ಚುನಾವಣಾ ಆಯೋಗಕ್ಕೆ ದೊಡ್ಡ ತಲೆನೋವಾದ ಮಂಡ್ಯದ ಫಲಿತಾಂಶ; ಮೇ 23 ರಂದು ಮಂಡ್ಯದಲ್ಲಿ ಕಫ್ರ್ಯೂ ಜಾರಿ?ಎರಡು ದಿನಗಳು ಮಂಡ್ಯ ಜಿಲ್ಲೆ ಸಂಪೂರ್ಣ ಬಂದ್..

0
529

ಲೋಕಸಭಾ ಚುನಾವಣೆಯಲ್ಲಿ ಇಡಿ ದೇಶದ ತುಂಬೆಲ್ಲ ಕುತೂಹಲ ಮೂಡಿಸಿರುವ ಮಂಡ್ಯ ಚುನಾವಣಾ ಕ್ಷೇತ್ರದಲ್ಲಿ ಮತದಾನ ಮುಗಿದ ನಂತರ ಬೆಟ್ಟಿಂಗ್ ಸುದ್ದಿ ಹರಡಿತ್ತು, ಸುಮಲತಾ ಗೆಲುವುದ್ದು ಪಕ್ಕಾ ಎಂದರೆ ನಿಖಿಲ್ ಗೆಲ್ಲುವುದು ಪಕ್ಕಾ ಎಂದು ಎರಡು ಕಡೆಯ ಬೆಂಬಲಿಗರು ಪಲಿತಾಂಶದ ಕುತೂಹಲದಲ್ಲಿದರೆ. ಮೇ 23 ರಂದು ಫಲಿತಾಂಶದ ದಿನ ಮಂಡ್ಯದ ಭದ್ರತೆಯ ಬಗ್ಗೆ ಚುನಾವಣಾ ಆಯೋಗ ತಲೆಕೆಡಿಸಿಕೊಂಡಿದೆ. ಏಕೆಂದರೆ ಎರಡು ಪಕ್ಷದ ಜನರು ಬಾರಿ ನಿರೀಕ್ಷೆಯಲ್ಲಿರುವ ಕಾರಣ ಗಲಭೆ ಏಳುವುದು ಪಕ್ಕಾ ಎನ್ನುವ ಸೂಚನೆಯಲ್ಲಿ ಪಲಿತಾಂಶ ದಿನ ಹೇಗೆ ಭದ್ರತೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಚುನಾವಣಾ ಆಯೋಗ ಚಿಂತೆಯಲ್ಲಿದೆ.

Also read: ಮಾಜಿ ಸಿಎಂ ಸಿದ್ದರಾಮಯ್ಯಗೆ ಕೈಗೆ ಬಳೆ ತೊಟ್ಟಿಕೊಳ್ಳಿ ಎಂದು ಸಲಹೆ ನೀಡಿದ ಶೋಭಾ ಕರಂದ್ಲಾಜೆ; ಸಿದ್ದು ಬಲಹೀನರು ಎನ್ನುವ ಹೇಳಿಕೆ ಬಾರಿ ವೈರಲ್..

ಹೌದು ರಾಜ್ಯದಲ್ಲಿ ಚುನಾವಣೆ ಜ್ವಾಲೆ ಎಬ್ಬಿಸಿರುವ ಮಂಡ್ಯದಲ್ಲಿ ಪಲಿತಾಂಶದ ದಿನ ಗಲಾಟೆ ಆಗುವ ಲಕ್ಷಣಗಳು ಕಂಡು ಬರುತ್ತಿವೆ. ಈಗಾಗಲೇ ಪ್ರಚಾರ ಸಮಯದಲ್ಲಿ ಮತ್ತು ಮತದಾನದ ನಂತರ ಹಲವು ಮಾರಾಮಾರಿ ನಡೆದಿದ್ದು ಮೇ 23 ರಂದು ಯಾವ ಸ್ಥಿತಿ ನಿರ್ಮಾಣವಾಗುತ್ತೆ ಎನ್ನುವುದು ತಿಳಿಯದಂತೆ ಆಗಿದೆ. ಈ ಸಂಬಂಧ ಮೇ 23 ರ ಚುನಾವಣಾ ಫಲಿತಾಂಶದ ದಿನ ಮಂಡ್ಯ ಭದ್ರತೆ ಕುರಿತು ಪೊಲೀಸ್ ಮಹಾನಿರ್ದೇಶಕರಿಂದ ಚುನಾವಣಾ ಆಯೋಗ ಮಾಹಿತಿ ಕೇಳಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಮತ್ತು ಎಸ್‍ಪಿ ಜೊತೆಗೆ ಪೊಲೀಸ್ ಮಹಾನಿರ್ದೇಶಕರು ಸಭೆ ನಡೆಸಿದ್ದಾರೆ ಎನ್ನಲಾಗಿದೆ.

