ಧಾರವಾಡದ ಕಟ್ಟಡ ದುರಂತದಲ್ಲಿ ನಾಲ್ಕು ದಿನಗಳಿಂದ ನೀರು ಆಹಾರ ವಿಲ್ಲದೆ ಪವಾಡ ರೀತಿಯಲ್ಲಿ ಬದುಕಿಬಂದು ಆಶ್ಚರ್ಯ ಮೂಡಿಸಿದ ಯುವಕ..

0
383

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಇಡಿ ರಾಜ್ಯವನ್ನೇ ಆಘಾತಕ್ಕೆ ಎಡೆಮಾಡಿದೆ. ಈ ಘಟನೆ ನಡೆದು ಸುಮಾರು 90 ಘಂಟೆ ಕಳೆದಿದು ಈ ವರಗೆ 15 ಜನರು ಮೃತ ಪಟ್ಟಿದ್ದಾರೆ ಕಳೆದ 4 ನಾಲ್ಕು ದಿನಗಳಿಂದ ಹಗಲು ರಾತ್ರಿ ಎನ್ನದೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕಟ್ಟಡದ ಒಳಗೆ ಸಿಲುಕಿದ ಎಲ್ಲರು ಬಹುತೇಕ ಬದುಕುವ ಅನುಮಾನವಾಗಿತ್ತು. ಆದರೆ ಪವಾಡಮಯವಾಗಿ ಯುವಕ ಬದುಕಿದ್ದಾನೆ. ಅದೇ ಕಟ್ಟಡದಲ್ಲಿರುವ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದ. ಯುವಕ ಸಂಗನಗೌಡ ಜೀವ ಉಳಿಸಿಕೊಂಡಿದ್ದು, ಎನ್.ಡಿ.ಆರ್.ಎಫ್. ಸಿಬ್ಬಂದಿ ಆತನನ್ನು ಸುರಕ್ಷಿತವಾಗಿ ಹೊರ ತಂದಿದ್ದಾರೆ.

ಹೌದು ಪವಾಡ ಎನ್ನುವಂತೆ ಜೆಡಿಎಸ್ ಕಚೇರಿಯಲ್ಲಿ ಆಫೀಸ್ ಬಾಯ್ ಆಗಿದ್ದ ಸಂಗನಗೌಡ ಎಂಬ ಯುವಕ ಜೀವಂತವಾಗಿ ಹೊರ ಬಂದಿದ್ದಾನೆ. ಕಳೆದ ನಾಲ್ಕು ದಿನಗಳಿಂದ ನೀರು-ಆಹಾರವಿಲ್ಲದಿದ್ದರೂ ತನ್ನ ಆತ್ಮಸ್ಥೈರ್ಯದಿಂದಲೇ ಸಂಗನಗೌಡ ಜೀವ ಉಳಿಸಿಕೊಂಡಿದ್ದು, ಇದರಿಂದಾಗಿ ಇನ್ನೂ ಅದೇ ಸ್ಥಳದಲ್ಲಿ ಸಿಲುಕಿಕೊಂಡಿರುವವರು ಜೀವಂತವಾಗಿರಬಹುದೆಂಬ ಎನ್ನುವುದು ತಿಳಿಯುತ್ತಿದೆ. ಅಚ್ಚರಿಯ ಸಂಗತಿಯೆಂದರೆ ನಾಲ್ಕು ದಿನಗಳಿಂದಲೂ ನೀರು-ಆಹಾರವಿಲ್ಲದೆ ಸಿಲುಕಿಕೊಂಡಿದ್ದ ಸಂಗನಗೌಡನನ್ನು ಹೊರಗೆ ಕರೆ ತರುತ್ತಿದ್ದಂತೆಯೇ ಲವಲವಿಕೆಯಿಂದ ಮಾತನಾಡಿದರು.

ಈ ವೇಳೆಯಲ್ಲಿ ಮಾತನಾಡಿದ ಸಂಗನಗೌಡ ನಾನು ಬದುಕುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನಾನು ಕೆಲಸ ಮಾಡುತ್ತಿದ್ದ ಕಚೇರಿಗೆ ಊಟ ಮುಗಿಸಿಕೊಂಡು ಬರುತ್ತಿದ್ದಂತೆ ಏಕಾಏಕಿ ಕಟ್ಟಡ ಕುಸಿದು ಬಿತ್ತು. ಮೈಮೇಲೆಲ್ಲಾ ಕಟ್ಟಡದ ಆವಶೇಷಗಳು ಬಿದ್ದರೂ ಸಹ ನಾನಿದ್ದ ಸ್ಥಳದಲ್ಲಿ ಜಾಗವಿತ್ತು. ಹಗಲು-ರಾತ್ರಿ ಎನ್ನುವುದೂ ಗೊತ್ತಾಗಲಿಲ್ಲ. ಯಾವುದೋ ಟಾರ್ಚ್‍ನ ಬೆಳಕನ್ನು ನೋಡಿ ನನ್ನ ಶಕ್ತಿಯೆಲ್ಲ ಒಂದುಗೂಡಿಸಿಕೊಂಡು ಕೂಗಿಕೊಂಡೆ. ಅದು ಪರಿಹಾರ ಸಿಬ್ಬಂದಿಗೆ ಕೇಳಿಸಿತು. ಇದೊಂದು ಮರುಜನ್ಮ, ಪವಾಡ ಎಂದು ಹೇಳಿಕೊಂಡರು.

