ಕೇವಲ ಒಂದು ಮೊಬೈಲ್ ಸ್ವೀಚ್ ಆಫ್ ಆಗಿದ್ದಕ್ಕೆ ನನ್ನ ಪ್ರೀತಿಯನ್ನು ಕಳೆದುಕೊಂಡ ಅಮಾಯಕ ನಾನು…..

0
1550

ನಂದು ಒಂದು ಹಳ್ಳಿ ಹಳ್ಳಿಯಿಂದ ಬಂದು ಸಿಟಿ ನಲ್ಲಿ ಕಾಲೇಜೆಗೆ ಹೋಗುವ ಹುಡುಗ ನಾನು. ಹೀಗೆ ಪ್ರತಿದಿನ ಕಾಲೇಜು ಮುಗಿಸಿಕೊಂಡು. ಸಂಜೆಯ ಸಮಯದಲ್ಲಿ ನಾನು ಕೆಲಸಕ್ಕೆ ಹೋಗುತ್ತಿದೆ. ಪ್ರತಿದಿನ ನಂದು ಇದೆ ಕೆಲಸ ಕಾಲೇಜು ಮುಗಿಸಿಕೊಂಡು ಕೆಲ್ಸಕ್ಕೆ ಹೋಗುವುದು.

Image result for college student

ಯಾಕೆ ಅಂದ್ರೆ ನಮ್ಮದು ಒಂದು ಬಡ ಕುಟುಂಬ ಹಾಗಾಗಿ ನಾನು ಕೆಲಸಕ್ಕೆ ಹೋಗುತ್ತಿದೆ. ನನ್ನ ಕೆಲಸ ಒಂದು ಮೊಬೈಲ್ ಶಾಪ್ ನಲ್ಲಿ ಕರೆನ್ಸಿ ಹಾಕುವುದು. ಹೀಗೆ ಕೆಲಸ ಮಾಡುತ್ತಿದ್ದೆ ಒಂದು ದಿನ ನಮ್ಮ ಶಾಪ್ ಗೆ ಒಬ್ಬ ತಂದೆ ಮತ್ತು ಮಗಳು ಬಂದು ೨೦೦ ರೂ ಕರೆನ್ಸಿ ಹಾಕಲು ಹೇಳಿದರು. ಆದ್ರೆ ನಂಗೆ ಅವಾಗ ಏನೋ ಒಂಥರಾ ಅನಿಸಿದ್ದು ಉಂಟು ಏಕೆ ಅಂದ್ರೆ ಆ ಹುಡುಗಿಯನ್ನು ಎಲ್ಲೋ ನೋಡಿದ ಹಾಗೆ ಅನಿಸಿತು.

ಎಂದು ತಪ್ಪು ಮಾಡದ ನಾನು ಅಂದು ತಪ್ಪು ಮಾಡಿದೆ ಆ ಹುಡುಗಿಯ ನಂಬರ್ ಗೆ ಕರೆನ್ಸಿ ಹಾಕಿದ್ದೇನೆ ಅಂತ ಸುಳ್ಳು ಹೇಳಿ ಕಳುಹಿಸಿದೆ. ನಿಮಗೆ ಮೆಸಜ್ ಬರುತ್ತೆ ನೀವು ಹೋಗಿ ಅಂತ ಹೇಳಿದೆ. ಓಕೇ ಅಂದು ಹೊರಟರು ಸಂಜೆ ಬಂತು ಕಾಲ್ ಏನ್ರಿ ನಮಗೆ ಕರೆನ್ಸಿ ಹಾಕಿಲ್ಲ ಏಕೆ ಮೋಸ ಮಾಡಿದ್ರ ಅಂತ ಏನು ತಿಳಿಯದ ಮುಗ್ದ ಮನಸಿನ ಮಾತು ಅದಾಗಿತ್ತು.

