ಅನೇಕ JD(s) ಬೆಂಬಲಿಗರೂ ಮತ್ತು ಕಾರ್ಯಕರ್ತರು BJPಗೆ ಮತ ನೀಡಿದ್ದಾರೆ : ಸಮ್ಮಿಶ್ರ ಸರ್ಕಾರದ ಉನ್ನತ ಶಿಕ್ಷಣ ಮಂತ್ರಿ ಜಿ.ಟಿ.ದೇವೇಗೌಡ!! ಇದು ಸಮ್ಮಿಶ್ರ ಸರ್ಕಾರ ಬೀಳುವ ಮುನ್ಸೂಚನೆಯೇ??

0
503

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದರು ಅಬ್ಬರದ ಮಾತುಗಳು ಇನ್ನೂ ನಿಂತಿಲ್ಲ ಅದರಲ್ಲಿ ರಾಜ್ಯದಲ್ಲೇ ಸದ್ದು ಮಾಡಿದ ಮಂಡ್ಯ ಕ್ಷೆತ್ರದ ಪಲಿತಾಂಶ ಮೈತ್ರಿ ಸರ್ಕಾರದ ಬುಡಕ್ಕೆ ಬರುವ ವಿಚಾರವನ್ನೇ ಮೈತ್ರಿ ಸರ್ಕಾರದ ನಾಯಕರೆ ಆಡಿಕೊಳ್ಳುತ್ತಿದ್ದು, ಜೆಡಿಎಸ್‌ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಸಚಿವ ಜಿ.ಟಿ.ದೇವೇಗೌಡ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.


Also read: 300 ಕೋಟಿ ಹಗರಣವನ್ನು ಬೆಳಕಿಗೆ ತಂದಿದ್ದಕ್ಕಾಗಿ ಈ KAS ಆಫೀಸರ್-ಗೆ 27 ಬಾರಿ ಟ್ರಾನ್ಸ್ಫರ್ ಆಗಿದೆ; ಇವರಿಗೆ ನ್ಯಾಯ ಸಿಗಬೇಕಲ್ಲವೇ?

ಹೌದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮೈತ್ರಿ ವಿಚಾರದಲ್ಲಿ ಒಂದು ಕಡೆ ತಪ್ಪಾಗಿಲ್ಲ. ಎರಡು ಕಡೆ ಪಕ್ಷದಿಂದಲೂ ತಪ್ಪಾಗಿದೆ. ಆಯಾ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕಿತ್ತು. ಆದರೆ ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಎಂಬ ತೀರ್ಮಾನವೇ ಬಹಳ ದಿನ ನಡೆಯಿತು. ಹೀಗಾಗಿ ಮೈತ್ರಿ ಮಾಡಿಕೊಳ್ಳವ ತೀರ್ಮಾನದಲ್ಲಿ ಬಹಳ ತಡವಾಯಿತು. ತಡವಾಗಿ ಮೈತ್ರಿ ಮಾಡಿಕೊಂಡ ಕಾರಣ ಪಕ್ಷದ ಕಾರ್ಯಕರ್ತರ ನಡುವಿನ ಜಿದ್ದಾಜಿದ್ದು ಸರಿ ಮಾಡಲು ಯಾರಿಂದಲೂ ಆಗಲಿಲ್ಲ,
ಕುಮಾರಸ್ವಾಮಿ ಮುಖ್ಯಮಂತ್ರಿಯಾದಗಿನಿಂದ ಈ ರೀತಿ ಡೆಡ್‍ಲೈನ್ ಫಿಕ್ಸ್ ಮಾಡುತ್ತಿದ್ದಾರೆ. ಆದರೆ ಸರ್ಕಾರಕ್ಕೆ ಬಹುಮತ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಆತಂಕ ಇಲ್ಲ. ಇನ್ನೂ ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ. ಅದೇನಿದ್ದರೂ ಲೋಕಸಭೆಯಲ್ಲಿ ಪ್ರಧಾನ ಮಂತ್ರಿಯಾಗಲೂ ಮಾತ್ರ ನಡೆಯುತ್ತದೆ. 2 ತಿಂಗಳು ಮುಂಚೆಯೇ ನಾವು ಪ್ರಚಾರ ಮಾಡಿದ್ದರೆ ನಾವು ಹೆಚ್ಚು ಲಾಭ ಪಡೆಯಬಹುದಿತ್ತು ಆದರೆ ಕೊನೇ ಕ್ಷಣದಲ್ಲಿ ಕಾರ್ಯಕರ್ತರ ನಡುವೆ ಹೊಂದಾಣಿಕೆ ಸಾಧ್ಯವಾಗಲಿಲ್ಲ.


