ವೈದ್ಯಲೋಕದಲ್ಲಿ ಮತ್ತೊಂದು ಇತಿಹಾಸ; ಏಡ್ಸ್​ ರೋಗಕ್ಕೆ ಯಶಸ್ವಿ ಚಿಕಿತ್ಸೆ ಏಡ್ಸ್ ವೈರಸ್‍ನಿಂದ ಮುಕ್ತನಾದ ವಿಶ್ವದ ಎರಡನೇ ವ್ಯಕ್ತಿ..!

0
1747

ಇಡಿ ಮಾನವ ಕುಲವೇ ಭಯದಲ್ಲಿ ಜೀವನ ಮಾಡುತ್ತಿರುವ ಒಂದೇ ಒಂದು ವಿಷಯ ಅಂದರೆ ‘ಏಡ್ಸ್’ ಈ ಮಾರಕ ಒಂದು ಸಲ ಬಂದರೆ ಮುಗಿತು ವ್ಯಕ್ತಿಯ ಜೀವನ ಇಲ್ಲಿಗೆ ಅಂತ್ಯೆ ಅನುವುದರಲ್ಲಿ ಅನುಮಾನವಿಲ್ಲ. ಅಷ್ಟೊಂದು ಕೆಟ್ಟ ಹೆಸರು ಪಡೆದ ಖಾಯಿಲೆ ಇದಾಗಿದೆ. ಈ ಖಾಯಿಲೆಗೆ ಬರಿ ಸಾವು ಬರಬಹುದು ಆದರೆ ಸಾಮಾಜದಲ್ಲಿ ಸಿಗುವ ಗೌರವವೇ ಅರ್ಧ ಸಾವನ್ನು ತರುತ್ತೆ. ಏಕೆಂದರೆ ಈ ಏಡ್ಸ್ ಅಷ್ಟೊಂದು ಘೋರವಾದದ್ದು ಎನ್ನುವುದು ಜನರಲ್ಲಿ ಅಚ್ಚ್ ಅಳಿದಿದೆ. ಇನ್ನೂ ಈ ಖಾಯಿಲೆಗೆ ಔಷಧಿ ಕಂಡು ಹಿಡಿಯಲು ಸಾವಿರಾರು ಸಂಶೋಧನೆಗಳು ವಿಫಲವಾಗಿವೆ. ಈಗ ಏಡ್ಸ್​ ರೋಗಕ್ಕೆ ಯಶಸ್ವಿ ಚಿಕಿತ್ಸೆ ನಡೆದಿದೆ.

Also read: ಇನ್ಮುಂದೆ ಕ್ಯಾನ್ಸರ್ ಖಾಯಿಲೆಗೆ ಹೆದರಬೇಕಿಲ್ಲ; ಅಂತು ಇಂತೂ ಕ್ಯಾನ್ಸರ್‌ಗೆ ಪರಿಣಾಮಕಾರಿ ಔಷಧಿ ಕಂಡು ಹಿಡಿದ ಇಸ್ರೇಲ್ ವಿಜ್ಞಾನಿಗಳು..

ಏಡ್ಸ್ ರೋಗಕ್ಕೆ ಯಶಸ್ವಿ ಚಿಕಿತ್ಸೆ?

ಹೌದು ನಂಬಲು ಸಾದ್ಯವಾಗದ ಸಾಧನೆಯನ್ನು ವೈದ್ಯಲೋಕವು ಮಾಡಲು ಹೊರಟಿದೆ. ಸ್ವಲ್ಪ ದಿನಗಳ ಹಿಂದೆ ಮನು ಕುಲಕ್ಕೆ ಮಾರಕ ಕಾಯಿಲೆ ಕ್ಯಾನ್ಸರ್​ಗೆ ಔಷಧಿ ಕಂಡು ಹಿಡಿದಿರುವುದಾಗಿ ಇಸ್ರೇಲ್​ ವಿಜ್ಞಾನಿಗಳು ತಿಳಿಸಿದರು. ಇದರ ಬೆನ್ನಲ್ಲೇ ಈಗ ಏಡ್ಸ್​ ವೈರಸ್​ಗಳಿಂದ ಜೀವ ಉಳಿಸಬಹುದೆಂದು ಲಂಡನ್ ವೈದ್ಯರು ಸಾಧಿಸಿ ತೋರಿಸಿದ್ದಾರೆ. ಈ ಸಾಧನೆ ವಿಜ್ಞಾನ ಲೋಕಕ್ಕೆ ತುಂಬಾ ಉಪಯುಕ್ತ ಸಂಶೋಧನೆಯಾಗಿದ್ದು, ಇದು ಹೆಚ್ಐವಿ-ಪಾಸಿಟಿವ್ ಜನರಿಗೆ ಬದುಕುವ ಬಗ್ಗೆ ಹೊಸ ಭರವಸೆ ಮೂಡಿಸಲಿದೆ.

