ಬುದ್ಧಿವಾದ ಹೇಳಿದ ತಂದೆಯನ್ನೇ ತುಂಡು-ತುಂಡಾಗಿ ಕತ್ತರಿಸಿ ಕೊಲೆಗೈದ ಮಗ, ಕಾರಣ ತಿಳಿದರೆ ದಂಗಾಗುತ್ತಿರ..!

0
412

ಇತ್ತೀಚಿಗೆ ಹಲವು ಪ್ರಕರಣಕ್ಕೆ ಕಾರಣವಾಗುತ್ತಿರುವ ಪಬ್ ಜಿ ಗೇಮ್ ಗಿಳಿನಿಂದ ಮತ್ತೊಂದು ಭಯಾನಕ ಘಟನೆ ನಡೆದಿದ್ದು, ಬುದ್ದಿ ಹೇಳಿದ ತಂದೆಯನ್ನೇ ಮಗನೆ ತರಕಾರಿ ಕತ್ತರಿಸಿದಂತೆ ಕತ್ತರಿಸಿದ ಘಟನೆ ನಡೆದಿದ್ದು, ಇಡಿ ದೇಶದ ತುಂಬೆಲ್ಲ ಭಯ ಹುಟ್ಟಿಸಿದೆ. ನಿರಂತರವಾಗಿ ಮೊಬೈಲ್‌ ನಲ್ಲಿ ಪಬ್ ಜಿ ಗೇಮ್ ಆಡುತ್ತಿದ್ದ ಮಗನಿಗೆ ಬುದ್ದಿವಾದ ಹೇಳಿದ್ದೆ ತಪ್ಪಾಗಿದ್ದು, ನತದೃಷ್ಟ ತಂದೆ ಪ್ರಾಣವನ್ನು ಕಳೆದುಕೊಳ್ಳುವಂತೆ ಆಗಿದೆ. ಕೊಲೆ ಮಾಡಿ ಪೊಲೀಸ್ ಸ್ಟೇಷನ್ ಸೇರಿದ ಪಾಪಿ ಮಗ ಸ್ಟೇಷನ್ ಅಲ್ಲಿಯೂ ಮೊಬೈಲ್ ಕೇಳುತ್ತಿದ್ದಾನಂತೆ.

ಹೌದು ಬುದ್ದಿವಾದ ಹೇಳಿದ ತಂದೆಯನ್ನೇ ಪುತ್ರ ಭೀಕರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಬೆಳಗಾವಿಯ ಕಾಕತಿಯ ಸಿದ್ದೇಶ್ವರ ನಗರದಲ್ಲಿ ನಡೆದಿದ್ದು, ಮಗನಿಂದಲೇ ಕೊಲೆಯಾದ ಶಂಕ್ರಪ್ಪ ಕಮ್ಮಾರ(59) ಅವರನ್ನು ರಘುವೀರ್ ಕಮ್ಮಾರ(21) ಕೊಲೆ ಮಾಡಿದ್ದಾನೆ. ಡಿಪ್ಲೊಮಾ ಮೆಕ್ಯಾನಿಕಲ್ ಎಂಜಿನಿಯರ್ ಎರಡನೇ ವರ್ಷ ಓದುತ್ತಿದ್ದ ಆರೋಪಿ ರಘುವೀರ್ ಕಳೆದ ನಾಲ್ಕೈದು ವರ್ಷಗಳಿಂದ ಮೊಬೈಲ್ ಗೇಮ್‍ಗಳನ್ನು ಆಡುವ ಗೀಳಿಗೆ ಬಿದ್ದಿದ್ದನು. ಪಾಲಕರು ಎಷ್ಟೇ ಕಿವಿ ಮಾತು ಹೇಳಿದರೂ ಕೇಳದ ಯುವಕ ಗೇಮ್ ಹುಚ್ಚಿಗೆ ಜೀವನವನ್ನೇ ಹಾಳು ಮಾಡಿಕೊಂಡಿದ್ದಾನೆ.

