ಮಶ್ರೂಮ್ ಮಸಾಲಾ ತಿನ್ನಲು ಬಲುಸೊಗಸು, ಹೇಗೆ ಮಾಡೋದು ಅಂತೀರಾ ಇಲ್ಲಿದೆ ನೋಡಿ..!

0
2718

ಮಳೆಗಾಲದಲ್ಲಿ ಹಳ್ಳಿ ಕಡೆ ಒಂದು ಗುಡುಗು ಬಂದ್ರೆ ಸಾಕು, ಮನೆ ಮಂದಿ ತೋಟ-ಗುಡ್ಡಗಳಲ್ಲಿ ಅಣಬೆ ಹುಡುಕಲು ಹೊರಡುತ್ತಾರೆ. ಆದ್ರೆ ಸಿಟಿಯಲ್ಲಿ ಯಾವಾಗ ಬೇಕಾದ್ರೂ ಮಶ್ರೂಮ್ ಖರೀದಿಸಬಹುದು. ಮಶ್ರೂಮ್ ಮಸಾಲಾ ಮಾಡೋ ಸುಲಭ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

ಅಣಬೆ/ಮಶ್ರೂಮ್ – 250 ಗ್ರಾಂ
ಆಲೂಗಡ್ಡೆ – 1
ಈರುಳ್ಳಿ – 1
ಟೊಮೆಟೋ – 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಎಣ್ಣೆ – ಸ್ವಲ್ಪ
ಉಪ್ಪು – ಸ್ವಲ್ಪ
ಅರಶಿನ ಪುಡಿ – 1 ಚಮಚ
ಖಾರದ ಪುಡಿ – 1 ಚಮಚ
ಗರಂ ಮಸಾಲ – 1/2 ಚಮಚ
ಧನಿಯಾ ಪುಡಿ – 1 ಚಮಚ
ಮೊಸರು – 1 ಚಮಚ
ಕಸೂರಿ ಮೇಥಿ – 1 ಚಮಚ
ನೀರು – 1 ಕಪ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಪಲಾವ್ ಎಲೆ – 3
ಏಲಕ್ಕಿ – 3
ದಾಲ್ಚಿನಿ – 3 ತುಂಡು
ಲವಂಗ – 3

ಮಾಡುವ ವಿಧಾನ:
ಮೊದಲು ಅಣಬೆ ಮತ್ತು ಆಲೂಗಡ್ಡೆಯನ್ನು ನೀರಿನಲ್ಲಿ ತೊಳೆದು ಕಟ್ ಮಾಡಿಟ್ಟುಕೊಳ್ಳಬೇಕು.

ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಕಾದ ಬಳಿಕ ತುಂಡರಿಸಿದ ಮಶ್ರೂಮ್ ಹಾಕಿ ಅದರ ಮೇಲೆ ಸ್ವಲ್ಪ ಉಪ್ಪು ಹಾಕಿ ಸುಮಾರು 10 ನಿಮಿಷ ಚೆನ್ನಾಗಿ ಹುರಿಯಿರಿ.

ಹಾಗೆಯೇ ಇನ್ನೊಂದು ಬಾಣಲೆಯಲ್ಲಿ ಕಟ್ ಮಾಡಿದ ಆಲೂಗಡ್ಡೆಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ.

ನಂತರ ಹುರಿದ ಮಶ್ರೂಮ್ ಮತ್ತು ಆಲೂಗಡ್ಡೆಯನ್ನು ಬಾಣಲೆಯಿಂದ ತೆಗೆದು ಒಂದು ಪ್ಲೇಟ್‍ನಲ್ಲಿ ಬೇರೆ ಬೇರೆಯಾಗಿ ಹಾಕಿಡಿ.

ನಂತ್ರ ಬಾಣಲೆಗೆ 1 ಚಮಚದಷ್ಟು ಎಣ್ಣೆ ಹಾಕಿ ಮತ್ತೆ ಒಲೆಯ ಮೇಲಿಟ್ಟು, ಎಣ್ಣೆ ಬಿಸಿಯಾದಾಗ 2 ಪಲಾವ್ ಎಲೆ, 1 ಸಣ್ಣ ದಾಲ್ಚಿನಿ ತುಂಡು, 3 ಏಲಕ್ಕಿ, 3 ಲವಂಗ ಹಾಗೂ ಸಣ್ಣಗೆ ಕಟ್ ಮಾಡಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.

ಈರುಳ್ಳಿ ಕಂದು ಬಣ್ಣಕ್ಕೆ ಬಂದ ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ ಕಟ್ ಮಾಡಿದ ಟೊಮೆಟೋ ಹಾಕಿ ಮೃದುವಾಗುವವರೆಗೆ ಫ್ರೈ ಮಾಡಿ ಬಳಿಕ ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಧನಿಯಾ ಪುಡಿ, ಖಾರದ ಪುಡಿ, ಅರಶಿನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ ಈ ಮಿಶ್ರಣಕ್ಕೆ 1 ಚಮಚ ಮೊಸರು ಹಾಕಿ ಮತ್ತೆ ಮಿಕ್ಸ್ ಮಾಡಿ.

ಬಳಿಕ ಹುರಿದಿಟ್ಟ ಆಲೂಗಡ್ಡೆ ಹಾಗೂ ಮಶ್ರೂಮ್ ಹಾಕಿ ಮತ್ತೆ ಫ್ರೈ ಮಾಡಿ.

ಇವೆಲ್ಲವೂ ಚೆನ್ನಾಗಿ ಮಿಕ್ಸ್ ಆದ ಬಳಿಕ ಒಂದು ಲೋಟ ನೀರು ಬೆರೆಸಿ 10 ನಿಮಿಷ ಕುದಿಯಲು ಬಿಡಿ.

ಹೀಗೆ ಕುದಿಯುತ್ತಿರುವ ವೇಳೆ ಕಸೂರಿ ಮೇಥಿ ಹಾಗೂ ಗರಂ ಮಸಾಲಾ ಹಾಕಿ ಮಿಕ್ಸ್ ಮಾಡಿ.

ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿದ ಬಳಿಕ ಒಲೆಯಿಂದ ಕೆಳಗಿಳಿಸಿ ಸೇವಿಸಲು ಸಿದ್ಧವಾಗಿರಿ.