ಪ್ರೇಮಿಗಳು ಓದಲೇ ಬೇಕಾದ ಸ್ಟೋರಿ; ಲವ್ ಮಾಡಿ ಮದುವೆಯಾದ ಒಂದೇ ವರ್ಷದಲ್ಲಿ ಹೆಂಡತಿಗೆ ಕ್ಯಾನ್ಸರ್ ಆದರೆ ಈ ವೇಳೆ ಪ್ರಿಯತಮ ತೋರಿಸುವ ಪ್ರೀತಿ ಹೇಗಿದೆ ನೋಡಿ..

0
3573

ಪ್ರೀತಿಗೆ ಕಣ್ಣಿಲ್ಲ ಎನ್ನುವದು ಮೊದಲಿನ ಮಾತಾಗಿದೆ. ಆದರೆ ಈಗೀಗ ಅಂತು ಪ್ರೀತಿಗೆ ಕೈ ಕಾಲು ಇನ್ನೂ ಏನೇನೋ ಇಲ್ಲ ಅನ್ನುವ ಕಾಲವಿದೆ ಅಷ್ಟಾದರು ಪ್ರತಿಯೋಬ್ಬರು ಪ್ರೀತಿಯಲ್ಲಿ ಮುಳುಗಿರುತ್ತಾರೆ. ಏಕೆಂದರೆ ಈ ಲವ್ ಮಾಡಿದರಿಗೆ ಗೊತ್ತು, ಅನುಭವಿಸಿದವರಿಗೆ ಗೊತ್ತು ಅದರ ಸುಖ -ದುಖಗಳು ಹೇಗಿವೆ ಅಂತ. ಈ ವಿಷಯದಲ್ಲಿ ಪ್ರೇಮಿಗಳು ಎಷ್ಟೇ ಜಾಗೃತರಾಗಿದ್ದರು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಬ್ರೇಕ್ ಅಪ್ ಆಗುವುದು ಸಾಮಾನ್ಯ. ಆದರೆ ಇವರಿಬ್ಬರು ಅಂದು ಕೊಂಡ ಹಾಗೆ ಮದುವೆಯಾದ ನಂತರ ಎಷ್ಟೊಂದು ಲವ್ ಇರುತ್ತೆ ಅನ್ನುವುದಕ್ಕೆ ಉದಾಹರಣೆಗಳಿಗೆ. ಆದರೆ ಇಲ್ಲೊಬ್ಬ ಪ್ರೇಮಿ ಮದುವೆಯಾಗಿ ಒಂದು ವರ್ಷದಲ್ಲಿ ತನ್ನ ಹೆಂಡತಿ ಕ್ಯಾನ್ಸರ್ ಆಗಿರುವ ವಿಷಯ ಕೇಳಿ ಏನ್ ಮಾಡಿದ ಅಂತ ಇಲ್ಲಿದೆ ನೋಡಿ.

ಶಾನ್ ಎಂಬ ಹುಡುಗ ಕೇರಳದಲ್ಲಿ ಕಾಲೇಜ್-ನಲ್ಲಿ ಹುಡುಗಿಯನ್ನು ನೋಡಿ ಪ್ರೀತಿಯಲ್ಲಿ ಬಿಳ್ಳುತ್ತಾನೆ. ಅದರಂತೆ ಅವಳಿಗೆ ತನ್ನ ಪ್ರೀತಿ ಪ್ರಸ್ತಾಪ ಮಾಡಿ ಒಪ್ಪಿಗೆ ಪಡೆದು. ಸತ್ತರು ನಿನ್ನ ಜೊತೆಗೆ ಇದ್ದರು ನಿನ್ನ ಜೊತೆಗೆ ಅಂತ ಮಾತು ಪಡೆದ ಜೋಡಿ ಪ್ರೀತಿಯ ಅಮಲಿನಲ್ಲಿ ಇರುತ್ತಾರೆ. ಇವರಿಬ್ಬರ ಜಾತಿ ಬೇರೆ ಬೇರೆ ಆಗಿದ್ದರಿಂದ ಮನೆಯವರು ಅಂತರ್ ಜಾತಿ ಮದುವೆಗೆ ಒಪ್ಪುವುದಿಲ್ಲ ನಂತರ ಹರ ಸಾಹಸ ಮಾಡಿ ಪ್ರೇಮ ವಿಹಾವಕ್ಕೆ ಸಹಿ ಮಾಡುತ್ತಾರೆ. ಇಲ್ಲಿಯವರೆಗೂ ಈ ಪ್ರೇಮಿಗಳಿಗೆ ಮನೆಯವರ ಭಯವಿತ್ತು ಮದುವೆಯಾದ ನಂತರ ತಿಳಿದ ಒಂದು ಸತ್ಯವು ಅವರ ಪ್ರೀತಿಗೆ ಕೊನೆ ತರುತ್ತೆ. ಅನ್ನುವ ಭಯ ಶುರುವಾಗುತ್ತೆ.