Also read: ಧಾರವಾಡ ವಾಣಿಜ್ಯ ಮಳಿಗೆ ಕುಸಿತ ಸಾವಿನ ಸಂಖ್ಯೆ 11 ಕ್ಕೆ ಏರಿಕೆ; ಇನ್ನೂ 15 ವಿದ್ಯಾರ್ಥಿನಿಯರು ಸೇರಿ 20 ಕ್ಕೂ ಹೆಚ್ಚು ಜನರು ಸಿಲುಕಿರುವ ಮಾಹಿತಿ ಲಭ್ಯ..

ಅಲ್ಲದೇ ತಾವೇ ಸ್ವತಃ ಆ್ಯಂಬುಲೆನ್ಸ್‍ವರೆಗೆ ನಡೆದುಕೊಂಡು ಹೋಗಿದ್ದಾರೆ. ನಾನಿದ್ದ ಸ್ಥಳದಲ್ಲೇ ಕೆಲವರು ಸಹಾಯಕ್ಕಾಗಿ ಕೂಗುತ್ತಿದ್ದುದು ನನಗೆ ಕೇಳಿಸುತ್ತಿತ್ತು ಎಂದು ಸಂಗನಗೌಡ ಹೇಳಿರುವುದರಿಂದ ಅವರುಗಳನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಸಂಗನಗೌಡ ಅವರಿಗೆ ಹೆಚ್ಚಿನ ಗಾಯಗಳಾಗಿಲ್ಲ. ಕಣ್ಣಿನ ಬಳಿ ಸ್ವಲ್ಪ ಗಾಯವಾಗಿದೆ. ಆದರೆ ಅನ್ನ ಆಹಾರವಿಲ್ಲದೆ ನಿಶ್ಯಕ್ತರಾಗಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿ ಕೂಡಲೇ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಂಗನಗೌಡ ಇದ್ದ ಸ್ಥಳದಲ್ಲಿ ದಿಲೀಪ್ ಮತ್ತು ಸಂಗೀತ ಎಂಬ ಇಬ್ಬರು ಇದ್ದಾರೆ ಎಂದು ತಿಳಿದುಬಂದಿದ್ದು ಅವರನ್ನು ಸುರಕ್ಷಿತವಾಗಿ ಹೊರತರಲು ರಕ್ಷಣಾ ಪಡೆ ಹರಸಾಹಸ ಮಾಡುತ್ತಿದೆ.

ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆ

Also read: ಧಾರವಾಡದಲ್ಲಿ ನಿರ್ಮಾಣ ಹಂತದಲ್ಲಿದ ಐದು ಅಂತಸ್ತಿನ ಕಟ್ಟಡ ಕುಸಿತ; 6 ಜನರು ಸಾವು 50 ಕ್ಕೂ ಹೆಚ್ಚು ಜನ ಸಿಲುಕಿರುವ ಶಂಕೆ..

ಕಟ್ಟಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆ ಆಗಿದೆ. ಕುಮಾರೇಶ್ವರ ನಗರ ನಿವಾಸಿಯಾಗಿದ್ದ ಅನೂಪ್ ಕುಡತರಕರ್​ ಎಂಬ 23 ವರ್ಷದ ಯುವಕ ಹಾಗೂ 45 ವರ್ಷದ ದ್ರಾಕ್ಷಾಯಿಣಿ ಮತ್ತುತ್ತೂರು ಎಂಬ ಮಹಿಳೆ ಮೃತಪಟ್ಟಿದ್ದಾರೆ. ಅನೂಪ ಕುಡತರಕರ್ ಕುಸಿತ ಕಟ್ಟಡ ಬಳಿ ಸೈಬರ್​​ ಕೆಪೆ ನಡೆಸುತ್ತಿದ್ದ. ದಾಕ್ಷಾಯಿಣಿ ಮುತ್ತೂರು ಕಟ್ಟಡದ ಕೆಳ ಮಹಡಿಯಲ್ಲಿ 5 ತಿಂಗಳಿಂದ ಹೊಟೆಲ್ ನಡೆಸುತ್ತಿದ್ದರು. ಗಂಡ ಹೊರಗೆ ಹೋದಾಗ ಕಟ್ಟಡ ಕುಸಿದು ಬಿದ್ದಿತ್ತು. ಕಟ್ಟಡದ ಅವಶೇಷಗಳ ಅಡಿಯಲ್ಲಿ ಒಟ್ಟು 61 ಜನರನ್ನು ರಕ್ಷಣೆ ಮಾಡಲಾಗಿದೆ.