ಬಹಳ ವರ್ಷಗಳಿಂದ ಬಗೆಹರಿಯದೆ ಸಮಸ್ಯೆಯಾಗಿ, ನೆರೆಯ ರಾಜ್ಯಗಳ ನಡುವೆ ವಿವಾದದ ಕೇಂದ್ರ ಬಿಂದುವಾಗಿದ್ದ, ಉತ್ತರ ಕರ್ನಾಟಕ ಜನರ ಜೀವ ಜಾಲದ ಸಮಸ್ಯೆಯಾದ ಮಹದಾಯಿ ನದಿ ನೀರು ಹಂಚಿಕೆ ಕುರಿತು ಇಂದು ನ್ಯಾಯಾಧಿಕರಣದಲ್ಲಿ ಅಂತಿಮ ಹಂತದ ವಾದ ಮುಕ್ತಾಯವಾಗಿದ್ದು, ತೀರ್ಪು ಕಾಯ್ದಿರಿಸಲಾಗಿದೆ, ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮಹದಾಯಿ ಅಚ್ಚುಕಟ್ಟಿನಲ್ಲಿ ಕೇಂದ್ರದ ಜಲ ಆಯೋಗ ಮಾಹಿತಿ ಪ್ರಕಾರ ಒಟ್ಟು 199.6 ಟಿಎಂಸಿ ನೀರು ಲಭ್ಯವಾಗಲಿದೆ. ಆದರೆ ಗೋವಾ ನೀಡುತ್ತಿರುವ ಮಾಹಿತಿ ಪ್ರಕಾರ 113 ಟಿಎಂಸಿ ನೀರು ಲಭ್ಯ ಎಂಬ ಮಾಹಿತಿ ನೀಡಿದೆ. ನ್ಯಾಯಾಧಿಕರಣ ಮೊದಲು ಒಟ್ಟು ಮಹದಾಯಿ ಅಚ್ಚುಕಟ್ಟಿನ ನೀರಿನ ಮಾಹಿತಿ ನಿರ್ಧರಿಸಲಿದ್ದಾರೆ.
ಕರ್ನಾಟಕ ಪರ ಹಿರಿಯ ವಕೀಲ ಮೋಹನ್ ಕಾತರಕಿ ಮಾತನಾಡಿ ಕಳೆದ ಆರು ವರ್ಷದಲ್ಲಿ 105 ದಿನಗಳ ಕಾಲ ವಾದ ಮಂಡಿಸಲಾಗಿದೆ. ಅಗಸ್ಟ್ 20 ರೊಳಗೆ ತೀರ್ಪು ನಿರೀಕ್ಷೆ ಮಾಡಬಹುದು, ನಾವು ರಾಜ್ಯದ ಪರ 14.98 ಟಿಎಂಸಿ ನೀರು ಕುರಿತು ನ್ಯಾಯಾಧಿಕರಣ ಮುನವಿ ಇಟ್ಟಿದ್ದೇವೆ, ಗೋವಾ 172 ಟಿಎಂಸಿ ಮತ್ತು ಮಹಾರಾಷ್ಟ್ರ 6.34 ಟಿಎಂಸಿ ಗೆ ಬೇಡಿಕೆ ಇಟ್ಟಿದೆ ಎಂದರು.
ಕರ್ನಾಟಕ ಪರ ವಾದ ಮಾಡಿದ ವಕೀಲರು, ಹುಬ್ಬಳ್ಳಿ- ಧಾರವಾಡಕ್ಕೆ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಇಲ್ಲ. ಅವರಿಗೆ ಇದನ್ನು ಬಿಟ್ಟರೆ ಬೇರೆ ದಾರಿ ಇಲ್ಲ. ರಾಜ್ಯದ ಪಾಲಿನ 14.98 ಟಿಎಂಸಿ ನೀರು ಬಳಕೆ ಮಾಡಲು ಮತ್ತು ಈ ಅವಳಿ ನಗರಗಳಿಗೆ ಕುಡಿಯಲು 7.56 ಟಿಎಂಸಿ ನೀರು ಒದಗಿಸಬೇಕು ಎಂದರು.
ಕರ್ನಾಟಕದಲ್ಲಿ 35 ನದಿಗಳಿವೆ, ಗೋವಾದ ಬಳಿ 9 ನದಿಗಳಿವೆ ಅಲ್ಲದೆ ಮಹದಾಯಿ ಗೋವಾದ ಜೀವನದಿಯಾಗಿದೆ. ಗೋವಾಕ್ಕೆ ಅಗತ್ಯಗಳನ್ನು ಪೂರೈಸಲು 94 ಟಿಎಂಸಿ ನೀರು ಸಾಕು. ಆದರೆ, ಜಲ ವಿದ್ಯುತ್, ಅರಣ್ಯ ಸಂರಕ್ಷಣ ಮುಂತಾದ ಅಂಶಗಳನ್ನು ಪರಿಗಣಿಸಿದ್ದೇ ಆದರೆ ಗೋವಾಕ್ಕೆ 222 ಟಿಎಂಸಿ ಮಹದಾಯಿ ನೀರು ಬೇಕು ಮತ್ತು ಪ್ರಸ್ತುತ ಕಡಿಮೆ ಎಂದರು 144 ಟಿಎಂಸಿ ನೀರು ಬೇಕೆ ಬೇಕು ಎಂಬ ಗೋವಾ ವಾದವನ್ನು ಮಹಾರಾಷ್ಟ್ರ ಬೆಂಬಲಿಸಿದೆ.