ಮದುವೆಯಾಗಿ ಒಂದು ವರ್ಷ ಕೂಡ ಆಗಿಲ್ಲ ಅಷ್ಟರಲ್ಲಿ ಹೆಂಡತಿಗೆ ಗಂಟಲು ಕ್ಯಾನ್ಸರ್ ಇರುವುದು ಗೊತ್ತಾಗುತ್ತೆ ಅದು ಈಗಾಗಲೇ 4 ನೇ ಹಂತದಲ್ಲಿದೇ ಎಂದು ವ್ಯದ್ಯರು ತಿಳಿಸುತ್ತಾರೆ. ಇದನ್ನು ತಿಳಿದ ಪ್ರತಿಯೊಬ್ಬರಿಗೂ ಗಾಬರಿಯಾಗುವುದು ಸಾಮಾನ್ಯ ಆದರೆ ಈ ಪ್ರೇಮಿಗಳು ಯಾವುದಕ್ಕೂ ತಲೆ ಕೆಡಸಿಕೊಳ್ಳದೆ ಈ ಕ್ಯಾನ್ಸರ್ ಹೇಗಾದರೂ ಗೆಲ್ಲಬೇಕು ಅಂತ ಪ್ರಬಲರಾಗುತ್ತಾರೆ. ಹಾಗೆ ಚಿಕಿತ್ಸೆ ಮುಂದುವರೆಸುತ್ತಾರೆ ಈ ಚಿಕಿತ್ಸೆಯಲ್ಲಿ ಹೆಂಡತಿಯ ಕೂದಲು ಉದುರಿ ಹೋಗುತ್ತೆ. ಆಗಲೇ ಅವರ ಮದುವೆಯ ಮೊದಲನೇ ವಾರ್ಷಿಕೋತ್ಸವ ಬರುತ್ತೆ, ಆ ದಿನ ಶಾನ್ ತನ್ನ ಹೆಂಡತಿಯ ಹಾಗೆ ತಾನು ತಲೆಯನ್ನು ಬೋಳಿಸಿಕೊಂಡ ಇಬ್ಬರು ಜೊತೆಯಾಗಿರುವ ಫೋಟೋ ಒಂದನ್ನು facebook ನಲ್ಲಿ ಹಾಕಿ ಶಾನ್ ತಮ್ಮ ಪ್ರೀತಿಯ ಬಗ್ಗೆ ಬರೆದು ಕೊಂಡಿದ್ದಾನೆ.

ಪ್ರೀತಿಯ ಬಗ್ಗೆ ಶಾನ್ ಹೇಳಿದ್ದು ಹೀಗೆ:

