ಕೆ.ಎಸ್.ಆರ್.ಟಿ.ಸಿ. ಬಸ್ ಬ್ರೇಕ್ ಫೇಲ್ ಆದಾಗ, ತನ್ನ ಲಾರಿಗೆ ಗುದ್ದಿಸಿ ಗುದ್ದಿಸಿಕೊಂಡು 70 ಜನರ ಜೀವ ಉಳಿಸಿದ ಲಾರಿ ಚಾಲಕನ ಬಗ್ಗೆ ಓದಲೇ ಬೇಕು..

0
600

ಗಟ್ಟ ಪ್ರದೇಶದ ಇಳಿಜಾರಿನಲ್ಲಿ ವಾಹನಗಳನ್ನು ಚಲಾಯಿಸುವುದು ಎಲ್ಲರಿಗೂ ಆಗೋದಿಲ್ಲ ಏಕೆಂದರೆ ತಿರುವು ರಸ್ತೆ ಇರುವುದರಿಂದ ಅಪಘಾತಗಳು ಹೆಚ್ಚು ಆಗುತ್ತೇವೆ. ಈ ಪ್ರದೇಶದಲ್ಲಿ ಚಾಲಕನ ಗಮನ ಸ್ವಲ್ಪ ಬೇರೆಡೆ ಹೋದರೆ ಮುಗಿತು ಬಸ್ ಕೈ ಗೆ ಸಿಗುವುದೇ ಇಲ್ಲ ಅಷ್ಟೋಂದ ಗಾಟ್ ಇದೆ. ಇನ್ನೂ ಈ ರಸ್ತೆಯಲ್ಲಿ ಏನಾದರು ವಾಹನಗಳ ಬ್ರೇಕ್ ಫೇಲ್ ಆದರೆ ಮುಗಿತು ವಾಹನ ಪ್ರಪಾತಕ್ಕೆ ಬಿಳ್ಳುವುದು ಗ್ಯಾರಂಟಿನೆ. ಇಂತಹ ಅಪಾಯಕಾರಿ ರಸ್ತೆಯಲ್ಲಿನೆ ಬ್ರೇಕ್ ಪೆಲಾದ ಬಸ್-ನ್ನು ಲಾರಿ ಚಾಲಕ ನಿಲ್ಲಿಸಿ ಸಾಹಸ ಮಾಡಿದ್ದಾನೆ.

ಹೌದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ ಪ್ರದೇಶದ ಇಳಿಜಾರಿನಲ್ಲಿ ಬಸ್ ಚಾಲಕನ ಸಮಯಪ್ರಜ್ಞೆ ಹಾಗೂ ಲಾರಿ ಚಾಲಕನ ಚಾಣಾಕ್ಷತೆಯಿಂದ 70ಕ್ಕೂ ಅಧಿಕ ಪ್ರಯಾಣಿಕರ ಜೀವ ಉಳಿದ ಘಟನೆ ನಡೆದಿದೆ ಈ ಸಾಹಸವನ್ನು ಮಾಡಿದ ರಿಯಲ್ ಹೀರೋಗಳು ಲಾರಿ ಚಾಲಕ ಈರಣ್ಣ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಚಾಲಕ ಕತ್ತಿ ಕಾನಾಪುರ್ ತಮ್ಮ ಜೀವದ ಹಂಗು ತೊರೆದು ಬಸ್ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಬ್ರೇಕ್ ಫೇಲ್ ಆಗಿದ್ದ ಬಸ್ಸನ್ನು ನಿರಂತರವಾಗಿ ಲಾರಿಗೆ ಡಿಕ್ಕಿ ಹೊಡೆಸಿಕೊಳ್ಳುವ ಮೂಲಕ ಬಸ್ ವೇಗ ತಗ್ಗಿಸಿ ಪ್ರಯಾಣಿಕರನ್ನು ಅಪಘಾತದಿಂದ ಪಾರು ಮಾಡಿದ್ದಾರೆ.

ಏನಿದು ಸಾಹಸ?