Related image

ನಾನು ಆಗ ಹೇಳಿದೆ ದಯವಿಟ್ಟು ಕ್ಷಮಿಸಿ ನಮ್ಮಲ್ಲಿ ಏನೋ ತೊಂದರೆ ಆಗಿದೆ ಅದ್ಕೊಸ್ಕರ ಬಂದಿಲ್ಲ ಅಂತ ಹೇಳಿದೆ ಆಗ ಹುಡುಗಿ ನಾವು ಏನ್ ಮಾಡುವುದು ನಮಗೆ ಬೇಕು ಕರೆನ್ಸಿ ಅಂದಳು. ಆಗ ನಾನು ಆಗಲ್ಲ ನಾಡಿದ್ದು ನಿಮಗೆ ಕರೆನ್ಸಿ ಸಿಗುತ್ತೆ ಅಂತ ಹೇಳಿದೆ.
ಹುಡುಗಿ ತುಂಬ ಬೇಜಾರದಿಂದ ಮಾತನಾಡಿದಳು. ಆಗ ನಾನು ಹೇಳಿದೆ ೧೦ ನಿಮಿಷ ಬಿಟ್ಟು ನೋಡಿ ನಿಮಗೆ ಕರೆನ್ಸಿ ಬರುತ್ತೆ. ನಾನು ಬೇರೆ ಕಡೆ ಹೋಗಿ ಹಾಕಿಸುತ್ತೆನೇ ಅಂದೇ. ಹೀಗೆ ನಮ್ಮ ಸಂಭಾಷಣೆ ಮುಂದುವರಿಯುತ್ತೆ. ಕಾಫೀ ತಿಂಡಿ ಮಾಡಿದ್ರ ಏನ್ ಮಾಡ್ತಿದೀರಾ ಅಂತ ನಾವು ಪ್ರತಿದಿನ ಮಾತನಾಡಲು ಶುರುಮಾಡಿದೆವು.

Related image

ದಿನ ಕಳೆದಂತೆ ಇದು ಪ್ರೀತಿಯಾಗಿ ಮುಂದುವರಿತು. ಒಬ್ಬರನ್ನು ಒಬ್ಬರು ಬಿಟ್ಟು ಇರಲಾರೆವು ಅನ್ನುವ ಮಟ್ಟಿಗೆ ನಮ್ಮ್ ಪ್ರೀತಿ ಬೆಳೆಯಿತು. ಹೀಗೆ ಒಂದು ದಿನ ನಾನು ನಮ್ಮ ಅಜ್ಜಿಯ ಊರಿಗೆ ಹೋಗಿದ್ದೆ ಆಗ ಒಂದು ಕರೆ ಬಂತು ನಂಗೆ ನಮ್ಮ ಹುಡುಗಿ ಕಡೆಯಿಂದ ನಾನು ನೀನು ಬೇಗ ಮದುವೆ ಆಗಬೇಕು ಇಲ್ಲ ಅಂದ್ರೆ ನಮ್ಮ ಮನೇಲಿ ನಮ್ಮ್ ಮಾವನಿಗೆ ಕೊಟ್ಟು ನನ್ನ ಮದುವೆ ಮಾಡ್ತಾರೆ ಅಂತ ಹೇಳಿದಳು.

Image result for forest with home

ಆಗ ನಾನು ಹೇಳಿದೆ ನಾನು ಊರಲ್ಲಿ ಇಲ್ಲ ನಮ್ಮ್ ಅಜ್ಜಿ ಊರಲ್ಲಿ ಇದೀನಿ ೨ ದಿನ ಬರ್ತೀನಿ ಏನು ಆಗಲ್ಲ ನೀನು ಸುಮ್ನೆ ಇರು ಅಂದೇ ಆಗ ನಮ್ಮ್ ಹುಡುಗಿ ಇಲ್ಲ ನೀನು ಈವಾಗಲೇ ಬರಬೇಕು ಅಂದಳು ನಾನು ಸರಿ ಬಿಡು ಬರ್ತೀನಿ ಅಂದೇ.
ಆದ್ರೆ ನಮ್ಮ್ ಅಜ್ಜಿಯ ಮನೆ ಹಳ್ಳಿಯ ಒಂದು ಕಾಡಿನಲ್ಲಿ ನಮ್ಮ ಅಜ್ಜಿ ಮನೆ ಇರೋದು ಅಲ್ಲಿ ಕರೆಂಟ್ ಇರಲಿಲ್ಲ ನನ್ನ ಮೊಬೈಲ್ ಚಾರ್ಜ್ ಆಗಿರಲಿಲ್ಲ.

