ಜಾತಿ ಕಾರಣ ನೀಡಿ ಪ್ರೀತಿಗೆ ಒಪ್ಪದ ಯುವತಿಯ ಕುಟುಂಬಸ್ಥರು; ಸೇಡು ತೀರಿಸಿಕೊಳ್ಳಲು ಉಗ್ರ ಸಂಘಟನೆಗೆ ಸೇರ್ಪಡೆಯಾದ ಯುವಕ.!

0
333

ದೇಶದಲ್ಲಿ ಮಾರಕವಾಗಿ ಬೆಳೆಯುತ್ತಿರುವ ಉಗ್ರ ಸಂಘಟನೆಗೆ ಯುವಕ-ಯುವತಿಯರು ಸೇರಿಕೊಳ್ಳುತ್ತಿರುವುದರ ಹಿಂದೆ ಒಂದದ್ದು ಕತೆ ಇರುತ್ತೆ, ತಮಗಾದ ಸಣ್ಣ ವಿಷಯಕ್ಕೆ ದೇಶಕ್ಕೆ ದ್ರೋಹ ಬಗೆಯುವುದು ಎಷ್ಟೊಂದು ಸರಿ ಎನ್ನುವುದನ್ನು ಅರಿಯದ ಯುವ ಪೀಳಿಗೆ ಉಗ್ರರ ಸಂಘ ಸೇರಲು ಮುಂದಾಗುತ್ತಿದ್ದಾರೆ. ಆದರೆ ಪ್ರತಿನಿತ್ಯವೂ ಸೈನಿಕರ ಗುಂಡಿನ ದಾಳಿ ಸಿಕ್ಕು ಬಲಿಯಾಗುತ್ತಿದ್ದರೆ ಅದೆಷ್ಟೋ ಜನರು ಜೈಲು ಸೇರಿದ್ದಾರೆ. ಹೀಗೆ ಶಂಕಿತ ಉಗ್ರರ ಪೈಕಿ ಸೆರೆಯಾಗಿರುವ ಮೂವರ ಉಗ್ರರ ಕತೆಯೇ ವಿಚಿತ್ರವಾಗಿದ್ದು, ಒಬ್ಬ ಉಗ್ರ ಲವ್ ಬ್ರೇಕಪ್ ಆಗಿದ್ದಕ್ಕೆ ಭಯೋತ್ಪಾದನೆ ಸಂಘಟನೆಗೆ ಸೇರಿಕೊಂಡಿದನಂತೆ.

Also read: ಮದುವೆಯಾಗಿ 7 ವರ್ಷದ ನಂತರ ಪ್ರಿಯಕರನ ಜೊತೆ ಹೆಂಡತಿಗೆ ಮದುವೆ ಮಾಡಿದ ಪತಿ; ಈ ತ್ಯಾಗಕ್ಕೆ ಭಾರಿ ಮೆಚ್ಚುಗೆ.!

ಹೌದು ಅಸ್ಸಾಂನ ಗೋಲಪಾಡಾದಲ್ಲಿ ಸೆರೆಯಾಗಿರುವ ಮೂವರ ಶಂಕಿತ ಉಗ್ರರ ಪೈಕಿ ಓರ್ವ ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಭಯೋತ್ಪಾದನೆ ಸಂಘಟನೆಗೆ ಸೇರಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. 24 ವರ್ಷದ ಲೂಯಿತ್ ಜಮೀಲ್ ಜಮಾನ್ ಬಂಧನದ ನಂತರ ದೆಹಲಿ ಪೊಲೀಸರ ಮುಂದೆ ತನ್ನ ಪ್ರೇಮ ಕಥೆಯನ್ನು ಹೇಳಿದ್ದಾನೆ. ನಾನು ಹಿಂದೂ ಹುಡುಗಿಯನ್ನು ಪ್ರೀತಿಸುತ್ತಿದ್ದೆ. ಆದರೆ ಆಕೆಯ ಕುಟುಂಬಸ್ಥರು ಜಾತಿ ಕಾರಣ ನೀಡಿ ನಮ್ಮ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದರು. ಹಾಗಾಗಿ ನಮ್ಮಿಬ್ಬರ ಪ್ರೀತಿ ಮುರಿದು ಬಿತ್ತು. ನನ್ನ ಪ್ರೀತಿಯನ್ನು ವಿರೋಧಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದೇನೆ ಎಂದು ತಿಳಿಸಿದ್ದಾನೆ.

love-failure-in-5-tips-1
ಸಾಂಧರ್ಬಿಕ ಚಿತ್ರ

Also read: ಒಂದೇ ಪ್ರೀತಿಗೆ ಮೂರು ಹೆಣ; ಓದುವುದು ಬಿಟ್ಟು ಲವ್ ಅಂತ ತಿರುಗುವ ಯುವಕ- ಯುವತಿಯರೇ ಎಚ್ಚರ.!

