ಮದುವೆಯಾಗದ ಯುವತಿಯರಿಗೆ ಸಿಹಿಸುದ್ದಿ; ಕೃಷಿಕರನ್ನ ಮದ್ವೆಯಾದ್ರೆ ಲಕ್ಷ ರೂ ಬಂಪರ್ ಆಫರ್..

0
973

ಮಹಿಳೆಯರ ಲಿಂಗಾನುಪಾತ ಹೆಚ್ಚುತ್ತಿದು ಇರುವ ಹುಡುಗಿಯರನ್ನು ಬರಿ ನೌಕರಿ ಮಾಡುವರಿಗೆ ಕೊಟ್ಟರೆ ಕೃಷಿಮಾಡುವವರಿಗೆ ಎಲ್ಲಿಂದ ಹೆಣ್ಣು ಸಿಗುವುದು ಅನ್ನೂ ಭಯ ದೇಶದ ತುಂಬೆಲ್ಲ ಕಾಡುತ್ತಿದೆ. ರೈತರಿಗೆ ಹೆಣ್ಣು ಕೊಟ್ಟು ಮದುವೆ ಮಾಡಿದರೆ ಸುಖವಿಲ್ಲ ಎನ್ನುವ ಹೆಣ್ಣು ಹೆತ್ತವರು ಬರಿ ನೌಕರಿ ಮಾಡುವ ಯುವಕರಿಗೆ, ಪಟ್ಟಣದಲ್ಲಿರುವವರಿಗೆ ಮತ್ತು ಹೆಚ್ಚು ಆಸ್ತಿ ಹೊಂದಿರುವವರನ್ನು ಅಳಿಯನಾಗಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ರೈತ ಯುವಕರಿಗೆ 40 ವರ್ಷ ದಾಟಿದರು ಇನ್ನು ಮದುವೆ ಆಗದೆ ಹಾಗೆ ಉಳಿದಿದ್ದಾರೆ, ಇದನ್ನು ಅರಿತು ರೈತರಿಗೆ ಮದುವೆಯಾದರೆ ನಗದು ರೂಪದಲ್ಲಿ ಉಡುಗರೆ ನೀಡಿ ಹೆಣ್ಣು ಹೆತ್ತವರಿಗೆ ವರೆಸಿಕೊಳ್ಳುತ್ತಿದ್ದಾರೆ.

Also read: ದೇವಾಲಯಗಳಲ್ಲಿ ಮದುವೆ ನಿಷೇಧಿಸಿ ಸರಳ ವಿವಾಹ ಮಾಡಿಕೊಳ್ಳುವವರಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಮುಜರಾಯಿ ಇಲಾಖೆ!!

ಹೌದು ದೇಶದ ತುಂಬೆಲ್ಲ ವದುವಿನ ಕೊರತೆ ಇರುವುದು ಗೊತ್ತೇ ಇದೆ ಅದೇ ಕಾರಣಕ್ಕೆ ಅನ್ಯಜಾತಿಯಾ ವಿವಾಹಗಳು ನಡೆಯುತ್ತಿವೆ. ಈ ಪರಿಸ್ಥಿತಿ ದೇಶದ ತುಬೆಲ್ಲ ಇದ್ದರು ಸದ್ಯ ಹೆಚ್ಚು ಇರುವುದು ಉತ್ತರ ಕನ್ನಡ ಜಿಲೆಗಳಲ್ಲಿ ಹೆಚ್ಚು ನಡೆಯುತ್ತಿದೆ. ಅಲ್ಲಿನ ಹಲವು ಮೇಲ್ಜಾತಿಯ ಜನರು ರಾಜ್ಯದ ಬೇರೆ ಬೇರೆ ಹಳ್ಳಿಗಳಲ್ಲಿ ಕೆಳ ಜಾತಿಯ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ತಾವೇ ಹಣ, ಒಡವೆ ನೀಡಿ ಮದುವೆ ಮಾಡಿಕೊಂಡು ಹೋಗುತ್ತಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ, ಈ ಕೆಲಸದಲ್ಲಿ ಬ್ರೋಕರ್ಸ್-ಗಳು ಹೆಚ್ಚಿನ ಲಾಭ ಪಡೆದರೆ ಅಂತು ಇಂತೂ ಮದುವೆಯಾಯಿತ್ತಲ್ಲ ಅಂತ ಗಂಡಿನ ಮನೆಯವರು ಸಂತಸ ಪಡುತ್ತಾರೆ.

