ಒಂದೇ ಪ್ರೀತಿಗೆ ಮೂರು ಹೆಣ; ಓದುವುದು ಬಿಟ್ಟು ಲವ್ ಅಂತ ತಿರುಗುವ ಯುವಕ- ಯುವತಿಯರೇ ಎಚ್ಚರ.!

0
645

ಹದಿ ಹರೆಯದಲ್ಲಿ ಪ್ರೀತಿಗೆ ಬಿಳ್ಳುವ ಯುವತಿ-ಯುವಕರು ಮುಂದಿನ ಆಪತ್ತನ್ನು ಲೆಕ್ಕಿಸದೆ ಯವಸ್ಸಿಗೂ ಮೀರಿ ಪ್ರೀತಿಗೆ ಜಾರುತ್ತಾರೆ. ಆದರೆ ಕೆಲವು ಸಂದರ್ಭದಲ್ಲಿ ಪ್ರೀತಿಯಿಂದ ಆಗುವ ತೊಂದರೆಗಳು ಎರಡು ಮನೆಗಳನ್ನು ಶ್ಮಶಾನದ ವಾತಾವರಣಕ್ಕೆ ತರುತ್ತೇವೆ. ಏಕೆಂದರೆ ಬರಿ ಹೊಸ ಹೊಸ ಅನುಭವ ಹಂಚಿಕೊಳ್ಳುವುದರಲ್ಲಿರುವ ಈ ಯುವ ಪೀಳಿಗೆಗೆ ಯಾವುದೇ ಚಿಕ್ಕ ಸಮಸ್ಯೆ ಬಂದರೆ ಮೊದಲು ನೆನಪಿಗೆ ಬರುವುದು ಸುಸೈಡ್. ಇದಕ್ಕೆ ಸಾಕ್ಷಿಯಾದ ಘಟನೆ ಒಂದು ನಡೆದಿದ್ದು, ಓದುವುದನ್ನು ಬಿಟ್ಟು ಪ್ರೀತಿಯಲ್ಲಿ ಬಿಳ್ಳುವರಿಗೆ ಒಂದು ಎಚ್ಚರಿಕೆ ಅಂತಾನೆ ಹೇಳಬಹುದು.

Also read: ನಿಮ್ಮ ಸಂಗಾತಿಯಲ್ಲಿ ಧಿಡೀರನೆ ಈ ರೀತಿಯ ಬದಲಾವಣೆಗಳನ್ನು ಕಂಡರೆ, ಎಚ್ಚರ ಅವರು ಬೇರೆಯವರೊಂದಿಗೆ ಸಂಬಂಧ ಬೆಳೆಸಿರಬಹುದು!!

ಏನಿದು ಘಟನೆ?

ಹೌದು ಓದುವ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದು, ಅಪ್ರಾಪ್ತೆ ಸೇರಿ ಮೂವರು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಾಂಚನ(17) ಮೃತಪಟ್ಟ ಬಾಲಕಿ. ಮಂಚೇನಹಳ್ಳಿನವಳಾಗಿರುವ ಕಾಂಚನ, ಹೊನ್ನೇನಹಳ್ಳಿಯ ಯಶ್ವಂತ್(22)ನನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿ ವಿಷಯ ಕಾಂಚನ ಮನೆಯವರಿಗೆ ತಿಳಿದಿದೆ. ಇದರಿಂದ ಭಯಗೊಂಡ ಕಾಂಚನ ಮೊದಲು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ಹೊಟ್ಟೆ ನೋವು ತಾಳಲಾರದೇ ಅ.5ರಂದು ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ.

Also read: ಮೃತಪಟ್ಟ ಗಂಡನ ಮೃತದೇಹಕ್ಕಾಗಿ 7 ಜನ ಪತ್ನಿಯರ ಕಿತ್ತಾಟ; ಯಾರಿಗೂ ತಿಳಿಯದಂತೆ 7 ಜನರನ್ನು ಮದುವೆಯಾಗಿ ಆತ್ಮಹತ್ಯೆ ಮಾಡಿಕೊಂಡ.!

