ಜೀವನಮಟ್ಟ ನೆಡಸಲು ಮಂಗಳೂರು ದಿ ಬೆಸ್ಟ್ ನಗರ ದೇಶದಲ್ಲೇ ಮೊದಲ ಸ್ಥಾನ..

0
686

ಹೌದು ನೀವು ಸಾಮಾನ್ಯವಾಗಿ ಕೆಲಸ ಹುಡುಕಿ ಬೆಂಗಳೂರು ಅಂತ ಬರುವವರ ಸಂಖ್ಯೆ ಹೆಚ್ಚು. ಯಾಕೆ ಅಂದ್ರೆ ಬೆಂಗಳೂರಿನಲ್ಲಿ ಒಳ್ಳೆ ಕೆಲಸ ಒಳ್ಳೆ ದುಡುಮೆ ಮಾಡಿ ಒಳ್ಳೆ ಜೀವನ ನೆಡಸಬಹುದು ಅನ್ನೋರ ಜಾಸ್ತಿ. ಆದ್ರೆ ಇನ್ನಮುಂದೆ ನೀವು ಬೆಂಗಳೂರಿಗಿಂತ ಮಂಗಳರು ಬೆಸ್ಟ್ ಅನ್ನೋದು ಗ್ಯಾರೆಂಟಿ. ಯಾಕೆ ಅಂದ್ರೆ ಮಂಗಳೂರು ನಮ್ಮ ದೇಶದಲ್ಲೇ ಒಳ್ಳೆ ಜೀವನ ಮಟ್ಟ ನೆಡಸುವ ನಗರಗಳ ಪೈಕಿ ಮೊದಲನೇ ಸ್ಥಾನ ಪಡೆದು ಕೊಂಡಿದೆ.

Related image

ಬುದ್ಧಿವಂತರ ನಾಡು ಎಂದು ಕರೆಸಿಕೊಳ್ಳುತ್ತಿದ್ದ ಮಂಗಳೂರಿನ ಕಿರೀಟಕ್ಕೆ ಇದೀಗ ಮತ್ತೂಂದು ಹೊಸ ಗರಿ. ಇಡೀ ದೇಶದಲ್ಲೇ ಅತ್ಯುತ್ತಮ ಗುಣಮಟ್ಟದ ಜೀವನ ಹೊಂದಿರುವ ನಗರಗಳ ಪೈಕಿ ಮಂಗಳೂರು 1ನೇ ಸ್ಥಾನ ಪಡೆದುಕೊಂಡಿದೆ.

Image result for mangalore

ಜೀವನಮಟ್ಟದ ವಿಷಯದಲ್ಲಿ ಹೇಳುವುದಾದರೆ ಕರ್ನಾಟಕದ “ಮಂಗಳೂರು” ದೇಶದಲ್ಲಿಯೇ “ಅತ್ಯುತ್ತಮ ನಗರ” ಎಂದು ಬಳಕೆದಾರರಿಂದ ಸಂಗ್ರಹಿತ ದತ್ತಾಂಶ ಕೋಶ “ನಂಬಿಯೊ” ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. 185.12 ಜೀವನಮಟ್ಟ ಸೂಚ್ಯಂಕದೊಂದಿಗೆ ಮಂಗಳೂರು ಲಂಡನ್, ನ್ಯೂಯಾರ್ಕ್ ಮತ್ತು ಪ್ಯಾರಿಸ್‌ನಂತಹ 189 ಜಾಗತಿಕ ನಗರಗಳ ಪಟ್ಟಿಯಲ್ಲಿ ಏಳನೇ ಸ್ಥಾನವನ್ನೂ ಅಲಂಕರಿಸಿದೆ.

Related image

ಜೀವನ ಮಟ್ಟಕ್ಕೆ ಸಂಬಂಧಿಸಿದಂತೆ ಭಾರತದ 5 ಐದು ಅತ್ಯುನ್ನತ ನಗರಗಳ ಪೈಕಿ. ಹೈದರಾಬಾದ್ 117.30 ಜೀವನ ಮಟ್ಟ ಸೂಚ್ಯಂಕದೊಂದಿಗೆ ಪಟ್ಟಿಯಲ್ಲಿ 129ನೇ ಸ್ಥಾನದಲ್ಲಿದ್ದರೆ ಬೆಂಗಳೂರು(115.52) 131ನೇ ಮತ್ತು ಕೊಯಮತ್ತೂರು(113.66) 134ನೇ ಸ್ಥಾನಗಳಲ್ಲಿವೆ. ಇವು ಅನುಕ್ರಮವಾಗಿ ಭಾರತದಲ್ಲಿ 3,4 ಮತ್ತು 5ನೇ ಅತ್ಯುತ್ತಮ ಜೀವನಮಟ್ಟ ನಗರಗಳಾಗಿವೆ. ಪಟ್ಟಿಯಲ್ಲಿರುವ ಪುಣೆ(121.55) ಭಾರತದ ಎರಡನೇ ಅತ್ಯುತ್ತಮ ನಗರವಾಗಿ ಹೊರಹೊಮ್ಮಿದೆ.