ಕಲೆಕ್ಟರ್ ವೃತ್ತಿಯ ಕೊನೆಯ ದಿನ ತನ್ನ ಕಾರು ಚಾಲಕನಿಗೆ ಕೊಟ್ಟ ಅದ್ಭುತ ಉಡುಗೊರೆ

0
2456

ಅಂಕೋಲಾ, ಮಹಾರಾಷ್ಟ್ರ: ಕಾರು ಚಾಲಕನಿಗೆ ಕಲೆಕ್ಟರ್ ಕೊಟ್ಟ ಅದ್ಭುತ ಉಡುಗೊರೆಕೊಟ್ಟಿರುವುದು ನಿಜಕ್ಕು ಶ್ಲಾಘನೀಯ. ದಕ್ಷ ಅಧಿಕಾರಿಗಳೆಲ್ಲ ಸಾಮಾನ್ಯವಾಗಿ ತಮ್ಮ ಕಚೇರಿಯ ವಾಹನವನ್ನು ದುರ್ಬಳಕೆ ಮಾಡುಕೊಳ್ಳುವುದು ಸಹಜ ವಾಗಿದೆ. ಅದೇತರ ದಕ್ಷ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಕೂಡ ತನ್ನ ವಿದಾಯದ ಈ ಸಮಯದಲ್ಲಿ ದಿಗಂಬರ್ ಗೆ ಸದಾ ನೆನಪಿನಲ್ಲುಳಿಯುವಂಥ ಫೇವರೆಲ್ ಉಡುಗೋರೆ ಕೊಟ್ಟಿದ್ದಾರೆ.

ಈ ದಕ್ಷ ಅಧಿಕಾರಿ  ಯಾರೆಂದರೆ ಮಹಾರಾಷ್ಟ್ರದ ಅಕೋಲಾ ಕಲೆಕ್ಟರ್, ತಮ್ಮ ವಾಹನದ ಚಾಲಕನಿಗೆ ಕೊಟ್ಟ ಗೌರವ ಮಾತ್ರ ನಿಜಕ್ಕೂ ಮಾನವೀಯತೆಯನ್ನು ತೋರಿಸುತ್ತದೆ. ಅಂದು ಮಹಾರಾಷ್ಟ್ರದ ಅಕೋಲಾ ಕಲೆಕ್ಟರ್ ಆಗಿದ್ದ ಜಿ. ಶ್ರೀಕಾಂತ್ ಅವರ ಕರ್ತವ್ಯದ ಕೊನೆಯ ದಿನವಾಗಿತ್ತು ಅಂದು ಕಾರು ಚಾಲಕನಿಗೆ ಅದ್ಭುತ ಉಡುಗೊರೆ ಕೊಟ್ಟಿದ್ದಾರೆ.

ಅದೇ ದಿನ ಚಾಲಕ ದಿಗಂಬರ್ ಥಾಕ್ ಕೂಡ ನಿವೃತ್ತಿ ಹೊಂದಿದ್ದ. 58 ವರ್ಷದ ದಿಗಂಬರ್, ಜಿಲ್ಲೆಯ 18 ಕಲೆಕ್ಟರ್ ಗಳ ಸೇವೆ ಮಾಡಿದ್ದಾನೆ. 35 ವರ್ಷಗಳ ಕಾಲ ಅಧಿಕಾರಿಗಳನ್ನು ಸುರಕ್ಷಿತವಾಗಿ ಹೇಳಿದಲ್ಲೆಲ್ಲ ಕರೆದೊಯ್ದಿದ್ದಾನೆ, ವಿಧೇಯವಾಗಿ ನಡೆದುಕೊಂಡಿದ್ದಾನೆ.

ವಿದಾಯದ ಈ ಸಮಯದಲ್ಲಿ ದಿಗಂಬರ್ ಗೆ ಸದಾ ನೆನಪಿನಲ್ಲುಳಿಯುವಂಥದ್ದೇನಾದ್ರೂ ಉಡುಗೊರೆ ಕೊಡಬೇಕೆಂದು ಕಲೆಕ್ಟರ್ ಶ್ರೀಕಾಂತ್ ನಿರ್ಧರಿಸಿದ್ರು. ಕರ್ತವ್ಯದ ಕೊನೆಯ ದಿನ ಚಾಲಕ ದಿಗಂಬರ್ ಗಾಗಿ ಅವರೇ ಖುದ್ದು ಕಾರಿನ ಬಾಗಿಲು ತೆರೆದ್ರು, ಹಿಂಬದಿ ಸೀಟಿನಲ್ಲಿ ಕೂರಿಸಿದ್ರು.

ಬಳಿಕ ತಾವೇ ಕಾರು ಚಾಲನೆ ಮಾಡಿಕೊಂಡು ಕಚೇರಿಗೆ ಕರೆತಂದ್ರು. ಈ ಮೂಲಕ ತಮ್ಮ ನೆಚ್ಚಿನ ಚಾಲಕನಿಗೆ ಕಲೆಕ್ಟರ್ ಶ್ರೀಕಾಂತ್ ಗೌರವ ಸಮರ್ಪಿಸಿದ್ದಾರೆ.