ಇದನ್ನು ನೋಡಿದ ಪೋಷಕರು ಆಕೆಯನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಕಾಂಚನ ಅಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಹಾಗಾಗಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು. ವೈದ್ಯರ ಸಲಹೆಯಂತೆ ಪೋಷಕರು ಕಾಂಚನಳನ್ನು ಬೆಂಗಳೂರಿನ ಬಿಜಿಎಸ್ ಆಸ್ಪತೆಗೆ ದಾಖಲಿಸಿದ್ದರು. ಈ ಸಮಯದಲ್ಲಿ ಸಂಬಂಧಿಕರಿಗೆಲ್ಲ ಸುದ್ದಿ ಮುಟ್ಟಿದೆ. ಅದರಂತೆ ಕಾಂಚನ ಆತ್ಮಹತ್ಯೆ ಯತ್ನಿಸಿದ ವಿಷಯ ತಿಳಿದ ಅಜ್ಜ ಚಂದ್ರಣ್ಣ ಆಕೆಯನ್ನು ನೋಡಲು ಉಟಿಯಿಂದ ಬಂದಿದ್ದಾರೆ. ಈ ವೇಳೆ ಮೊಮ್ಮಗಳ ಸ್ಥಿತಿಯನ್ನು ಕಂಡ ಚಂದ್ರಣ್ಣನಿಗೆ ಹೃದಯಾಘಾತವಾಗಿ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.

Also read: ಪ್ರಪಂಚದಲ್ಲಿಯೇ ವಿಚಿತ್ರ ಪ್ರೀತಿ; ವಿಮಾನವನ್ನೇ ಪ್ರೀತಿಸುತ್ತಿರುವ ಮಹಿಳೆ, ಅದರ ಜೊತೆಗೆ ದೈಹಿಕ ಸಂಪರ್ಕವನ್ನು ಹೊಂದಿದ್ದಾಳಂತೆ.!

ಇದಾದ ನಂತರ ಚಿಕಿತ್ಸೆ ಫಲಕಾರಿಯಾಗದೆ ಕಾಂಚನ ಕೂಡ ಕೊನೆಯುಸಿರಿಳೆದಿದ್ದಾಳೆ. ಇದನ್ನೆಲ್ಲಾ ನೋಡಿ ಬಾಲಕಿಯ ಪೋಷಕರು ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಯಶ್ವಂತ್‍ನನ್ನು ಬಂಧಿಸಿದ್ದಾರೆ. ಈ ನಡುವೆ ಮಾನಕ್ಕೆ ಅಂಜಿ ಯಶ್ವಂತ್ ತಂದೆ ಸೋಮಶೇಖರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ಮಗನ ತಪ್ಪಿನಿಂದಾಗಿ ಬಾಲಕಿ ಮೃತಪಟ್ಟ ವಿಷಯ ಹಾಗೂ ಪೊಲೀಸರು ಮಗನನ್ನು ಬಂಧಿಸಿದ ವಿಷಯಕ್ಕೆ ಮನನೊಂದ ಸೋಮಶೇಖರ್ ಮಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳೂರಿನಲ್ಲಿ ಸೋಮಶೇಖರ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಈ ಎರಡು ವಿಷಯ ಕೇಳಿದ ತಕ್ಷಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದೆಲ್ಲ ನೋಡಿದರೆ ತಿಳಿಯದ ವಯಸ್ಸಿನಲ್ಲಿ ತಪ್ಪು ಮಾಡುವುದು ಮನೆಯವರಿಗೆ ಎಷ್ಟೊಂದು ತೊಂದರೆ ಎನ್ನುವುದು ಎದ್ದು ತೋರುತ್ತೆ, ಅದಕ್ಕಾಗಿ ಯಾವುದೇ ವಿಷಯದಲ್ಲಿ ಅತೀಯಾದ ಯೋಚನೆ ಮಾಡುವುದು ಒಳ್ಳೆಯದು.