ಮಥುರಾ, ಉತ್ತರ ಪ್ರದೇಶ
19. ಮಹಾರಾಣಾ ಪ್ರತಾಪ್ ಶಿಕ್ಷಾ ನಿಕೇತನ್ ವಿಶ್ವವಿದ್ಯಾನಿಲಯ, ಪ್ರತಾಪಘಡ, ಉತ್ತರ ಪ್ರದೇಶ
20. ಇಂದ್ರಪ್ರಸ್ಥ ಶಿಕ್ಷಾ ಪರಿಷತ್, ಉತ್ತರ ಪ್ರದೇಶ
21. ನವಭಾರತ್ ಶಿಕ್ಷಾ ಪರಿಷತ್, ರೋರ್ಕೆರಾ
22. ನಾರ್ಥ್ ಓರಿಸ್ಸಾ ವಿಶ್ವವಿದ್ಯಾನಿಲಯ ಫಾರ್ ಅಗ್ರಿಕಲ್ಚರ್, ಟೆಕ್ನಾಲಜಿ, ಓರಿಸ್ಸಾ
24. ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಣ್, ಪಾಂಡಿಚೇರಿ.