ಪುತ್ರ ರಘುವೀರ ಇತ್ತೀಚೆಗೆ ಮೊಬೈಲ್‌ನಲ್ಲಿ ಹೆಚ್ಚಾಗಿ ಆಟವಾಡಿ ಸುಮ್ಮನೆ ಕಾಲಹರಣ ಮಾಡುತ್ತಿದ್ದ ಎಂದು ಬೇಸರಗೊಂಡಿದ್ದ ತಂದೆ ರಾತ್ರಿ ಹೊತ್ತು ಹೆಚ್ಚು ಮೊಬೈಲ್ ಬಳಸದಂತೆ ಹಲವು ಬಾರಿ ಬುದ್ದಿವಾದ ಹೇಳಿದ್ದರು. ಆದರೆ ಪುತ್ರ ಯಾರ ಮಾತನ್ನೂ ತಲೆಗೆ ಹಾಕಿಕೊಂಡಿರಲಿಲ್ಲ. ಹೀಗೆ ಬುದ್ಧಿ ಹೇಳಿದ್ದಕ್ಕೆ ಮಗ ಒಮ್ಮೆ ಕುಪಿತಗೊಂಡು ಅಕ್ಕಪಕ್ಕದ ಮನೆಯವರ ಕಿಟಕಿ ಗಾಜುಗಳನ್ನು ಒಡೆದುಹಾಕಿದ್ದ. ಆತನನ್ನು ಠಾಣೆಗೆ ಕರೆದೊಯ್ದಿದ್ದ ಕಾಕತಿ ಪೊಲೀಸರು ತಂದೆಯ ಸಮ್ಮುಖದಲ್ಲಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರು ಆರೋಪಿ ಮೊಬೈಲ್ ಹಿಡಿದು ಮತ್ತೆ ಗೇಮ್ ಆಡಲು ಆರಂಭಿಸಿದ್ದ. ಆಗ ಗಾಯದ ಕೈಗೆ ಕಟ್ಟಿದ ಬ್ಯಾಂಡೇಜ್ ಸರಿ ಮಾಡಲು ತಂದೆ-ತಾಯಿ ಹೋದಾಗ ಅವರನ್ನು ಆತ ಹೊಡೆಯಲಾರಂಭಿಸಿದ್ದಾನೆ.

ಕಳೆದ ರಾತ್ರಿಯಿಂದ ಹಾಲ್‍ನಲ್ಲಿ ಮಲಗಿದ್ದ ರಘುವೀರ್ ಏನೇನೊ ಬಡಬಡಿಸುತ್ತಿದ್ದ. ಆಗ ತಂದೆ-ತಾಯಿ ಮಗನ ಕೈಯಿಂದ ರಕ್ತ ಸುರಿಯುತ್ತಿರುವುದನ್ನು ನೋಡಿದ್ದಾರೆ. ಆ ರಕ್ತದಲ್ಲಿಯೇ ಮಗ ಆಟವಾಡುತ್ತಿರುವುದನ್ನು ಕಂಡ ತಂದೆ-ತಾಯಿ ಸುಮಾರು 3 ಗಂಟೆಯವರೆಗೆ ಆತನಿಗೆ ಬುದ್ಧಿ ಹೇಳಿದ್ದಾರೆ. ಈ ಕಾರಣಕ್ಕೆ 3:30ರ ಹೊತ್ತಿಗೆ ತಂದೆ-ತಾಯಿಯ ಜೊತೆ ಆರೋಪಿ ಜಗಳ ಆರಂಭಿಸಿದ್ದಾನೆ. 4 ಗಂಟೆ ಸುಮಾರಿಗೆ ತಾಯಿಯನ್ನು ಕೊಠಡಿಗೆ ತಳ್ಳಿ ಲಾಕ್ ಮಾಡಿ, 4:30ರ ವೇಳೆಗೆ ತಂದೆಯ ಮೇಲೆ ಎಗರಿ, ಕೈಗೆ ಬ್ಯಾಂಡೇಜ್ ಕಟ್ಟಿದ ದಾರದಿಂದಲೇ ತಂದೆಯ ಕುತ್ತಿಗೆಗೆ ಸುತ್ತಿ ಜೋರಾಗಿ ಬಿಗಿದು ಕೊಲೆಗೆ ಯತ್ನಿಸಿದ್ದಾನೆ.

