ಮಹದಾಯಿ ಸಮಸ್ಯೆಗೆ ರಿಯಲ್ ಸ್ಟಾರ್ ಉಪೇಂದ್ರ ವಿಭಿನ್ನ ರೀತಿಯ ಪರಿಹಾರ ಕೊಟ್ಟಿದ್ದಾರೆ, ಆದರೆ ಇದನ್ನು ಅನುಷ್ಠಾನ ಮಾಡುತ್ತಾರಾ?

0
2524

ಬೆಂಗಳೂರಿನಲ್ಲಿ ಮಹದಾಯಿ ಹೋರಾಟ ನಡೆಯುತ್ತಿದೆ. ಹೋರಾಟಕ್ಕೆ ಚಿತ್ರರಂಗ, ವಿವಿಧ ಸಂಘಟನೆಗಳು ಸಾಥ್ ನೀಡಿವೆ. ದಿನದಿನಕ್ಕೂ ಮಹದಾಯಿ ಹೋರಾಟದ ಕಿಚ್ಚು ಹೆಚ್ಚುತ್ತಲೇ ಇದೆ. ಆದರೆ ಇದೆಲ್ಲದರ ನಡುವೆ, ಮಹದಾಯಿ ಹೋರಾಟಕ್ಕೆ ಬ್ರೇಕ್ ಹಾಕಿ ಎಂದು ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದಾರೆ.

ಹೌದು…. ಉಪೇಂದ್ರ ಹೋರಾಟ ಮಾಡುವುದರಿಂದ ಏನೂ ಸಿಗಲ್ಲ.. ಅದರ ಬದಲು ಪರಿಹಾರ ಕಂಡು ಕೊಳ್ಳಿ ಅಂತ ಹೇಳ ದ್ದಾರೆ. ಪ್ರಜಾಕೀಯದ ಮೂಲಕ ಹೊಸ ರಾಜಕೀಯ ಸೃಷ್ಟಿಸುತ್ತಿರುವ ಉಪೇಂದ್ರ, ಈಗ ರಾಜ್ಯದ್ಯಂತ ಕಿಚ್ಚು ಹಚ್ಚಿಸಿರುವ ಮಹದಾಯಿಗೆ ತಮ್ಮದೇ ಆದ ಪರಿಹಾರವೊಂದನ್ನು ಮುಂದಿಟ್ಟಿದ್ದಾರೆ. ಆ ಪರಿಹಾರದಲ್ಲಿ ಅವರು ಹೇಳಿರುವುದು ಎರಡು ಕಥೆಗಳನ್ನು. ಆ ಎರಡೂ ಕಥೆಗಳ ಹೀರೋ ಸಾಯಿಬಾಬಾ ಎನ್ನುವುದು ವಿಶೇಷ.

ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ಪುಸ್ತಕದ ಎರಡು ಪುಟಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಾಯಲಸೀಮದಲ್ಲಿ ಇದೇ ರೀತಿ ನೀರಿನ ಹಾಹಾಕಾರವಿತ್ತು. 1995ರಲ್ಲಿ ಪುಟ್ಟಪರ್ತಿಯ ಸತ್ಯಸಾಯಿಬಾಬಾ ಸತತ ಒಂದೂವರೆ ವರ್ಷ ಕೆಲಸ ಮಾಡಿದರು. 18 ತಿಂಗಳಲ್ಲಿ 2000 ಕಿ.ಮೀ. ಪೈಪ್ಲೈನ್ ಹಾಕಿಸಿ, 43 ನೀರಿನ ತೊಟ್ಟಿ ನಿರ್ಮಿಸಿದರು. ಒಂದೊಂದು ನೀರಿನ ತೊಟ್ಟಿಗೂ ಒಂದೂವರೆ ಲಕ್ಷ ಲೀ.ನಿಂದ ಎರಡೂವರೆ ಲಕ್ಷ ಲೀ. ಸಾಮಥ್ರ್ಯವಿತ್ತು. ಇದರಿಂದ ರಾಯಲಸೀಮೆಯ ಕುಡಿಯುವ ನೀರಿನ ಸಮಸ್ಯೆಯ ಪರಿಹಾರ ಶೇ.70ರಷ್ಟು ನಿವಾರಣೆಯಾಯ್ತು.

ಇನ್ನು ಚೆನ್ನೈನಲ್ಲಿಯೂ ಕೂಡಾ ಇದೇ ರೀತಿ ನೀರಿನ ಸಮಸ್ಯೆ ಎದುರಾದಾಗ ಕೃಷ್ನಾ ನದಿಯ ನೀರನ್ನು ಚೆನ್ನೈಗೆ ಹರಿಸಿ ಸಮಸ್ಯೆ ನೀಗಿಸಿದರು. ಆ ಕೆಲಸದಲ್ಲಿಯೂ ಸಾಯಿಬಾಬಾ ಅವರ ಪಾತ್ರ ದೊಡ್ಡದಾಗಿತ್ತು. ಈ ಎರಡು ಕಥೆಗಳಲ್ಲಿ ಪರಿಹಾರವಿದೆ. ಮಹದಾಯಿ ಹೋರಾಟದ ಜೊತೆಯಲ್ಲೇ, ಅದರ ಹೊರತಾದ ಪರ್ಯಾಯ ಮಾರ್ಗವೊಂದನ್ನು ಹುಡುಕಿಕೊಳ್ಳಬೇಕಾದ ಅಗತ್ಯವಿದೆ. ಉಪ್ಪಿ ಹೇಳುತ್ತಿರುವ ಪರಿಹಾರ ಇದೇ.