ಮಸಾಲೆ ಇಡ್ಲಿ ಹೇಗೆ ಮಾಡೋದು ಅಂತ ಗೊತ್ತಾ ಇಲ್ಲಿ ನೋಡಿ..!

0
6138

ಇಡ್ಲಿಗಳಲ್ಲಿ ಹಲವು ಈ ರೀತಿಯ ಇಡ್ಲಿಗಳು ಮಾಡಬವುದು ಅದರಲ್ಲಿ ಈ ಮಸಾಲೆ ಇಡ್ಲಿ ಸಹ ಒಂದು ಹಾಗಾದರೆ ಹೇಗೆ ಮಾಡೋದು ಅಂತ ಹೇಳ್ತಿವಿ ನೋಡಿ.

Related image

ಮಸಾಲೆ ಇಡ್ಲಿಗೆ ಬೇಕಾಗುವ ಪದಾರ್ಥಗಳು.

ಇಡ್ಲಿ ಹಿಟ್ಟು
ಸಾಸಿವೆ
ಇಂಗು
ಈರುಳ್ಳಿ
ಜೀರಿಗೆ
ಎಣ್ಣೆ
ಉಪ್ಪು
ಹಸಿಮೆಣಸಿನ ಕಾಯಿ
ಕೊತ್ತಂಬರಿ ಸೊಪ್ಪು

Related image

ಇನ್ನು ಮಸಾಲೆ ಇಡ್ಲಿ ಮಾಡುವ ವಿಧಾನ.

Image result for masala idli

ಮೊದಲು ಪ್ಯಾನ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಬೇಕು. ನಂತರ ಸಾಸಿವೆ, ಜೀರಿಗೆ, ಇಂಗು, ಕರಿಬೇವಿನ ಸೊಪ್ಪು ಹಾಕಿ ಹುರಿದುಕೊಳ್ಳಬೇಕು. ನಂತರ ಹಸಿಮೆಣಸಿನ ಕಾಯಿ ಮತ್ತು ಈರುಳ್ಳಿಯನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೂ ಹುರಿದುಕೊಳ್ಳಬೇಕು.
ಹಿಟ್ಟು ತೆಗೆದುಕೊಂಡು ಅದಕ್ಕೆ ಈ ಒಗ್ಗರಣೆ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಇಡ್ಲಿ ತಟ್ಟೆಗಳನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಸವರಿ ಹಿಟ್ಟನ್ನು ಹಾಕಿ ಹಬೆಯಲ್ಲಿ ಬೇಯಿಸಬೇಕು. ನಂತರ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ, ರುಚಿಕರವಾದ ಮಸಾಲೆ ಇಡ್ಲಿ ಸವಿಯಲು ಸಿದ್ದವಾಗಿರುತ್ತದೆ.