ಕೆ.ಎ 26 ಎಫ್ 1025 ನಂಬರಿನ ಬಸ್ ಹುಬ್ಬಳ್ಳಿಯಿಂದ ಕಾರವಾರಕ್ಕೆ ಹೊರಟಿದ್ದ ಗದಗ ಡಿಪೋ ಗೆ ಸೇರಿದ ಅರಬೈಲ್ ಇಳಿಜಾರಿನಲ್ಲಿ ವೇಗವಾಗಿಯೇ ಹೊಗುತ್ತಿದ ಬಸ್ ಅದೇನ್ ಆಯಿತೋ ಗೊತ್ತಿಲ್ಲ ಇಳಿಜಾರಿನಲ್ಲಿ ಆಗಮಿಸುತ್ತಿದಂತೆ ಬ್ರೇಕ್ ಫೇಲ್ ಆಗಿತ್ತು. ಇದನ್ನು ಅರಿತ ಚಾಲಕ ಎಷ್ಟೇ ಪ್ರಯತ್ನ ಪಟ್ಟರು ಇಳಿಜಾರಿನಲ್ಲಿ ವೇಗವಾಗಿ ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣಕ್ಕೆ ಬರಲಿಲ್ಲ. ಈ ಸಮಯದಲ್ಲಿ ಬಸ್ ಕಂದಕಕ್ಕೆ ಉರುಳುವ ಸಾಧ್ಯತೆ ಇತ್ತು. ಇದನ್ನು ತಿಳಿದ ಬಸ್ಸಿನಲ್ಲಿದ್ದ ಪ್ರಯಾಣಿಕರು ಕಿರುಚಾಡಿದ್ದಾರೆ.

@timesofindia.indiatimes.com

ಈ ವೇಳೆ ಮುಂದೆ ಚಲಿಸುತ್ತಿದ್ದ ಲಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಎರಡು ಬಾರಿ ಬಸ್ ಡಿಕ್ಕಿಯಾದ ನಂತರ ಬಸ್ಸಿನ ಬ್ರೇಕ್ ಫೇಲ್ ಆಗಿರುವುದನ್ನು ಅಂದಾಜಿಸಿದ ಗೊಬ್ಬರ ಸಾಗಿಸುತ್ತಿದ್ದ ಲಾರಿ ಚಾಲಕ ಈರಣ್ಣ, ಬಸ್ಸನ್ನು ನಿರಂತರವಾಗಿ ತನ್ನ ಲಾರಿಗೆ ಗುದ್ದಿಸಿಕೊಂಡು ಬಸ್ಸಿನ ವೇಗ ಕಡಿಮೆ ಮಾಡಿದ್ದಾರೆ. ಬಸ್ ಚಾಲಕ ಕೂಡ ಹೆದರದೆ ಲಾರಿಯ ಹಿಂಬಾಗಕ್ಕೆ ನಿರತರವಾಗಿ ಟಚ್ ಮಾಡುತ್ತಾನೆ ಬಂದಿದ್ದಾರೆ.

ಇದೆ ಪ್ರಯತ್ನದಲ್ಲಿ ವೇಗ ಕಡಿಮೆ ಮಾಡಿಕೊಂಡ ಬಸ್ ಸುಮಾರು 4 ಕಿಮೀ ದೂರ ಚಲಿಸಿ ಅರಬೈಲ್ ಘಟ್ಟದ ಇಳಿಜಾರು ಮುಗಿದ ನಂತರ ನಿಂತಿತು. ಅಪಘಾತದ ಪರಿಣಾಮ ಲಾರಿ ಹಿಂಭಾಗ ಹಾಗೂ ಬಸ್ ಮುಂಭಾಗಕ್ಕೆ ಹಾನಿಯಾಗಿದೆ. ಬಸ್ ನಿಂತ ಕೂಡಲೇ ಸ್ಥಳದಲ್ಲಿ ಜನರು ಜಮಾಯಿಸಿದ್ದು, ಲಾರಿ ಚಾಲಕ ಈರಣ್ಣ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಏನೇ ಆಗಲಿ ಲಾರಿ ಚಾಲಕ ಮತ್ತು ಬಸ್ ಚಾಲಕರ ಸಾಹಸದಿಂದ 70 ಕ್ಕೂ ಹೆಚ್ಚು ಜೀವಗಳು ಉಳಿದಿವೆ.

Also read: ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ಜನರಿಗೆ ಸಿ.ಎಂ.ಪರಿಹಾರ ನಿಧಿಯಿಂದ ಜನರಿಗೆ ಸಹಾಯ ಆಗ್ತಿರೋದು!!