ಸ್ಟೆಮ್ ಸೆಲ್ ಟ್ರಾನ್ಸ್​ಪ್ಲಾಂಟ್ ಮೂಲಕ ಯಶಸ್ವಿ;

Also read: ನೀವು ಈ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದೀರ? ಹಾಗಾದ್ರೆ ಪಕ್ಕಾ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಚ್ಚರ…

ಇಂಗ್ಲೆಂಡ್ ಮೂಲದ ವ್ಯಕ್ತಿಯೊಬ್ಬರಲ್ಲಿ ಏಡ್ಸ್ ವೈರಸ್​ ಕಾಣಿಸಿಕೊಂಡಿತ್ತು. ಇದನ್ನು ಸ್ಟೆಮ್ ಸೆಲ್ ಟ್ರಾನ್ಸ್​ಪ್ಲಾಂಟ್ ಮೂಲಕ ಗುಣಪಡಿಸಲು ಡಾಕ್ಟರುಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ ಮಹಾಮಾರಿಯನ್ನು ಚಿಕಿತ್ಸೆಯ ಮೂಲಕ ಗುಣಪಡಿಸುವ ಮಹತ್ತರ ಸಾಧನೆಯನ್ನು ಮಾಡಿದ್ದಾರೆ. ಈ ಹಿಂದೆ ಅಮೆರಿಕ ಮೂಲದ ವ್ಯಕ್ತಿಯೊಬ್ಬರನ್ನು ಅಪಾಯಕಾರಿ ಏಡ್ಸ್​ ವೈರಾಣುಗಳಿಂದ ಕಾಪಾಡುವಲ್ಲಿ ಬರ್ಲಿನ್ ವೈದ್ಯರು ಯಶ ಕಂಡಿದ್ದರು. ಇದೀಗ ಹೆಚ್​ಐವಿ ರೋಗದಿಂದ ಎರಡನೇ ವ್ಯಕ್ತಿಯನ್ನು ಚಿಕಿತ್ಸೆ ಮೂಲಕ ಗುಣಪಡಿಸಿರುವುದು ಹೊಸ ಆಶಾದಾಯಕ ಬೆಳವಣಿಗೆಯಾಗಿದೆ.

