ಮನೆಯಲ್ಲಿಯೇ ಮಸಾಲೆ ವಡೆ ಮಾಡಿ ಸವಿದು ನೋಡಿ..

0
1736

ಬೆಳಗಿನ ಉಪಹಾರದ ಜತೆ ಮಸಾಲ ವಡೆ ಇದ್ದರೆ ಎಷ್ಟೊಂದು ರುಚಿ ಇರುತ್ತೆ ಅಲ್ವ? ಇದರ ರುಚಿ ನೋಡಿದವರಿಗೆ ಗೊತ್ತು. ಈ ಮಸಾಲೆ ವಡೆಯನ್ನು ದಕ್ಷಿಣ ಕನ್ನಡದ ಪ್ರಶಿದ ತಿನಿಸ್ಸು ಎಂದು ಹೆಸರು ಪಡೆದಿದೆ, ಇಂತಹ ವಡೆಗಳು ಪ್ರತಿಯೊಂದು ಹೋಟೆಲ್- ನಲ್ಲಿ ಸಿಗುತ್ತೆ ಅಷ್ಟೊಂದು ರುಚಿಮಯವಾದ ಈ ವಡೆಯನ್ನು ಕೆಲವೊಬ್ಬರು ಇಷ್ಟಪಡುವುದೇ ಇಲ್ಲ ಇದಕ್ಕೆ ಕಾರಣ ಎಲ್ಲ ತಿನುಸ್ಸುಗಳಿಗಿಂತ ಹೆಚ್ಚು ಬೆಲೆಯಿರುತ್ತದೆ ಅಂತ ಬಹಳಷ್ಟು ಜನ ದೂರವೇ ಇರುತ್ತಾರೆ. ಆದರೆ ಕೆಲವೊಬ್ಬರಿಗೆ ಬೆಳಗ್ಗೆ ಸಾಯಿಂಕಾಲ ಮಸಾಲೆ ವಡೆ ತಿಂದರೆ ಮಾತ್ರ ಸಮಾಧಾನವಿರುತ್ತೆ. ಇದನ್ನು ತಯಾರಿಸುವುದರಲ್ಲಿ ಹಲವಾರು ವಿಧಗಳಿವೆ. ಹಾಗಾದ್ರೆ ಈ ಮಸಾಲೆ ವಡೆಯನ್ನು ಮನೆಯಲ್ಲಿಯೇ ತಯಾರಿಸುವ ವಿಧಾನ ಇಲ್ಲಿದೆ ನೋಡಿ.

Also read: ಇಡ್ಲಿ ಜೊತೆ ಉದ್ದಿನ ವಡೆ ಒಳ್ಳೆ ಕಾಂಬಿನೇಷನ್….ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಉದ್ದಿನ ವಡೆ..!

ಬೇಕಾಗುವ ಪದಾರ್ಥಗಳು:

 • ಒಂದು ಕಪ್ ಕಡ್ಲೆಬೇಳೆ.
 • 1/4 ಕಪ್‌ ಉದ್ದಿನ ಬೇಳೆ.
 • ಎರಡು ಚಮಚ ಶುಂಠಿ ಪೇಸ್ಟ್.
 • ಸ್ವಲ್ಪ ಕರಿಬೇವು.
 • ಕೊಬ್ಬರಿ.
 • ಬೇಕಾಗುವಷ್ಟು ಉಪ್ಪು.
 • ಕರಿಯಲು ಎಣ್ಣೆ.
 • ಇದಕ್ಕೆ ಈರುಳ್ಳಿ ಬೇಕಿದ್ದರೂ ಹಾಕಬಹುದು.

ಮಾಡೋದು ವಿಧಾನ:

Also read: ಉತ್ತರ ಭಾರತದ ಜನಪ್ರಿಯ ತಿಂಡಿಗಳಲ್ಲಿ ಒಂದಾದ ದಹಿ ವಡೆ ಮಾಡುವ ವಿಧಾನ..!!

 1. ಕಡ್ಲೆಬೇಳೆ, ಉದ್ದಿನ ಬೇಳೆಯನ್ನು 1 ಗಂಟೆ ನೆನೆಹಾಕಿ.
 2. ಇದನ್ನ ಮಿಕ್ಸಿಯಲ್ಲಿ ಒಂದೆರಡು ಸುತ್ತು ರುಬ್ಬಿ (ನಯವಾಗಬಾರದು)
 3. ಇದಕ್ಕೆ ಸಣ್ಣಗೆ ಹೆಚ್ಚಿದ ಶುಂಠಿ, ಕರಿಬೇವು, ಬೇಕಿದ್ದರೆ ಕೊಬ್ಬರಿ ಚೂರು, ಉಪ್ಪು ಹಾಕಿ ಕಲಸಿ.
 4. ಬಾಣಲೆ ಇಟ್ಟು ಬಿಸಿಯಾಗಲು ಬಿಡಿ.
 5. ಇ ಕಲಸಿಟ್ಟ ಹಿಟ್ಟನ್ನು ಸಣ್ಣ ಉಂಡೆ ಮಾಡಿ, ಕೈಯಲ್ಲಿ ವಡೆಯ ಶೇಪ್‌ಗೆ ತಟ್ಟಿ.
 6. ಬಿಸಿಯಾದ ಎಣ್ಣೆಗೆ ಬಿಡಿ.
 7. ಕೆಂಪಗಾಗುವಾಗ ತೆಗೆದು ಟಿಶ್ಯೂ ಅಥವಾ ಪೇಪರ್‌ ಮೇಲೆ ಹಾಕಿ.