ಅಸ್ಸಾಂ ಮತ್ತು ದೆಹಲಿಯಲ್ಲಿ ಉಗ್ರ ಚಟುವಟಿಕೆ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಲೂಯಿತ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದೂ ಹುಡುಗಿಯನ್ನು ಪ್ರೀತಿಸಿದ್ದಕ್ಕೆ ಸಮಾಜ ನನ್ನೊಂದಿಗೆ ಅತ್ಯಂತ ಕೆಟ್ಟದಾಗಿ ವರ್ತಿಸಿತು. ನನ್ನ ಜೊತೆಗಿನ ಪ್ರೇಮವನ್ನು ಕಡಿದುಕೊಳ್ಳುವಂತೆ ಯುವತಿಯ ಮೇಲೆ ಒತ್ತಡ ಹಾಕಲಾಯ್ತು. ಯುವತಿಯ ಜೊತೆಗೆ ಕಾಣಿಸಿಕೊಳ್ಳಬಾರದು ಎಂದು ಕುಟುಂಬದವರು ಬೆದರಿಕೆ ಹಾಕಿದರು ಅವರ ಮೇಲೆ ನನಗೆ ಸೇಡು ತಿರಿಸಿಕೊಳ್ಳುವುದು ಆಗಲಿಲ್ಲ ಆದರಿಂದ ಉಗ್ರ ಸಂಘಟನೆ ಸೇರಿದೆ ಎಂದು ಲೂಯಿತ್ ವಿಚಾರಣೆ ವೇಳೆ ಹೇಳಿದ್ದಾನೆ.

Also read: 75 ವರ್ಷಗಳ ಬಳಿಕ ಒಂದಾದ ಪ್ರೇಮಿಗಳು; ಅಮರ ಪ್ರೀತಿಗೆ ಸಾಕ್ಷಿಯಾದ ಪ್ರೀತಿ ಇದೇನಾ?, ಈ ಕಥೆ ಓದಿ ನೋಡಿ ಕಳೆದ ನಿಮ್ಮ ಪ್ರೀತಿವೂ ಹೀಗೆಯೇ ಸಿಗಬಹುದು..

ವಾಟ್ಸಪ್ ಮತ್ತು ಟೆಲಿಗ್ರಾಂ ಮೂಲಕ ಲೂಯಿತ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾನೆ. ವಾಟ್ಸಪ್ ನ ಕೆಲವೊಂದು ಗ್ರೂಪ್ ಗಳು ಯುವಕರನ್ನು ತಮ್ಮತ್ತ ಸೆಳೆದುಕೊಳ್ಳಲು
ಪ್ರಯತ್ನಿಸುತ್ತಿವೆ. ವಾಟ್ಸಪ್ ಮೂಲಕವೇ ಐಇಡಿ ಸೇರಿದಂತೆ ಇನ್ನಿತರ ಸ್ಫೋಟಕ ವಸ್ತುಗಳ ತಯಾರಿಕೆಯನ್ನು ಹೇಳಿಕೊಡಲಾಗುತ್ತಿತ್ತು. ಹೇಗೆ ಮತ್ತು ಯಾವ ಕ್ಷೇತ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಬೇಕೆಂಬುದರ ಬಗ್ಗೆ ಯುವಕರಿಗೆ ತರಬೇತಿ ನೀಡಲಾಗುತ್ತಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಹೀಗೆ ದೇಶದ ಗಡಿ ಭಾಗದ ಯುವಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದನೆ ಸಂಘಟನೆಗೆ ಸೇರಿಕೊಳ್ಳುತ್ತಿದ್ದಾರೆ. ಸಣ್ಣ ವಯಸ್ಸಿನ ಯುವಕರಲ್ಲಿ ಆದ ಯಾವುದೇ ಚಿಕ್ಕ ಘಟನೆಗಳೇ ಯುವಕ-ಯುವತಿಯರನ್ನು ಕೆಟ್ಟದಾರಿಗೆ ತಳ್ಳುತ್ತಿವೆ, ಇದರ ಬಗ್ಗೆ ಸರಿಯಾದ ಜಾಗೃತಿ ಮೂಡಿಸುವ ಅವಶ್ಯಕತೆ ಮುಖ್ಯವಿದೆ ಅನಿಸುತ್ತೆ.