2014 ರಲ್ಲಿ, ಓನಂ ಸಮಯದಲ್ಲಿ ನನಗೆ ನನ್ನದೇ ಕಾಲೇಜ್ ನಲ್ಲಿ ಹೂ ವಿಷಯದಲ್ಲಿ ಹುಡುಗಿ ಪರಿಚಯವಾಗುತ್ತೆ. ಆ ಸಮಯದಲ್ಲಿ ನಾನು ಭಯಭಿತನಾಗಿದ್ದೆ ಅವಳು ನನಗೆ ದೈರ್ಯ ಹೇಳಿ ನನಗೆ ಉತ್ಸಾಹ ತುಂಬುತ್ತಾಳೆ. ಹಾಗೆಯೇ ನಮ್ಮ ಸ್ನೇಹ ಬೇರೆಯತು. ಇದನ್ನು ತಿಳಿದ ಶೃತಿಯ ಕುಟುಂಬ ಅವಳಿಗೆ ಕರೆದುಕೊಂಡು ಹೋಗಿ ಕಾಲೇಜ್ ಗೆ ಬರುವುದು ಸ್ಟಾಪ್ ಮಾಡಿಸುತ್ತಾರೆ. ಅವರ ಮನೆಗೆ ಸ್ವತಹ ನಾನೇ ಹೋಗಿ ಅವಳ ತಂಟೆಗೆ ಬರುವುದಿಲ್ಲ ಕಾಲೇಜ್ ಕಳುಹಿಸಿ ಎಂದು ಬೇಡಿಕೊಂಡೆ. 2017 ರಲ್ಲಿ ಅವಳ ಓದು ಮುಗಿಯಿತು ಅವರ ಮನೆಯಲ್ಲಿ ವರನನ್ನು ಹುಡುಕಲು ಶುರುಮಾಡುತ್ತಾರೆ. ನಂತರ ನಮ್ಮ ಮನೆಯಲ್ಲಿ ವಿಷಯ ತಿಳಿದು ವ್ಯಾಪಕ ವಿರೋಧಗಳು ನಡೆಯುತ್ತೆ ನಂತರ ನಾವು ಕಾನೂನುನಾತ್ಮಕವಾಗಿ ಮದುವೆಯಾಗಿದ್ದೇವೆ.

ಹೈದರಾಬಾದ್ ಹೋಗಿ ಹೇಗೋ ಒಳ್ಳೆಯ ಜೀವನ ಮಾಡಿಕೊಂಡು ನೆಮ್ಮದಿಯಿಂದ ಇರುವಾಗ. ಜನವರಿ 2018 ರಲ್ಲಿ, ಶೃತಿಯು ತನ್ನ ಕುತ್ತಿಗೆಯಲ್ಲಿ ಗಂಟು ಬೆಳೆಯಿತು. ನಂತರ ಮತ್ತೊಂದೆಡೆ ಊತ ಕಾಣಿಸಿಕೊಂಡಿತು ಇದಕ್ಕೆ ವೈದ್ಯರನ್ನು ಭೇಟಿ ಮಾಡಿದ್ದಾಗ ಶೃತಿ ಕ್ಷಯರೋಗಕ್ಕೆ ಒಳಪಟ್ಟಿದ್ದಾರೆ. “ನಾವು ಅದನ್ನು ಶೀಘ್ರದಲ್ಲೇ ಔಷಧಿಗಳನ್ನು ಪ್ರಾರಂಭಿಸಿದ್ದೇವೆ. ಎಂದು ಹೇಳಿದ ವ್ಯದ್ಯರು ಕೊಚಿನ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಕಳುಹಿಸುತ್ತಾರೆ. ಇಲ್ಲಿ 4ನೇ ಹಂತದ ಲಿಂಫೋಮಾ (ಕ್ಯಾನ್ಸರ್) ಇರುವುದು ತಿಳಿಯಿತು. ಈಗ ಅದಕ್ಕೆ ಚಿಕಿತ್ಸೆ ನಡೆಯುತ್ತಿದೆ. ಅವಳು ತುಂಬಾ ದೈರ್ಯವಂತೆ ಯಾವುದಕ್ಕೂ ಹೆದರದೆ ಈ ಖಾಯಿಲೆಯಿಂದ ಹೊರಬರುವ ಬರವಸೆ ಇಟ್ಟುಕೊಂಡಿದ್ದಾಳೆ. ಅವಳು ಆದಷ್ಟು ಬೇಗನೆ ಗುಣವಾಗಿಲ್ಲಿ ತಮ್ಮ ಪ್ರೀತಿ ಹೀಗೆ ಇರಲಿ ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಇವರ ಪ್ರೀತಿಗೆ ಕ್ಯಾನ್ಸರ್ ಅಡ್ಡಿಯಾಗಿದೆ ಅದು ಆದಷ್ಟು ಬೇಗ ವಾಸಿಯಾಗಿ ಇವರಿಬ್ಬರ ಪ್ರೀತಿ ಅಮರವಾಗಲಿ ಎಂದು ಎಲ್ಲರು ಹರಸುತ್ತಿದ್ದಾರೆ.