ಕನ್ನಡದ ಖಡಕ್ ಅಧಿಕಾರಿ – ಮಣಿವಣ್ಣನ್. (IAS)

0
2935

ನನಗೆ ಕನ್ನಡ ಬರಲ್ಲ, ಕಲಿಯೋ ಆಸಕ್ತಿ ಇಲ್ಲ. ನನ್ನ ಜೊತೆ ಹಿಂದಿ / ಇಂಗ್ಲಿಷ್ ನಲ್ಲಿ ಮಾತನಾಡಿ. ಈ ರೀತಿಯಾದ ಅಹಂಕಾರದಿಂದ ಮಾತನಾಡುವುದು ಬೆಂಗಳೂರಿನಲ್ಲಿ ಸರ್ವೇ-ಸಾಮಾನ್ಯವಾಗಿಬಿಟ್ಟಿದೆ. ಆದರೆ, ಇಲ್ಲೊಬ್ಬ IAS ಅಧಿಕಾರಿ, ಬೇರೆ ರಾಜ್ಯದಲ್ಲಿ ಹುಟ್ಟಿ-ಬೆಳೆದರೂ ನಮ್ಮ ಭಾಷೆಯನ್ನೂ ಕಲಿತು ತನ್ನ ಅದ್ಬುತವಾದ ಸೇವೆಯಿಂದ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರೇ ನಮ್ಮ ಖಡಕ್ ಅಧಿಕಾರಿ – ಮಣಿವಣ್ಣನ್. (IAS)

ಹೌದು, ಜಿಲ್ಲಾದಿಕಾರಿ, ಚುನಾವಣಾಧಿಕಾರಿ ಮತ್ತು ಇನ್ನೇತರ ಹುದ್ದೆಗಳನ್ನು ಅಲಂಕರಿಸಿ ಯಾವುದೇ ಬೆದರಿಕೆಗಳಿಗೆ ಅಂಜದೆ, ಜನ-ಪರ, ಕನ್ನಡ-ಪರ ಅಧಿಕಾರಿ ಎಂದು ಖ್ಯಾತಿ ಗಳಿಸಿರುವುದು ನಮ್ಮ ಪ್ರೀತಿಯ ಮಣಿವಣ್ಣನ್ ಸಾಹೇಬರು.

ಮಣಿವಣ್ಣನ್ ರವರು – ಮೂಲತಃ ದಕ್ಷಿಣ ತಮಿಳು ನಾಡಿನ ಒಂದು ದಲಿತ ಕುಟುಂಬದಲ್ಲಿ ಜನಿಸಿದವರು. ಅವರ ತಂದೆ ಪೊನ್ನಯ್ಯ ರವರು ಪ್ರಾಥಮಿಕ ವಿಧ್ಯಾಭ್ಯಾಸವನ್ನು ತಮ್ಮ ಹಳ್ಳಿಯಲ್ಲೇ ಓದಿದರು. ಕಾಲೇಜ್ ಶಿಕ್ಷಣಕ್ಕೆ ಕಾರಣಾಂತರದಿಂದ ಅವರಿಗೆ ಅನುಮತಿ ನೀಡಲಿಲ್ಲ. ಇದರಿಂದ ಕೋಪಗೊಂಡ ಶ್ರೀ ಪೊನ್ನಯ್ಯ – ರವರು ತಮ್ಮ ಹಳ್ಳಿಯನ್ನು ಬಿಟ್ಟು ಮಧುರೈ ಸೇರಿದರು. ಅಲ್ಲಿ ಅವರು ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ, ಸಮಾಜದಲ್ಲಿ ಒಳ್ಳೆಯ ಹುದ್ದೆ ಅಲಂಕರಿಸಬೇಕೆಂದು ಅವರ ಕನಸಾಗಿತ್ತು.

