ಮಂಗಳೂರು ಶೈಲಿಯ ಫಿಶ್ ಫ್ರೈ ಮಾಡುವ ವಿಧಾನ

0
3932

ಮಂಗಳೂರು ಶೈಲಿಯಲ್ಲಿ ಮೀನಿನ ಫ್ರೈ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು:

* ಎರಡು ಬಂಗಡೆ ಮೀನು

* 3 ಸಾಧಾರಣ ಗಾತ್ರದ ಈರುಳ್ಳಿ

* 5 ಒಣ ಕೆಂಪು ಮೆಣಸಿನ ಕಾಯಿ

* 1/2 ಚಮಚ ಅರಿಶಿಣ ಪುಡಿ

* ಒಂದೂವರೆ ಚಮಚ ಬೆಳ್ಳುಳ್ಳಿ ಪೇಸ್ಟ್

* ರುಚಿಗೆ ತಕ್ಕ ಉಪ್ಪು

* ಒಂದು ನಿಂಬೆ ಹಣ್ಣಿನ ಗಾತ್ರದ ಹುಣಸೆ ಹಣ್ಣು ಅಥವಾ ವಿನಿಗರ್ ಬಳಸಬಹುದು

* ಎಣ್ಣೆ

ತಯಾರಿಸುವ ವಿಧಾನ:

ಮೀನಿನ ತುಂಡುಗಳನ್ನು ಶುದ್ಧ ಮಾಡಿ ಎರಡು ತುಂಡುಗಳಾಗಿ ಕತ್ತರಿಸಿ, ಚೆನ್ನಾಗಿ ತೊಳೆದು ಸ್ವಲ್ಪ ಉಪ್ಪು ಹಾಕಿಡಬೇಕು. ನಂತರ ಒಣ ಕೆಂಪು ಮೆಣಸಿನ ಕಾಯಿ ಮತ್ತು ಈರುಳ್ಳಿಯನ್ನು ಅರೆದು ಪೇಸ್ಟ್ ರೀತಿ ಮಾಡಬೇಕು. ನಂತರ ಈ ಪೇಸ್ಟ್ ಗೆ ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಪುಡಿ ಮತ್ತು ಹುಣಸೆ ಹಣ್ಣನ್ನು ಹಿಂಡಿ ಅದರ ರಸ ಹಾಕಿ ಅಥವಾ ವಿನಿಗರ್ ಬಳಸಿ , ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಅದರಲ್ಲಿ ಮೀನು ಹಾಕಿ ಮಿಶ್ರ ಮಾಡಿ ಒಂದು ಗಂಟೆ ಕಾಲ ಇಡಬೇಕು. ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಮೀನನ್ನು ಹಾಕಿ ಹುರಿದು ತೆಗೆಯಬಹುದು ಅಥವಾ ತವಾ ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ ಮೀನು ಹಾಕಬೇಕು, ಅದರ ಮೇಲೆ ಸ್ವಲ್ಪ ಎಣ್ಣೆ ಸುರಿಯಬೇಕು. ಮೀನು ಸ್ವಲ್ಪ ಬೆಂದಾಗ ಅದನ್ನು ಮಗುಚಿ ಹಾಕಬೇಕು. ಹೀಗೆ ಮಗುಚಿ ಹಾಕುತ್ತಾ ಮೀನು ಫ್ರೈ ಆದ ನಂತರ ತೆಗೆಯಬೇಕು.

Also read: ಫಿಶ್ ಕಬಾಬ್ ಹೇಗೆ ಮಾಡೋದು ಇಲ್ಲಿ ನೋಡಿ..!