Also read: ಮುಂಗಾರು ನಿರೀಕ್ಷೆಯಲ್ಲಿರುವ ರೈತರಿಗೆ ಆಘಾತಕರ ಸುದ್ದಿ; ಈ ವರ್ಷದ ಮಳೆಯು ಕೈ ಕೊಡುವ ಮುನ್ಸೂಚನೆ ಮೋಡ ಬಿತ್ತನೆಗೆ ನಿರ್ಧರಿಸಿದ ರಾಜ್ಯ ಸರ್ಕಾರ..

ಈಗಾಗಲೇ ಹಲವು ಘಟನೆಗಳು ನಡೆದಿರುವ ಮಂಡ್ಯದಲ್ಲಿ ಬಹುತೇಕ ಜನರ ನಡುವೆ ಈಗ ಲೋಕಸಭೆ ಚುನಾವಣೆ ಬೆಟ್ಟಿಂಗ್‌ ಆರಂಭಗೊಂಡಿದೆ. ಇವೆಲ್ಲವೂ ತೆರೆಮರೆಯಲ್ಲಿ ನಡೆಯುವುದರಿಂದ ಪೊಲೀಸರೂ ಏನೂ ಮಾಡದಂತಾಗಿದೆ. ಬಹಿರಂಗ ಪ್ರಚಾರ ಅಂತ್ಯಗೊಂಡು ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಾಗಲೇ ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಇಡೀ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಬೆಟ್ಟಿಂಗ್‌ ಭರಾಟೆ ಜೋರಾಗಿಯೇ ನಡೆಯುತ್ತಿದೆ. ಜೋಡೆತ್ತು, ಹಸು, ಕುರಿಗಳೊಂದಿಗೆ ಕೃಷಿ ಜಮೀನು, ಹೊಲವನ್ನು ಪಣಕ್ಕಿಟ್ಟು ತಮ್ಮ ನೆಚ್ಚಿನ ಅಭ್ಯರ್ಥಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಮತದಾನಕ್ಕೂ ಮುನ್ನವೇ ಮಂಡ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಚರ್ಚೆಯೊಂದಿಗೆ ಈ ರೀತಿ ವಿನೂತವಾಗಿ ಬೆಟ್ಟಿಂಗ್‌ ದಂಧೆ ಶುರುವಾಗಿದೆ.

ಆದಕಾರಣಕ್ಕೆ ಅಹಿತಕರ ಘಟನೆ ನಡೆಯದಂತೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಅನ್ನೋದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಮಂಡ್ಯಕ್ಕೆ ಹೆಚ್ಚಿನ ಭದ್ರತೆಗಾಗಿ ಪೊಲೀಸರ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ 22 ರಿಂದಲೇ ಮಂಡ್ಯ ಜಿಲ್ಲೆಯಾದ್ಯಂತ ಕರ್ನಾಟಕ ಪೊಲೀಸ್ ಜೊತೆಗೆ ಸಿಆರ್‌ಪಿಎಫ್ ಅವರು ಗಸ್ತು ತಿರುಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕಫ್ರ್ಯೂ ಜಾರಿ?

Also read: ಲೋಕಸಭಾ ಚುನಾವಣೆಯಲ್ಲಿ ಸಚಿವ ರೇವಣ್ಣನವರ ಸೆಕ್ಯೂರಿಟಿ ವಾಹನದಲ್ಲಿ ಸಿಕ್ಕ ಹಣದ ವೀಡಿಯೊ ಸಾಕ್ಷಿ ರಾತ್ರೋ ರಾತ್ರಿ ಡಿಲೀಟ್ ಏನಿದು ಜಾದು??

ಮೇ 23ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ಸೆಕ್ಷನ್ 144 ಕಫ್ರ್ಯೂ ಹೇರಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇತ್ತ ಮಂಡ್ಯದಲ್ಲಿ 22 ರಿಂದಲೇ ಮದ್ಯದಂಗಡಿ ಕೂಡ ಬಂದ್ ಆಗಲಿದ್ದು, ಎರಡು ದಿನಗಳ ಕಾಲ ಮದ್ಯದಂಗಡಿ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ. 23 ಮತ್ತು 24ರಂದು ಯಾವುದೇ ಮೆರವಣಿಗೆ ಮಾಡಬಾರದು ಮತ್ತು ಪಟಾಕಿ ಹೊಡೆಯಬಾರದು ಎಂದು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಅದರಂತೆ ಮಕ್ಕಳಿಗೆ ತೊಂದರೆಯಾಗಬಾರದೆಂದು ಎರಡು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಇದೆ. ಇತ್ತ ಸಿನಿಮಾ ಥಿಯೇಟರ್, ಮಾಲ್‍ಗಳು ಕ್ಲೋಸ್ ಆಗಲಿವೆ. ಕೆಎಸ್‌ಆರ್‌ಟಿಸಿ ಮತ್ತು ರೈಲ್ವೇ ನಿಲ್ದಾಣಗಳಿಗೆ ಹೆಚ್ಚಿನ ಭದ್ರತೆ ನೀಡಲಾಗುತ್ತದೆ. ಒಟ್ಟಾರೆಯಾಗಿ ಮಂಡ್ಯ ಚುನಾವಣೆ ಆರಂಭದಿಂದ ಪಲಿತಾಂಶದ ವರೆಗೆ ರಣರಂಗವಾಗಿದೆ.