ತಾತ ಸತ್ತನೆಂದು ಫ್ರೀಜರ್‌ನಲ್ಲಿ ಇಟ್ಟವರಿಗೆ ಕಾದಿತ್ತು ಶಾಕ್:‌ ಆದರೆ ವೃದ್ಧನ ಈಗಿನ ಸ್ಥಿತಿ ಏನು ಗೊತ್ತಾ..?

0
159

ಆಸ್ಪತ್ರೆಯ ಶೈತ್ಯಾಗಾರದ ಫ್ರೀಝರ್ನಲ್ಲಿ 24 ಗಂಟೆ ಇಟ್ಟಿದ್ದ ಶವ ಪವಾಡಸ ದೃಶವಾಗಿ ಜೀವಂತವಾಗಿ ರಕ್ಷಿಸಲ್ಪಟ್ಟ 74 ವರ್ಷದ ವೃದ್ಧ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಇತ್ತೀಚೆಗೆ ಅಸೌಖ್ಯದಿಂದ ಗಂಭೀರಾವಸ್ಥೆಯಲ್ಲಿದ್ದ ಬಾಲಸುಬ್ರಮಣ್ಯ ಕುಮಾರ್ ಎಂಬವರನ್ನು ಸೇಲಂ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಇವರು ಸೋಮವಾರ ಮೃತಪಟ್ಟಿರುವುದಾಗಿ ಆಸ್ಪತ್ರೆಯವರು ತಿಳಿಸಿದ್ದರು. ಮೃತದೇಹವನ್ನಿಡುವ ಶೈತ್ಯಾಗಾರದ ಫ್ರೀಝರ್ನಲ್ಲಿ ಇವರನ್ನು ಇರಿಸಿದ್ದರು. ಆದರೆ ಮಂಗಳವಾರ ಮೃತದೇಹ ಹಸ್ತಾಂತರ ಪ್ರಕ್ರಿಯೆ ಸಂದರ್ಭ ಬಾಲಸುಬ್ರಮಣ್ಯ ಕುಮಾರ್ ಇನ್ನೂ ಜೀವಂತವಾಗಿ ಅರೆಪ್ರಜ್ಞಾವಸ್ಥೆಯಲ್ಲಿರುವುದು ಬೆಳಕಿಗೆ ಬಂದಿತ್ತು.

ಈ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಈತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಬಾಲಸುಬ್ರಮಣ್ಯ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಶ್ವಾಸಕೋಶದ ಸಮಸ್ಯೆಯಿಂದ ವೃದ್ಧ ಮೃತಪಟ್ಟಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸುವಾಗ ಅರೆ ಪ್ರಜ್ಞಾವಸ್ತೆಯಲ್ಲಿದ್ದರು ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಬಾಲಸುಬ್ರಮಣ್ಯ ಕುಮಾರ್ರನ್ನು‌ ಮಂಗಳವಾರ ರೋಗಿ ಮೃತನಾಗಿರುವುದಾಗಿ ಆಸ್ಪತ್ರೆಯವರು ಸಹಿ ಹಾಕಿದ ಪತ್ರ ನೀಡಿದ ಬಳಿಕಷ್ಟೇ ಮೃತದೇಹವನ್ನು ಫ್ರೀಝರ್ನಲ್ಲಿ ಇರಿಸಿದ್ದಾಗಿ ಮೃತನ ಕುಟುಂಬದವರು ಹೇಳಿದ್ದರು. ಪ್ರಕರಣದಲ್ಲಿ ಖಾಸಗಿ ಆಸ್ಪತ್ರೆಯವರ ನಿರ್ಲಕ್ಷದ ಆರೋಪದ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದರು.

ಬಾಲಸುಬ್ರಹ್ಮಣ್ಯ ಕುಮಾರ್ 70 ವರ್ಷದ ಕಿರಿಯ ಸಹೋದರ ಸರವಣನ್ ಮತ್ತು ಅವರ ಸಹೋದರಿಯ ಮಗಳು ಗೀತಾ ಅವರೊಂದಿಗೆ ವಾಸಿಸುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ಬಾಲಸುಬ್ರಹ್ಮಣ್ಯ ಕುಮಾರ್ ಅವರ ಆರೋಗ್ಯ ಸರಿಯಿಲ್ಲದ ಕಾರಣ ಮಲಗಿದ್ದಲ್ಲೇ ಇದ್ದರು. ಆದರೆ ಅಕ್ಟೋಬರ್ 12ರಂದು ಅವರನ್ನು ಮೇಲಕ್ಕೆ ಏಳಿಸಲು ಪ್ರಯತ್ನಿಸಿದ್ದಾರೆ. ಆಗ ಅವರು ಎಚ್ಚರಗೊಂಡಿಲ್ಲ. ಹೀಗಾಗಿ ಸರವಣನ್ ಅವರು ತಮ್ಮ ಸಹೋದರ ಬಾಲಸುಬ್ರಹ್ಮಣ್ಯ ಸಾವನ್ನಪ್ಪಿದ್ದಾರೆಂದು ಭಾವಿಸಿದ್ದಾರೆ.

ಇದರಿಂದ ಸೋಮವಾರ ಫ್ರೀಜರ್ ಬಾಕ್ಸ್ ಕಂಪನಿಯವರನ್ನು ಕರೆದು ಅದರಲ್ಲಿ ಬಾಲಸುಬ್ರಹ್ಮಣ್ಯ ಅವರನ್ನು ಇಟ್ಟು, ಸಂಬಂಧಿಕರಿಗೂ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಂಗಳವಾರ ಸಂಜೆ ವೇಳಗೆ ಮನೆಗೆ ಸಂಬಂಧಿಕರು ಬಂದಿದ್ದಾರೆ. ಈ ವೇಳೆ ಫ್ರೀಜರ್ ಬಾಕ್ಸ್ ವಾಪಸ್ ಪಡೆಯಲು ಫ್ರೀಜರ್ ಕಂಪನಿಯವರು ಸ್ಥಳಕ್ಕೆ ಬಂದಿದ್ದಾರೆ. ಆಗ ಫ್ರೀಜರ್ ಬಾಕ್ಸಿನೊಳಗೆ ವೃದ್ಧ ಉಸಿರಾಡುತ್ತಿರುವುದು ಗಮನಕ್ಕೆ ಬಂದಿತ್ತು. ಆದರೆ ಬಳಿಕ ಆಸಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇದೀಗ ವ್ಯಕ್ತಿ ಮೃತಪಟ್ಟಿರುವ ವರಿದಿಯಾಗಿದೆ.