ಅತ್ಯಂತ ಶಾಕಿಂಗ್ ಘಟನೆ: ಹಸುಗಳೊಂದಿಗೆ ಸೆಕ್ಸ್ ಮಾಡುತ್ತಿದ್ದ ಈ ಭೂಪ..!

0
1151

ಕಾಮುಕರು ನಾಯಿ, ಮೇಕೆ ಹಾಗೂ ದನದ ಜೊತೆ ಸೆಕ್ಸ್ ಮಾಡಿರುವ ಸುದ್ದಿಗಳನ್ನು ಈ ಹಿಂದೆ ಕೇಳಿದ್ದೆವು. ಆದ್ರೆ ಇದೀಗ ಮಾನಸಿಕ ಅಸ್ವಸ್ಥನೊಬ್ಬ ಹಸುಗಳ ಜೊತೆ ಅಸ್ವಾಭವಿಕವಾಗಿ ಸೆಕ್ಸ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ವ್ಯಕ್ತಿ ಮೂರು ಹಸುಗಳ ಜೊತೆ ಸೆಕ್ಸ್ ಮಾಡಿದ್ದು ಅದರಲ್ಲಿ ಒಂದು ಹಸು ಸಾವನ್ನಪ್ಪಿರುವ ವಿಚಿತ್ರ ಘಟನೆ ಗುಜರಾತ್‍ನ ವಡೋದರಾದ ವರ್ನಾಮಾ ಗ್ರಾಮದಲ್ಲಿ ನಡೆದಿದೆ. ಸಧ್ಯ ಆರೋಪಿ ರಥೋಡಿಯಾನನ್ನು ಪೊಲೀಸರು ಬಂಧಿಸಿದ್ದಾರೆ.

ಹೌದು.. ರಥೋಡಿಯಾ ಕಳೆದ ಭಾನುವಾರ ಹಾಗೂ ಸೋಮವಾರ ಮಧ್ಯರಾತ್ರಿ ಮೂರು ಹಸುಗಳ ಜೊತೆ ಸೆಕ್ಸ್ ಮಾಡಿದ್ದಾನೆ. ಹಸುಗಳ ಮಾಲೀಕ ಲಾಲ್‍ಜಿ ರಾಬಾರಿ ಮುಂಜಾನೆ ಕೊಟ್ಟಿಗೆಗೆ ಬಂದಿದ್ದಾಗ ಆತನಿಗೆ ಶಾಕ್ ಕಾದಿತ್ತು.. ಮೂರು ಹಸುಗಳ ಕಾಲುಗಳನ್ನು ಕಟ್ಟಲಾಗಿತ್ತು. ಒಂದು ಹಸು ಮೃತಪಟ್ಟಿತ್ತು. ಇದನ್ನು ಗಮನಿಸಿದ ಮಾಲೀಕ, ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆದಿದೆ ಎಂಬ ಶಂಕೆ ಮೂಡಿತ್ತು. ಆಗ ಕೆಲಸಗಾರ ರಥೋಡಿಯಾ ಮೇಲೆ ಅನುಮಾನ ಬಂದಿದೆ. ಯಾಕಂದ್ರೆ ಎರಡು ವರ್ಷಗಳ ಹಿಂದೆ ರಥೋಡಿಯಾ ಕರುವಿನ ಮೇಲೆ ಇದೇ ರೀತಿಯ ಕೃತ್ಯವೆಸಗಿದ್ದು ಲಾಲ್‍ಜೀ ಗೊತ್ತಿತ್ತು.

ಕೂಡಲೇ ಮಾಲೀಕ ವರ್ನಾಮಾ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ವಿಚಾರಣೆ ಮಾಡಿದಾಗ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಈಗ ವರ್ನಾಮಾ ಪೊಲೀಸರು ಆರೋಪಿ ವಿರುದ್ಧ ಪ್ರಾಣಿಗಳ ಕೌರ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ರಥೋಡಿಯಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಹಲವು ಸಂದರ್ಭಗಳಲ್ಲಿ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ತಿದ್ದ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.