Image result for mobile switch off

ನಮ್ಮ ಹುಡುಗಿ ನಂಗೆ ಪದೇ ಪದೇ ಕಾಲ್ ಮಾಡತಾನೆ ಇರ್ತಾಳೆ ಆದ್ರೆ ನನ್ನ ಮೊಬೈಲ್ ರಿಂಗ ಆಗಲ್ಲ ಯಾಕೆ ಅಂದ್ರೆ ನನ್ನ ಮೊಬೈಲ್ ಸ್ವಿಚ್ ಆಫ್ ಆಗಿರುತ್ತೆ. ಆದ್ರೂ ನಾನು ಅವತ್ತೇ ಹೊರತು ಕಾಡಿನಿಂದ ನೆಡಕೊಂಡು ಬಸ್ಸಿಗೆ ಅದೆಷ್ಟೋ ದೂರ ನೆಡಕೊಂಡೆ ಬರ್ತೀನಿ. ಬಂದು ನಮ್ಮ್ ಹುಡುಗಿಯ ಮನೆ ಸಮೀಪಕ್ಕೆ ಮಾರನೇ ದಿನ ಬಂದು ಅವಳಿಗಾಗಿ ಕಾಯುತ್ತ ನಿಂತ್ತಿದೆ.

Image result for A boy standing next to the house

ಆದ್ರೆ ಅವರ ಮನೆ ಮುಂದೆ ತುಂಬ ಜನ ಇದ್ರೂ ನಗೆ ಏನು ಅಂತ ಗೊತ್ತಾಗ್ತಿಲ್ಲ ಸುಮಾರು ಹೊತ್ತು ಅಲ್ಲೇ ಇದ್ದೆ.
ನಮ್ಮ ಹುಡುಗಿ ಮಾತ್ರ ಕಾಣಿಸುವುದಿಲ್ಲ. ಸ್ವಲ್ಪ ಸಮಯದ ನಂತರ ಅವರ ಮನೆಯಿಂದ ಒಂದು ಹೂವಿನ ಮಂಟಪ ಹೊತ್ತುಕೊಂಡು ಮುಂದೆ ಬಂದ್ರು ನಾನು ಅವರ ಅಜ್ಜಿ ಇರಬೇಕು ಅಂದು ಕೊಂಡು ನೋಡುತ್ತಿದ್ದೆ.

ಆ ಮಂಟಪದ ಎಡಗಡೆಯ ಭಾಗದಿಂದ ಸ್ವಲ್ಪ ಬಟ್ಟೆ ಜಾರಿತು ನಾನು ಕುಸಿದು ಕೆಳಗೆ ಬಿದ್ದೆ ಕಾರಣ ಅದು ನನ್ನ ಮುದ್ದು ಪ್ರೇಯಸಿಯ ಮುಖವಾಗಿತ್ತು.

Image result for Carrying dead in karnataka

ಇದಕ್ಕೆಲ್ಲ ಕಾರಣ ನನ್ನ ಮೊಬೈಲ್ ಸ್ವಿಚ್ ಆಫ್ ಆಗಿದ್ದು. ನಾನು ಮೋಸಗಾರ ನಾನು ಮದುವೆ ಆಗಲು ಇಷ್ಟವಿಲ್ಲದೆ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ ಅಂದುಕೊಂಡು ನಮ್ಮ ಹುಡುಗಿ ಇಂತಹ ಕೆಲಸ ಮಾಡಿದ್ದಾಳೆ….