ತಮ್ಮ ವೇತನದಲ್ಲಿ 50% ಅಷ್ಟು ಹಣವನ್ನು ಪುಸ್ತಕದ ಖರೀದಿಗೆ ಮೀಸಲಿಟ್ಟಿದ್ದರು ಪೊನ್ನಯ್ಯ ರವರು. ಅದರ ಫಲವಾಗಿ ಇಂದಿಗೆ ಸುಮಾರು 60,000 ದಷ್ಟು ಪುಸ್ತಕ ಗಳು ಅವರ ಮನೆಯಲ್ಲಿದೆ. ಮಣಿವಣ್ಣನ್ ಅವರು ಇದರಿಂದ ಪ್ರಭಾವಿತರಾಗಿ ರಾಸಾಯನಿಕ ಶಾಸ್ತ್ರದಲ್ಲಿ (Chemical Engineering) ತಮ್ಮ ಪದವಿಯನ್ನು ಪ್ರತಿಷ್ಟಿತ ರೀಜನಲ್ ಕಾಲೇಜ್ ಆಫ್ ಇಂಜಿನಿಯರಿಂಗ್[Regional College of Engineering] ನಲ್ಲಿ ಮುಗಿಸಿದರು. ನಂತರದ ದಿನಗಳಲ್ಲಿ SAIL ನಲ್ಲಿ ಕೆಲಸ ಮಾಡಿದರು. SAIL ನಲ್ಲಿ ಕೆಲಸ ಮಾಡುವ ದಿನಗಳಲ್ಲಿ, ಸನ್ಮಾನ್ಯ ಮಣಿವಣ್ಣನ್ ರವರು ಐಎಎಸ್ ಮಾಡಿ ದೇಶಕ್ಕೆ ಮತ್ತು ಜನಕ್ಕೆ ಸೇವೆ ಮಾಡಬೇಕು ಎಂದು ಯೋಚಿಸಿದರು. ನಂತರದ ದಿನಗಳಲ್ಲಿ IAS ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಮ್ಮದೇ ರಾಜ್ಯವಾದ ತಮಿಳು ನಾಡಿನಲ್ಲಿ ಪೋಸ್ಟಿಂಗ್ ಆದರು ಕೂಡ ಅವರು ಕರ್ನಾಟಕವನ್ನು ಆಯ್ದುಕೊಂಡರು. [ತಮ್ಮ ದೈನಂದಿನ ಕಾರ್ಯ-ನಿರ್ವಹಣೆಯಲ್ಲಿ ತಮ್ಮ ಜಾತಿಯ, ತಮ್ಮ ಜನರ, ತಮ್ಮ ಬಂಧು-ಬಳಗದವರು “ಹಸ್ತ ಕ್ಷೇಪ” ಮಾಡಬಹುದೆಂದು ಅವರು ಕರ್ನಾಟಕವನ್ನು ಆಯ್ದುಕೊಂಡರು.]
ಧಾರವಾಡ ಪಾಲಿಕೆ ಆಯುಕ್ತರಗಿದ್ದಾಗ “ಅಕ್ರಮ ಕಟ್ಟಡ ತೆರವು” ಮಾಡುವ ಮೂಲಕ ಸುದ್ದಿ ಮಾಡಿದ ಮಣಿವಣ್ಣನ್ ಮುಂದಿನ ದಿನಗಳಲ್ಲಿ ಅನೇಕ ಜನ ಪರ ಕಾರ್ಯಕ್ರಮ ಮಾಡಿ, ಜನರ ಮತ್ತು ಕೆಲಸ ಮಾಡಿದ ಜಿಲ್ಲೆಗಳಲ್ಲಿ ಹೆಸರು ಮಾಡಿದರು. ಈಗಲೂ ಕೂಡ ಅವರನ್ನು ಬಲ್ಲ ಮಾಧ್ಯಮದ ಸ್ನೇಹಿತರು ಮತ್ತು ಅವರ ಸ್ನೇಹಿತರು ಅವರನ್ನು “Demolition Man” ಎಂದು ಕರೆಯುತ್ತಾರೆ.

ಬೆಸ್ಕಾಂ, [BESCOM] ಚುನಾವಣ ಆಯೋಗ,[Election Commission] ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರ ಮಂಡಳಿ[Karnataka Pollution Control Board], ಹೀಗೆ ಅನೇಕ ಕಡೆ ಕೆಲಸ ಮಾಡಿ ತಮ್ಮ “ಛಾಪನ್ನು” ಮೂಡಿಸಿರುವ ದಿಟ್ಟ, ನೇರ-ನುಡಿಯ, ಆಡಳಿತದಲ್ಲಿ- “ಕನ್ನಡ ಬಳಿಸುವ ” ಅಧಿಕಾರಿ ನಮ್ಮ ಮಣಿವಣ್ಣನ್ ಸಾಹೇಬರು. ತಮ್ಮ ಕಚೇರಿಯಲ್ಲಿ CCTV ಕ್ಯಾಮೆರಾ ಅಳವಿಡಿಸಿ ಮತ್ತು ಅದನ್ನ ಅವರ ಇಲಾಖೆಯ ಅಂತರ್ಜಾಲಕ್ಕೆ (department website) ಸಂಪರ್ಕ ಮಾಡಿ ಪಾರದರ್ಶಕತೆಯನ್ನು ಮೆರೆದ ಕೆಲವೇ ಕೆಲವು ಐಎಎಸ್ ಅಧಿಕಾರಿಗಳಲ್ಲಿ ಮಣಿವಣ್ಣನ್ ಅವರು ಕೂಡ ಒಬ್ಬರು. ಇಷ್ಟೇ ಅಲ್ಲದೆ ತಮ್ಮ ಅಧಿಕೃತ ಚೇಂಬರ್ ನಲ್ಲಿ “ಗಾಜಿನ ಬಾಗಿಲನ್ನು”[Transparent Door] ಹಾಕಿಸಿ, ತಮ್ಮನ್ನು ಯಾರು ಬೇಕಾದರೂ ಸಂಪರ್ಕಿಸಬಹುದು ಎಂಬ ಅದ್ಬುತ “ವರ್ಕ್ ಎಥಿಕ್ಸ್” ಅನ್ನು ಅನುಷ್ಠಾನಗೊಳಿಸಿರುವುದು ಮಣಿವಣ್ಣನ್ ಸಾಹೇಬರ “ಜನ ಪರ” ಕಾಳಜಿಗೆ ಒಂದು ನಿದರ್ಶನ.