ತಂದೆ ಜೋರಾಗಿ ಕೂಗಾಡಿದಾಗ ಕೊಠಡಿ ಒಳಗಿಂದ ತಾಯಿ ಕೂಡ ಕಾಪಾಡಿ ಎಂದು ಜೋರಾಗಿ ಕಿರುಚಿದ್ದಾರೆ. ಈ ವೇಳೆ ಅಕ್ಕಪಕ್ಕದ ಮನೆಯವರು ಮನೆಯ ಬಾಗಿಲು ಒಡೆದು ಒಳನುಗ್ಗಲು ಮುಂದಾಗಿದ್ದರು. ಆಗ ಕೆಲವರು ಕಿಟಕಿಯಲ್ಲಿ ಏನಾಗುತ್ತಿದೆ ಎಂದು ನೋಡಲು ಹೋಗಿ ರಘುವೀರ್ ನ ವಿಕೃತಿ ನೋಡಿ ಭಯಗೊಂಡಿದ್ದಾರೆ. ತಕ್ಷಣ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತರಕಾರಿ ಕತ್ತರಿಸುವ ಹಾಗೆ ತಂದೆಯ ರುಂಡವನ್ನು, ಕಾಲನ್ನು ಪಾಪಿ ಮಗ ಕತ್ತರಿಸಿರುವುದನ್ನು ನೋಡಿ ಹೆದರಿದ್ದಾರೆ. ಮೊದಲು ಕತ್ತರಿಯಿಂದ ತಂದೆಯ ಕುತ್ತಿಗೆಯನ್ನು ಕತ್ತರಿಸಲು ರಘುವೀರ್ ಪ್ರಯತ್ನ ಮಾಡಿ, ನಂತರ ಇಳಿಗೆ ಮಣೆ ತಂದು ತಂದೆಯ ರುಂಡವನ್ನು ಕಟ್ ಮಾಡಿದ್ದಾನೆ. ನಂತರ ತಂದೆಯ ದೇಹವನ್ನು ಛಿದ್ರಛಿದ್ರ ಮಾಡಿದ್ದಾನೆ.

ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯ ಕೃತ್ಯ ನೋಡಿ ದಂಗಾಗಿ ಹೋಗಿದ್ದಾರೆ. ಬಾಗಿಲು ಒದ್ದು ರಘುವಿರ್ ನನ್ನು ಹಿಡಿಯಲು ಹರಸಾಹಸ ಮಾಡಿದ್ದಾರೆ. ಆಗ ಕೈಯಲ್ಲಿ ಇಳಿಗೆ ಮಣೆ ಹಿಡಿದು ಹುಚ್ಚುಚ್ಚಾಗಿ ಮಾತನಾಡುತ್ತಿದ್ದ ಆರೋಪಿಯನ್ನು ಕಂಡು ನಮ್ಮ ಮೇಲೆಯೇ ಹಲ್ಲೆ ಮಾಡುತ್ತಾನೆ ಎಂದು ಯೋಚಿಸಿದ ಪೊಲೀಸರು, ಒಂದು ಬಟ್ಟೆಯನ್ನು ಅವನ ಮುಖದ ಮೇಲೆ ಎಸೆದು, ಬಳಿಕ ಎಲ್ಲರೂ ಸೇರಿ ಆತನನ್ನು ಹಿಡಿದಿದ್ದಾರೆ.