ಶೂನ್ಯ ಖರ್ಚಿನಲ್ಲಿ ಬೋರ್‌ವೆಲ್ ರೀಚಾರ್ಜ್ ಕಂಡು ಹಿಡಿದ ಮಾದರಿ ರೈತ; ಬತ್ತಿ ಹೋದ ಬೋರ್‌ವೆಲ್-ಗಳಲ್ಲಿ ಮತ್ತೆ ನೀರು ಭರಿಸುವುದು ಹೇಗೆ ಅಂತ ಇಲ್ಲಿದೆ ನೋಡಿ..

0
2179

ದೇಶದಲ್ಲಿ ಬೋರ್‌ವೆಲ್-ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಂದೊಂದು ದಿನ ಇದರ ಪರಿಣಾಮವನ್ನು ಭೂಮಿ ತೋರಿಸುತ್ತದೆ ಎನ್ನುವ ವಿಷಯವನ್ನು ಅಧ್ಯಯನಗಳು ತಿಳಿಸಿವೆ. ಆದರೆ ಬೋರ್‌ವೆಲ್ ಇಲ್ಲದಿದ್ದರೆ ರೈತರು ಬದುಕುವುದು ಅಸಾಧ್ಯವಾದರೆ ಇನ್ನೂ ಕುಡಿಯುವ ನೀರಿನ ಸಮಸ್ಯೆ ಕೂಡ ಅಘಾದವಾಗಿ ತಲೆದೂರುತ್ತೆ ಎನ್ನುವುದು ಅಷ್ಟೇ ಸತ್ಯವಾಗಿದೆ. ಆದರೆ ಮಳೆಯ ಪ್ರಮಾಣ ಕಡಿಮೆಯಾದರಿಂದ ಶೇಕಡಾ 80. ರಷ್ಟು ಬೋರ್‌ವೆಲ್-ಗಳಿಗೆ ಅಂತರ್ಜಲ ಕಡಿಮೆಯಾಗಿದೆ. ಇದರಿಂದ ಹಲವು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೂ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಇಂಗು ಗುಂಡಿ ಅಂತಹ ಹಲವು ಪ್ರಯೋಗಗಳನ್ನು ಮಾಡಲು ಸರ್ಕಾರ ಸಹಾಯ ಮಾಡುತ್ತಿದೆ. ಆದರೆ ಇಲ್ಲೊಬ್ಬ ಮಾದರಿ ರೈತ ಒಂದು ರುಪಾಯಿ ಖರ್ಚುಮಾಡದೆ ಬೋರ್‌ವೆಲ್ ರೀಚಾರ್ಜ್ ಮಾಡುವ ವಿಧಾನವನ್ನು ಕಂಡು ಹಿಡಿದಿದ್ದಾನೆ.

ಪೈಸೆ ಖರ್ಚಿಲ್ಲದೆ ಬೋರ್‌ವೆಲ್ ರೀಚಾರ್ಜ್?

Also read: ಇಲ್ಲೊಬ್ಬ ಮಾದರಿ ಟೆಕ್ಕಿ; ಕೃಷಿಯಲ್ಲೇ ಸಾಧನೆ ಮಾಡುತ್ತಿರುವ ಇವರ ಆದಾಯ ಕೇಳಿದ್ರೆ, ಕೃಷಿ ಬಿಟ್ಟು ನಗರಕ್ಕೆ ಬರುವರಿಗೆ ಶಾಕ್ ಆಗುತ್ತೆ..

ಹೌದು ಅಂತರ್ಜಲ ಮಟ್ಟ ಸಂರಕ್ಷಿಸುವ ಎಲ್ಲ ವೈಜ್ಞಾನಿಕ ವಿಧಾನಗಳಿಗೆ ಸೆಡ್ಡುಹೊಡೆಯುವ ರೀತಿಯಲ್ಲಿ ಇಲ್ಲೊಂದು ಹೊಸ ವಿಧಾನವನ್ನು ಕೃಷಿಕರೊಬ್ಬರು ಕಂಡುಹಿಡಿದಿದ್ದಾರೆ. ಈ ವಿಧಾನದಿಂದ ಒಂದು ರುಪಾಯಿ ಕೂಡ ಖರ್ಚಿಲ್ಲದೆ ಅತ್ಯಂತ ಸುಲಭ ವಿಧಾನದಲ್ಲಿ ಬೋರ್‌ವೆಲ್ ರೀಚಾರ್ಜ್ ಮಾಡಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಂತಹ ಸಾಹಸ ಮಾಡಿದ ಬಂಟ್ವಾಳದ ಬಳ್ಳಮಜಲು ನಿವಾಸಿ ಬಿ.ಟಿ.ನಾರಾಯಣ ಭಟ್ ರೈತ ತಮ್ಮ ಕೃಷಿ ತೋಟದಲ್ಲಿ ಕೊಳವೆಬಾವಿಗಳಿಗೆ ಈ ಜಲಮರುಪೂರಣ ವಿಧಾನವನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರದೇ ಕಲ್ಪನೆಯಲ್ಲಿ ಈ ನೂತನ ವಿಧಾನವನ್ನು ಕಂಡುಕೊಂಡಿದ್ದಾರೆ.

ಏನಿದು ಹೊಸ ವಿಧಾನ?