1998 ಬ್ಯಾಚ್ ನ IAS ಅಧಿಕಾರಿಯಾಗಿರುವ ಮಣಿವಣ್ಣನ್ ರವರು 2008 ರಲ್ಲಿ ನಡೆದ ರಾಜ್ಯ ಚುನಾವಣೆಯಲ್ಲಿ ಮೈಸೂರಿನಲ್ಲಿ “ರಾಜ್ಯ ಚುನಾವಣ ಅಧಿಕಾರಿಯಾಗಿ” ಮತ್ತು ಜಿಲ್ಲದಿಕಾರಿಯಾಗಿ ಉತ್ತಮವಾಗಿ ಕಾರ್ಯ-ನಿರ್ವಹಿಸಿದರು. ಅಕ್ರಮ-ಹಣ ವನ್ನು ಜಪ್ತಿ ಮಾಡಿ, ಚುನಾವಣ ನೀತಿ ಸಂಹಿತೆಯನ್ನು[Election Code of Conduct] ಉಲ್ಲಂಘಿಸಿದವರ ವಿರುದ್ದ “ಸಿಡಿದೆದ್ದ” ಮಣಿವಣ್ಣನ್ ರವರು ಯಾವುದೇ ರಾಜಕೀಯ ಪಕ್ಷ, ಧುರೀಣರ ಒತ್ತಡಕ್ಕೆ ಮಣಿಯದೆ, ಕೇಸ್ ಜಡಿದರು. 12 ಕಂಟ್ರೋಲ್ ರೂಂ, 130 ಮೊಬೈಲ್ ಪೋಲಿಸ್ ಠಾಣೆಗಳನ್ನೂ ಹಾಕಿ, ಯಶಸ್ವೀ ಯಾಗಿ ತಮ್ಮ ಕರ್ತವ್ಯವನ್ನು ನೆರವೇರಿಸಿದ ಖ್ಯಾತಿ ಮಣಿವಣ್ಣನ್ ರವರಿಗೆ ಸಲ್ಲುತ್ತದೆ.

ತಮ್ಮ ಯಶಸ್ಸಿಗೆ – ತಮ್ಮ ತಂಡದ “ಸಾಂಘಿಕ ಪ್ರಯತ್ನ” [Team work] ಕಾರಣ ಎಂದು ಹೇಳುವ ಮಣಿವಣ್ಣನ್ ರವರದು ಅತ್ಯಂತ – ನೇರ ನುಡಿಯ ಮತ್ತು ಸರಳ ವ್ಯಕ್ತಿತ್ವ.

ಸದಾ ಹಸನ್ಮುಖಿ ಯಾಗಿರುವ ಸನ್ಮಾನ್ಯ ಮಣಿವಣ್ಣನ್ ರವರು ಇನ್ನು ಹೆಚ್ಚು ಪರಿಣಾಮಕಾರಿಯಾದ ಸೇವೆ ಸಲ್ಲಿಸಿ, ರಾಜ್ಯಕ್ಕೆ ಕೀರ್ತಿ ತರಲಿ ಎಂದು – thenewsism.com ತಂಡದದಿಂದ ಬಯಸುತ್ತೇವೆ. ಹಾಗೆಯೇ ಆಡಳಿತದಲ್ಲಿ ಮಾಯವಾಗುತ್ತಿರುವ ಕನ್ನಡ ಭಾಷೆಯ ಬಗ್ಗೆಯ ಸೂಕ್ತ-ಕ್ರಮ ಜರುಗಿಸ ಬೇಕೆನ್ನುವುದು ನಮ್ಮ ಆಶಯ.

ದೇವರು ಅವರಿಗೆ ಆಯಸ್ಸು-ಆರೋಗ್ಯ ನೀಡಿ ಹರಸಲಿ ಎಂದು ಬೇಡುವೆವು