ಪ್ಯಾಂಟಿಸ್-ನಲ್ಲಿ ಗಣೇಶನ ಚಿತ್ರ; ಅನ್ಯ ಧರ್ಮಿಯರ ದೇವರನ್ನು ಈ ರೀತಿ ಮಾಡಿದ್ದರೆ ಸುಮ್ಮನಿರುತ್ತಿದ್ದರೆಯೇ?? ಅಮೇರಿಕ ಕಂಪನಿಯ ಉದ್ದಾಟತನ!!

0
191

ಅಮೆರಿಕ: ಭಾರತದಲ್ಲಿ ವಿಘ್ನ ವಿನಾಯಕನಿಲ್ಲದ ಯಾವುದೇ ಕಾರ್ಯಕ್ರಮ ಊಹಿಸಿಕೊಳ್ಳುವುದು ಅಸಾಧ್ಯ. ಆತನಿಗೆ ಪೂಜೆ ಸಲ್ಲಿಸದೆ ಹೊಸ ಕಾರ್ಯಗಳು ಆರಂಭವಾಗುವುದೇ ವಿರಳ. ಅಂತಹ ಅತ್ಯುನ್ನತ ಸ್ಥಾನದಲ್ಲಿ ಗಣೇಶನನ್ನ ನಾವೆಲ್ಲಾ ಕೂರಿಸಿದ್ದೇವೆ. ಇಂತಹ ಗಣೇಶನೀಗ ಅಮೆರಿಕಾದ ಕಂಪನಿಯೊಂದು ಅಪಮಾನವೆಸಗಿದೆ.

ಆ ಕಂಪನಿ ಮಾಡಿದ ಅಪಮಾನ ಅಂತಿತದ್ದಲ್ಲ. ಯಾವ ಜಾಗದಲ್ಲಿ ಗಣೇಶನನ್ನ ಕೂರಿಸಬಾರದೋ ಅಲ್ಲಿ ಪ್ರತಿಷ್ಟಾಪನೆ ಮಾಡಿ ಹಿಂದೂಗಳ ಧಾರ್ಮಿಕ ಸಂಪ್ರದಾಯಕ್ಕೆ ಚ್ಯುತಿ ಬರುವಂತೆ ನಡೆದುಕೊಂಡಿದೆ. ಕಂಪನಿಯ ಈ ಹೊಣೆಗೇಡಿ ವರ್ತನೆಗೆ ಅಮೇರಿಕಾದಲ್ಲಿನ ಹಿಂದೂಗಳಿಂದ ಪ್ರತಿರೋಧ ವ್ಯಕ್ತವಾಗಿದೆ.
ಅಷ್ಟಕ್ಕೂ ಆ ಕಂಪನಿ ಮಾಡಿರುವುದೇನು ಅಂತಿರಾ..? ಪ್ರಥಮ ಪೂಜಿತ ವಿನಾಯಕನ ಚಿತ್ರವನ್ನು ಮಹಿಳೆಯರ ಕಾಚದ ಮೇಲೆ ಪ್ರಿಂಟ್ ಮಾಡಿ ಆ ಕಂಪನಿ ಮಾರಾಟಕ್ಕಿಟ್ಟಿದೆ. ಹಿಂದೂಗಳ ಭಾವನೆಗೆ ಧಕ್ಕೆಯಾಗುವಂತೆ ನಡೆದುಕೊಂಡಿರುವ ಈ ಕಂಪನಿಯ ಹೆಸರು ಎಟ್ಸಿ ಎಂದು.

ಅಮೇರಿಕಾದ ಎಟ್ಸಿ ಅನ್ನೋ ಈ ಕಾಮರ್ಸ್ ಕಂಪನಿ, ಭಾರತೀಯ ದೇವರುಗಳ ವಿಚಾರದಲ್ಲಿ ಈ ಹಿಂದೆಯೂ ಇಂತಹದ್ದೇ ಅಸಡ್ಡೆಯ ವರ್ತನೆಯನ್ನು ದಾಖಲಿಸಿತ್ತು. ಹಿಂದೊಮ್ಮೆ ಗಣೇಶನ ಆಶ್ಟ್ರೇ ಮತ್ತು ಟಾಯ್ಲೆಟ್ ಸೀಟುಗಳನ್ನ ಮಾಡಿ ಜನಾಕ್ರೋಶಕ್ಕೆ ಕಾರಣವಾಗಿತ್ತು. ಆಗಲೂ ಇಂತಹದ್ದೇ ವಿರೋಧ ಬಂದ ಕಾರಣದಿಂದ ಅದನ್ನು ತೆಗೆದು ಹಾಕಿತು. ಇದಾದ ಬಳಿಕ ಚಪ್ಪಲಿನಲ್ಲಿ ಗಣೇಶ, ಕಂಚುಕದಲ್ಲಿ ಲಕ್ಷ್ಮೀ ಚಿತ್ರ ಹಾಕಿ ಮತ್ತೊಂದು ವಿವಾದವನ್ನು ಮೈಮೇಲೆಳೆದುಕೊಂಡಿತ್ತು. ಹೀಗೆ ವರ್ಷಕ್ಕೊಂದು ಬಾರಿ ಹಿಂದೂ ದೇವತೆಗಳ ಚಿತ್ರಗಳಿಗೆ ಅಪಮಾನ ಮಾಡುವುದನ್ನೇ ಈ ಕಂಪನಿ ಖಯಾಲಿಯಾಗಿಸಿಕೊಂಡಿತ್ತು. ಈಗ ಅದರ ಮುಂದುವರೆದ ಭಾಗವಾಗಿ ಅಂಡರ್ ವೇರ್ ಮೇಲೆ ಗಣೆಶನನ್ನು ಮುದ್ರಿಸಿ ಮಾರಾಟಕ್ಕಿಟ್ಟು ಅಮೇರಿಕಾದಲ್ಲಿನ ಹಿಂದೂಗಳನ್ನು ಎದುರು ಹಾಕಿಕೊಂಡಿದೆ.

ಹೀಗೆ ಹಿಂದೂ ದೇವರಿಗೆ ಅಪಮಾನ ಮಾಡಿದ ಕಂಪನಿ ವಿರುದ್ದ ಅಮೇರಿಕಾದ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಮುದ್ರಿತ ಬಟ್ಟೆಗಳ ವ್ಯಾಪಾರ ನಿಲ್ಲಿಸುವಂತೆ ಒತ್ತಾಯಿಸಿವೆ. ವಾಣಿಜ್ಯೀಕರಣಕ್ಕಾಗಿ ಹಿಂದೂ ದೇವರುಗಳಿಗೆ ಅಪಮಾನ ಮಾಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದೆ. ಇತ್ತ ಜನಾಕ್ರೋಶ ವ್ಯಕ್ತವಾದ ಬಳಿಕ ಕಂಪನಿ ಹೇಳಿಕ ನೀಡಿದ್ದು ತಪ್ಪನ್ನು ಸರಿಪಡಿಸಿಕೊಳ್ಳುವ ಮಾತು ನೀಡಿದೆ.

Also read: ಇನ್ಮುಂದೆ ಗೂಗಲ್ ಪೇ, ಫೋನ್ ಪೇ ಅಷ್ಟೇ ಅಲ್ಲ.. ವಾಟ್ಸಾಪ್ ಮೂಲಕವೂ ಹಣ ಕಳುಹಿಸಬಹುದು..!