ನಿಮ್ಮ ಬೋರ್‌ವೆಲ್‌ನ ಮೇಲ್ಭಾಗದಲ್ಲಿ ಒಂದು ಬಟ್ಟೆಯನ್ನು ನಾಲ್ಕು ಮೂಲೆಗೆ ಕಟ್ಟಬೇಕು. ಬಳಿಕ ಮಳೆನೀರು ಬಟ್ಟೆಯ ಮಧ್ಯಭಾಗದಲ್ಲಿ ಸಂಗ್ರಹಿಸಿ ನೇರವಾಗಿ ಬೋರ್ ವೆಲ್ ಕೊಳವೆಗೆ ಬೀಳುವಂತೆ ಮಾಡಬೇಕು. ಬಟ್ಟೆ ದೊಡ್ದದಾದಷ್ಟು ನೀರು ಸಂಗ್ರಹದ ಪ್ರಮಾಣ ಜಾಸ್ತಿಯಾಗುತ್ತದೆ. ಬಟ್ಟೆಯ ಮಧ್ಯಭಾಗಕ್ಕೆ ಭಾರದ ವಸ್ತುವನ್ನು ಇರಿಸಿದರೆ, ನೀರು ಸುಲಭದಲ್ಲಿ ಕೊಳವೆಬಾವಿಗೆ ಬೀಳುತ್ತದೆ. ಈ ವಿಧಾನದಲ್ಲಿ ಮಳೆ ನೀರನ್ನು ಸೋಸುವ ಅಗತ್ಯ ಇರುವುದಿಲ್ಲ. ಬಟ್ಟೆಯಿಂದಲೇ ನೀರು ಸೋಸಿಕೊಂಡು ಕೊಳವೆಬಾವಿಯನ್ನು ಸೇರುತ್ತದೆ. ಈ ಪ್ರಯೋಗಕ್ಕೆ ಮನೆಯಲ್ಲಿರುವ ಯಾವುದೇ ಬಟ್ಟೆಯನ್ನು ಉಪಯೋಗಿಸಬಹುದು.

Also read: ಉಪಯುಕ್ತ ಇಲ್ಲದ ಪ್ಲಾಸ್ಟಿಕ್ ನಿಂದ ಪೆಟ್ರೋಲ್ ತಯಾರಿಸಿ 1 ಲೀಟರ್ ಗೆ 40 ರೂ. ನಂತೆ ಮಾರಾಟ ಮಾಡುತ್ತಿರುವ ಎಂಜಿನಿಯರ್..

ಬಟ್ಟೆಯ ನಾಲ್ಕು ಮೂಲೆಗಳನ್ನು ಹಗ್ಗ ಅಥವಾ ಅಡಕೆ ತೋಟದಲ್ಲಾದರೆ ಮರಗಳಿಗೆ ಹಗ್ಗದಿಂದ ಎಳೆದು ಕಟ್ಟಿದರೆ ಸಾಕಾಗುತ್ತದೆ. ಅತ್ಯಂತ ಸುಲಭದಲ್ಲಿ, ಹೆಚ್ಚಿನ ಶ್ರಮ ಇಲ್ಲದೆ ಮಳೆನೀರನ್ನು ಬೋರ್‌ವೆಲ್ ಗೆ ರೀಚಾರ್ಜ್ ಮಾಡಲು ಸಾಧ್ಯವಿದೆ. ಈ ವಿಧಾನದಲ್ಲಿ ಮಳೆನೀರು ಇಳಿದುಹೋಗಲು ಬೋರ್‌ವೆಲ್ ಕ್ಯಾಪ್ ತೆಗೆಯಬಹುದು. ಇಲ್ಲವೇ ಸಣ್ಣ ರಂಧ್ರ ಇರುವ ಕ್ಯಾಪ್‌ನ್ನು ಹಾಕಿಕೊಳ್ಳಬಹುದು ಎಂದು ನಾರಾಯಣ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ ಮನೆ ಬಳಕೆಗೆ ಕನಿಷ್ಠ 500 ಲೀಟರ್ ನೀರು ಬೇಕಾಗುತ್ತದೆ. ಈ ವಿಧಾನದಲ್ಲಿ ಬೋರ್‌ವೆಲ್‌ನಲ್ಲಿ ನೀರು ಹಿಡಿದಿಟ್ಟುಕೊಂಡರೆ ದಿನದಲ್ಲಿ ಮಳೆಯನ್ನು ಅವಲಂಬಿಸಿಕೊಂಡು ಕನಿಷ್ಠ 60 ಲೀಟರ್, ಜಾಸ್ತಿ ಮಳೆಯಾದರೆ ಮಾಸಿಕ 30 ಸಾವಿರ ಲೀಟರ್‌ಗೂ ಅಧಿಕ ನೀರನ್ನು ಇಂಗಿಸಲು ಸಾಧ್ಯವಿದೆ. ಮತ್ತು ಪ್ರತಿ ವರ್ಷ ಜೂನ್‌ನಿಂದ ಸೆಪ್ಟೆಂಬರ್ ವರೆಗೆ ನಾಲ್ಕು ತಿಂಗಳ ಕಾಲ ಮಳೆಗಾಲದ ನೀರನ್ನು ಈ ರೀತಿ ಹಿಡಿದಿಟ್ಟುಕೊಂಡರೆ, ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕುಸಿತ ತಡೆಗಟ್ಟಲು ಸಾಧ್ಯವಿದೆ ಎನ್ನುತ್ತಾರೆ ಪ್ರಗತಿಪರ ಕೃಷಿಕ ಕೈಂತಜೆ ರಮೇಶ್ ಭಟ್ ಹೇಳಿದ್ದಾರೆ.