ಮಂಡಕ್ಕಿ ಪಕೋಡ
ಬೇಕಾಗುವ ಸಾಮಗ್ರಿ:
- ಮಂಡಕ್ಕಿ-2 ಲೀಟರ್,
- ಚಿರೋಟಿ ರವೆ-50 ಗ್ರಾಂ,
- ಹಸಿಮೆಣಸಿನಕಾಯಿ-5,
- ಉಪ್ಪು-ರುಚಿಗೆ,
- ತೆಂಗಿನತುರಿ-ಸ್ವಲ್ಪ,
- ಕೊತ್ತಂಬರಿ ಸೊಪ್ಪು ಹೆಚ್ಚಿದ್ದು-ಸ್ವಲ್ಪ,
- ಈರುಳ್ಳಿ-2 ಉಪ್ಪು ರುಚಿಗೆ.
ಮಾಡುವ ವಿಧಾನ:
ಮಂಡಕ್ಕಿ ನೆನಸಿ ಹಿಂಡಿ ತರಿತರಿಯಾಗಿ ಮಿಕ್ಸಿ ಮಾಡಿ. ಹಸಿಮೆಣಸಿನಕಾಯಿ, ತೆಂಗಿನತುರಿ, ಕೊತ್ತಂಬರಿ ಸೊಪ್ಪು ರುಬ್ಬಿಹಾಕಿ. ಅದಕ್ಕೆ ಚಿರೋಟಿ ರವೆ, ಉಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಬೆರೆಸಿ 2 ಚಮಚ ಕಾದ ಎಣ್ಣೆ ಹಾಕಿ ಮಿಕ್ಸ್ ಮಾಡಿ ಎಣ್ಣೆ ಕಾಯಲು ಇಟ್ಟು ಪಕೋಡ ಕರಿದು ಬಿಸಿ ಬಿಸಿಯಾಗಿ ಕಾಫಿ ಜೊತೆ ಸವಿಯಲು ಕೊಡಿ.