ಅದೇ ಪರಿಸ್ಥಿತಿ ಇರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ದಶಕದಿಂದ ರೈತಾಪಿ ಯುವಕರಿಗೆ ಮದುವೆನೇ ಆಗುತ್ತಿಲ್ಲ. ಹೀಗಾಗಿ ಗ್ರಾಮದ ಸೇವಾ ಸಹಕಾರ ಸಂಘ ರೈತಾಪಿ ಯುವಕನನ್ನು ವರಿಸಿದವರಿಗೆ ಒಂದು ಬಂಪರ್ ಆಫರ್ ನೀಡಲು ಮುಂದಾಗಿದೆ. ಇಲ್ಲಿನ ಕೃಷಿಕರಿಗೆ ಹೆಣ್ಣುಕೊಡಲು ಯಾರು ಮುಂದಾಗುತ್ತಿಲ್ಲ. ಇದರಿಂದಾಗಿ 40 ವರ್ಷ ದಾಟಿದರೂ ಕಂಕಣ ಭಾಗ್ಯವಿಲ್ಲದೆ ಬೇಸತ್ತಿದ್ದಾರೆ. ಯಲ್ಲಾಪುರ ತಾಲೂಕಿನ ಆನಗೋಡು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು, ಬಹುತೇಕ ಯುವಕರು ಇನ್ನೂ ಬ್ರಹ್ಮಚಾರಿಗಳಾಗಿಯೇ ಉಳಿದುಕೊಂಡಿದ್ದಾರೆ. ಈ ಸಮಸ್ಯೆ ನೀಗಿಸಲು ಆನಗೋಡು ಗ್ರಾಮದ ಸೇವಾ ಸಹಕಾರ ಸಂಘ, ಬಂಪರ್ ಆಫರ್ ನೀಡಿದೆ.

@publictv.in

Also read: ದಪ್ಪ ಹೆಂಡತಿಯಿಂದ ಜೀವನದಲ್ಲಿ ಖುಷಿ ಜಾಸ್ತಿ ಅಂತೆ; ಹುಡುಗಿ ದಪ್ಪ ಅಂತ ಮದುವೆಗೆ ಒಪ್ಪದೇ ಇರುವ ಹುಡುಗರು ಈ ಮಾಹಿತಿ ಓದಲೇಬೇಕು..

ತಮ್ಮ ಸಂಘದ ರೈತರ ಮಕ್ಕಳಿಗೆ ಯಾರು ಹೆಣ್ಣು ಕೊಡುತ್ತಾರೋ ಅವರ ಹೆಸರಲ್ಲಿ ಉಚಿತವಾಗಿ ಒಂದು ಲಕ್ಷ ರೂಪಾಯಿ ಠೇವಣಿ ಇಡಲು ನಿರ್ಧರಿಸಿದೆ ಎಂದು ಆನಗೋಡು ಸೇವಾ ಸಹಕಾರ ಸಂಘದ ಅಧ್ಯಕ್ಷ ಹೇಳಿದ್ದಾರೆ. ಇದಕ್ಕೆ ಎಲ್ಲಾ ಸದಸ್ಯರ ಬೆಂಬಲ ಪಡೆದು ರೈತರ ಕಲ್ಯಾಣ ಯೋಜನೆ ಜಾರಿಗೆ ತರಲು ಸಂಬಂಧಪಟ್ಟ ಇಲಾಖೆಯ ಅನುಮೋದನೆಗಾಗಿ ಕಳುಹಿಸಲಾಗಿದೆ. ಇದಕ್ಕೆ ಬಹುತೇಕರ ಒಪ್ಪಿಗೆ ಇದ್ದು, ಏಪ್ರಿಲ್ 1ರಿಂದ ಜಾರಿಗೆ ಬರುವ ಸಾಧ್ಯತೆಗಳಿವೆ. ಈ ವಿಚಾರವಾಗಿ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಹೊಸ ಪ್ರಯತ್ನ ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಸಹಕಾರ ಸಂಘವೊಂದು ಈ ರೀತಿಯ ಕಾರ್ಯ ಮಾಡುತ್ತಿರುವುದು. ಈ ಕಾರ್ಯ ಯಶಸ್ವಿಯಾದಲ್ಲಿ ರಾಜ್ಯದ ತುಂಬೆಲ್ಲ ಮತ್ತು ಹೆಣ್ಣಿನ ಕೊರತೆ ಇರುವ ಕಡೆಗಳಲ್ಲಿ ಸರ್ಕಾರ ಜಾರಿಗೆ ತಂದರೆ ಎಷ್ಟೋ ರೈತ ಯುವಕರಿಗೆ ಮದುವೆ ಭಾಗ್ಯ ಸಿಕ್ಕಂತೆ ಆಗುತ್ತೆ. ಇದರಿಂದ ರೈತರಿಗೆ ಉತ್ಸಾಹ ಮೂಡುತ್ತೆ. ಎನ್ನುವುದು ಮತ್ತು ದೇಶದಲ್ಲೇ ಹೊಸದೊಂದು ಪ್ರಯತ್ನವಾಗುತ್ತೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.