ಈ ಎಚ್‍ಐವಿ ಸೋಂಕನ್ನು ಪ್ರತಿರೋಧಿಸುವ ವಿರಳ ವಂಶವಾಹಿ ಪರಿವರ್ತನೆ ಗುಣ ಹೊಂದಿರುವ ದಾನಿಯ ಸ್ಟೇಮ್ ಸೆಲ್‍ಗಳಿಂದ(ಆಕರಕೋಶಗಳು) ಎಲುಬು ಸ್ವೀಕರಿಸಿ ಲಂಡನ್‍ನ ಎಚ್‍ಐವಿ ಬಾಧಿತನಿಗೆ ಮೂರು ವರ್ಷಗಳ ಹಿಂದೆ ಕಸಿ ಮಾಡಲಾಗಿತ್ತು. ರೋಗ ನಿವಾರಣೆಯ ಪ್ರಬಲ ಪ್ರತಿರೋಧಕ ಔಷಧಗಳನ್ನು ನೀಡಿದ 18 ತಿಂಗಳುಗಳ ತರುವಾಯ ಇದು ಫಲ ನೀಡಿದೆ. ಈ ಹಿಂದೆ ಇದ್ದ ಏಡ್ಸ ಕಾರಕ ವೈರಾಣುಗಳು ಸಂಪೂರ್ಣ ನಿರ್ಮೂಲನೆಯಾಗಿವೆ ಆತನನ್ನು ವಿವಿಧ ಪ್ರಯೋಗ ಮತ್ತು ಪರೀಕ್ಷೆಗಳಿಗೆ ಒಳಪಡಿಸಿದ ನಂತರ ವ್ಯಕ್ತಿಯ ಶರೀರದಲ್ಲಿ ಅಪಾಯಕಾರಿ ವೈರಾಣುಗಳು ಇಲ್ಲದಿರುವುದು ಕಂಡುಬಂದಿದೆ ಎಂದು ಈ ವ್ಯಕ್ತಿಗೆ ಚಿಕಿತ್ಸೆ ನೀಡಿದ ತಜ್ಞ ವೈದ್ಯರ ತಂಡದ ನೇತೃತ್ವ ವಹಿಸಿದ್ದ ಹಿರಿಯ ಪ್ರೊಫೆಸರ್ ಮತ್ತು ಎಚ್‍ಐವಿ ಜೀವಶಾಸ್ತ್ರಜ್ಞ ಡಾ. ರವೀಂದ್ರ ಗುಪ್ತ ವಿವರಿಸಿದ್ದಾರೆ.

Also read: ಮಹಿಳೆಯರೇ ಸ್ತನ ಕ್ಯಾನ್ಸರ್-ನ ಈ ಲಕ್ಷಣಗಳು ಕಂಡರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ, ದಯವಿಟ್ಟು ನಿರ್ಲಕ್ಷಿಸಬೇಡಿ!!

ಇದೊಂದು ಅತ್ಯಂತ ವಿರಳಾತಿ ವಿರಳ ವೈದ್ಯಕೀಯ ಸಂಶೋಧನೆಯಾಗಿದೆ. ಈ ಪ್ರಕರಣವು ಶತಮಾನದ ಹೆಮ್ಮಾರಿ ಏಡ್ಸ್ ನಿರ್ಮೂಲನೆ ಮಾಡಲು ಮುಂದೊಂದು ದಿನ ವೈದ್ಯರು ಮತ್ತು ವಿಜ್ಞಾನಿಗಳಿಗೆ ನೆರವಾಗುವ ಆಶಾದಾಯಕ ಪರಿಕಲ್ಪನೆಯ ಪರೀಕ್ಷೆ ಎನಿಸಿದೆ. ಈ ಹಿಂದಿನ ಏಡ್ಸ್​ ಚಿಕಿತ್ಸೆಗೆ ಹೋಲಿಸಿದರೆ, ಲಂಡನ್​ ರೋಗಿಯ ಕಸಿ ಚಿಕಿತ್ಸೆಗಾಗಿ ಕಡಿಮೆ ಖರ್ಚು ಮಾಡಲಾಗಿದೆ. ಇದು ರಾಸಾಯನಿಕ ವಿಧಾನದಲ್ಲಿ ನಡೆಸಲಾಗಿದ್ದು, ಯಾವುದೇ ರೇಡಿಯೇಷನ್​ ಅನ್ನು ಬಳಸಲಾಗಿಲ್ಲ. ಹಾಗೆಯೇ ಚಿಕಿತ್ಸೆ ತುಂಬಾ ಸುಲಲಿತವಾಗಿತ್ತು ಎಂದು ಡಾ. ಗೀರೊ ಹಟ್ಟರ್ ತಿಳಿಸಿದ್ದಾರೆ. ಆದರೆ ಈ ಪ್ರಯೋಗ ಇನ್ನೂ ಶೈಶಾವಸ್ಥೆಯಲ್ಲಿದ್ದು, ದೊಡ್ಡ ಮಟ್ಟದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಳು ನಡೆಯುವ ಅಗತ್ಯವಿದೆ ಎಂದು ನುರಿತ ತಜ್ಞರು ಹೇಳುತ್ತಾರೆ.