ಮೈಸೂರು ಯುವಕನ ಕಾರ್ಯಕ್ಕೆ ಶ್ಲಾಘಿಸಿದ ಮೋದಿ

0
736

 

ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ 29ನೇ ಕಾರ್ಯಕ್ರಮದಲ್ಲಿ ಕರ್ನಾಟಕದ ಯುವಕನ ಸಾಧನೆಯನ್ನು ಹಾಡಿ ಹೊಗಳಿದ್ದಾರೆ.

ಮೈಸೂರು ಯುವಕ ಸಂತೋಷ್ ಅವರ ಹೆಸರನ್ನು ಮಾತಿನಲ್ಲಿ ಉಲ್ಲೇಖೀಸಿದ ಮೋದಿ ಸಮಾಜಮುಖಿ ಕಾರ್ಯಕ್ಕಾಗಿ ಶ್ಲಾಘನೆ ಮಾಡಿದ್ದಾರೆ. ಸಂತೋಷ್ ಮಾಡಿರುವ ಕಾರ್ಯ ಯುವಕರಿಗೆ ಮಾದರಿಯಾಗಲಿ ಎಂದರು.

ಸಂತೋಷ್ ಡಿಜಿಟಲ್ ವ್ಯವಹಾರದ ಲಕ್ಕಿಡೀಪ್ ನಲ್ಲಿ ಬಂದಿದ್ದ ಹನವನ್ನು ಅಗ್ನಿ ಅನಾಹುತದಿಂದ ಮನೆ ಕಳೆದುಕೊಂಡಿದ್ದ ವೃದ್ಧೆಗೆ ನೀಡಿದ್ದರು. ಈ ವಿಚಾರವನ್ನು ಮೋದಿ ಆ್ಯಪ್ ನಲ್ಲಿ ಬರೆದಿದ್ದರು. ಆ ಯುವಕನ ಕಾರ್ಯಕ್ಕೆ ಶ್ಲಾಘಿಸಿರುವ ಪ್ರಧಾನಿ ಮೋದಿ, ಅವರ ಸಾಧನೆ ಬಗ್ಗೆ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿರುವ ಜತೆಗೆ ದೇಶದ ಯುವಜರಿಗೆ ನಿಮ್ಮ ಕೆಲಸ ಮಾದರಿಯಾಗಿದೆ ಎಂದು ಹೇಳಿದ್ದಾರೆ.

ಏಕಕಾಲಕ್ಕೆ 104 ಉಪಗ್ರಗಳ ಉಡಾವಣೆ ಮಾಡಿದ್ದಕ್ಕಾಗಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದರು. ಜನತೆಗೆ ಹೋಳಿ ಹಬ್ಬದ ಶುಭಾಶಯ ಕೋರಿದರು.