Also read: ಆಟೋ ಡ್ರೈವರ್ ಮನೆ ಮೇಲೆ ಐಟಿ ದಾಳಿ; ಆಟೋ ಚಾಲಕ ಸುಬ್ರಮಣಿ ಬಳಿ ಇರುವ ಕೋಟ್ಯಾಂತರ ಆಸ್ತಿ ವಿದೇಶಿ ಮಹಿಳೆ ನೀಡಿರುವ ಉಡುಗೊರೆ ಅಂತೆ..

ಅದರಂತೆ ಮೈಸೂರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಸಮನ್ವಯತೆ ಸಾಧಿಸಲು ಸಾಧ್ಯವಾಗಿಲ್ಲ. ಎರಡೂ ಪಕ್ಷಗಳಲ್ಲಿ ವಿರೋಧಿ ನಾಯಕರ ಮೇಲೆ ತೀವ್ರ ಅಸಮಾಧಾನಗಳಿವೆ. ಹೀಗಾಗಿ ಮೈತ್ರಿ ಪಕ್ಷದ ಅಭ್ಯರ್ಥಿಯ ಪರವಾಗಿ ಅವರು ಇಲ್ಲಿ ಕೆಲಸ ಮಾಡಿಲ್ಲ. ಹೆಚ್ಚಿನವರು ಮೈತ್ರಿ ಅಭ್ಯರ್ಥಿ ಸೋಲಲಿ ಎಂಬ ಕಾರಣಕ್ಕಾಗಿಯೇ ಬಿಜೆಪಿಗೆ ಮತ ಹಾಕಿದ್ದಾರೆ. ಅದರಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯನ್ನು ಇಲ್ಲಿ ನಿಲ್ಲಿಸಿರುವುದರಿಂದ ಪಕ್ಷದ ಪ್ರಾಬಲ್ಯ ಕುಂದುತ್ತದೆ. ಹೀಗಾಗಿ ಕಾಂಗ್ರೆಸ್ ಗೆಲುವು ತಮಗೆ ಅಪಾಯಕಾರಿ ಎಂದು ಜೆಡಿಎಸ್ ಕಾರ್ಯಕರ್ತರು ಮೈತ್ರಿ ಧರ್ಮವನ್ನು ಪಾಲಿಸಿಲ್ಲ ಎಂದು ಜಿ.ಟಿ. ದೇವೇಗೌಡ ಹೇಳಿಕೆ ನೀಡಿದ್ದರು.


Also read: ದಶಕಗಳ ಕಾಲ ಸರಿಸಾಟಿಯಿಲ್ಲದೆ ನಾಟಕರಂಗದಲ್ಲಿ ಮೆರೆದ ಮಹಾನ್ ನಾಟಕಗಾರ, ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ನಮ್ಮನ್ನಗಲಿದ್ದಾರೆ!!

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ದೇವೇಗೌಡ ಅವರ ಹೇಳಿಕೆ ಸುಳ್ಳಾಗಲಿ ಎಂದು ಅವರು ಆಶಿಸಿದ್ದಾರೆ. ಅವರ ಹೇಳಿಕೆಯು ನಿಜವೇ ಅಥವಾ ಸುಳ್ಳೇ ಎಂಬುದನ್ನು ಅವರು ಫಲಿತಾಂಶ ಪ್ರಕಟವಾದ ಬಳಿಕ ಅದರ ಆಧಾರದಲ್ಲಿ ನಿರ್ಧರಿಸಲು ತೀರ್ಮಾನಿಸಲು ಹೇಳಿದ ಅವರು. ಸಚಿವ ಜಿ.ಟಿ.ದೇವೇಗೌಡರ ಹೇಳಿಕೆ ನನ್ನಲ್ಲಿಯೂ ಅಚ್ಚರಿ ಮೂಡಿಸಿದೆ. ದೇವೇಗೌಡರ ಮಾತುಗಳು ಸುಳ್ಳಾಗಲಿ ಎಂದು ಆಶಿಸುತ್ತೇನೆ, ಮೇ 23ರ ಫಲಿತಾಂಶದಲ್ಲಿ ಈ ಹೇಳಿಕೆಯ ಸತ್ಯಾಸತ್ಯತೆ ಗೊತ್ತಾಗಲಿದೆ. ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲ ಇಲ್ಲ. ಕಾದು ನೋಡೋಣ ಎಂದು ಬರೆದು ಕರ್ನಾಟಕ ಕಾಂಗ್ರೆಸ್‍ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.