‘ಮನ್ ಕೀ ಬಾತ್: ಬೇನಾಮಿ ಆಸ್ತಿ ಬಲಿಷ್ಠ ಕಾಯ್ದೆ. ಸರಕಾರಿ ಅಧಿಕಾರಿಗಳ ಕರ್ಮಕಾಂಡಕ್ಕೂ ಬ್ರೆಕ್

0
640

ಪ್ರಧಾನಮಂತ್ರಿ ನರೇಂದ್ರ ಮೋದಿ  ಮಾಸಿಕ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಬಾನುವಾರ ಮಾತನಾಡಿದ ಅವರು, 1988ರಲ್ಲೇ ಬೇನಾಮಿ ಕಾಯ್ದೆಯನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೇನಾಮಿ ಆಸ್ತಿ ಹೊಂದಿರುವವರನ್ನು ಮಟ್ಟ ಹಾಕಲು 29 ವರ್ಷಗಳಿಂದ ಧೂಳು ತಿನ್ನುತ್ತಿರುವ ಕಾಯ್ದೆಯೊಂದನ್ನು ಅನುಷ್ಠಾನಕ್ಕೆ ತರುವ ಶಪಥ ಮಾಡಿದ್ದಾರೆ. ಬೇನಾಮಿ ಆಸ್ತಿಗಳನ್ನು ಎದುರಿಸುವ ಬಲಿಷ್ಠ ಕಾಯ್ದೆ ಇದಾಗಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಘೋಷಿಸಿದ್ದಾರೆ.

ಆದರೆ ಅದಕ್ಕೆ ಬೇಕಾದ ನಿಯಮಗಳನ್ನು ರೂಪಿಸಿಲ್ಲ, ಅಧಿಸೂಚನೆಯನ್ನೂ ಹೊರಡಿಸಲಾಗಿಲ್ಲ. ಇಷ್ಟು ವರ್ಷಗಳ ಕಾಲ ಆ ಕಾಯ್ದೆ ನಿರುಪಯುಕ್ತವಾಗಿತ್ತು. ಅದನ್ನು ಹೊರಕ್ಕೆ ತೆಗೆದು, ಬೇನಾಮಿ ಆಸ್ತಿ ವಿರುದ್ಧ ಹರಿತ ಶಾಸನವನ್ನಾಗಿ ಪರಿವರ್ತಿಸಿದ್ದೇವೆ. ಮುಂಬರುವ ದಿನಗಳಲ್ಲಿ ಈ ಕಾಯ್ದೆ ಜಾರಿಗೆ ಬರಲಿದೆ. ದೇಶ ಹಾಗೂ ಜನರ ಒಳಿತಿಗಾಗಿ ಏನೇನು ಮಾಡಬೇಕೋ ಅದಕ್ಕೆಲ್ಲ ಆದ್ಯತೆ ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಹೇಳಿದರು.

ಸರಕಾರಿ ಅಧಿಕಾರಿಗಳ ಕರ್ಮಕಾಂಡಕ್ಕೂ ಬ್ರೆಕ್

ಸರಕಾರಿ ಅಧಿಕಾರಿಗಳ ಕರ್ಮಕಾಂಡಕ್ಕೂ ಬ್ರೆಕ್ ಹಾಕಲು ನಿರ್ಧರಿಸಿರುವ ಪ್ರಧಾನಿ ಮೋದಿ, ಮುಂದಿನ ವರ್ಷದಲ್ಲಿ ಕೆಲ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ. ಅಂತೂ ಇಂತೂ ಮಾಡಿದ ಪಾಪಕ್ಕೆ ಬೆಲೆ ತೆರಬೇಕಾದ ಅನಿವಾರ್ಯತೆ ಭ್ರಷ್ಟರಿಗೆ, ಕಪ್ಪು ಹಣ ಹೊಂದಿದವರಿಗೆ ಎದುರಾಗಿದೆ.

ಭ್ರಷ್ಟರು ಮತ್ತು ಕಪ್ಪು ಹಣ ಹೊಂದಿದವರು ಖಾಸಗಿ ಮತ್ತು ಸರಕಾರಿ ಸ್ವಾಮ್ಯದ ಬ್ಯಾಂಕ್ಗಳ ಲಾಕರ್ಗಳಲ್ಲಿ ಇಟ್ಟಿರುವ ಮಾಹಿತಿ ಕೂಡಾ ಲಭ್ಯವಾಗಿದ್ದು, ಒಂದು ವೇಳೆ ನಿಖರವಾದ ದಾಖಲೆಗಳನ್ನು ನೀಡದಿದ್ದಲ್ಲಿ ಲಾಕರ್ನ್ನು ಮುಟ್ಟುಗೋಲು ಹಾಕಲು ಸರಕಾರ ನಿರ್ಧರಿಸಿದೆ.