ನಾನು ಈಗ ಸಂಪೂರ್ಣ ದೋಷಮುಕ್ತ, ಕ್ರಿಕೆಟ್ ಆಡಲಿಕ್ಕೆ ಎಲ್ಲಿ ಕರೆದರೂ ನಾನು ಹೋಗಲಿಕ್ಕೆ ತಯಾರು: ಕ್ರಿಕೆಟಿಗ ಶ್ರೀಶಾಂತ್!!

0
162

ಫ್ರೆಂಡ್ಲಿ ಮ್ಯಾಚ್ʼನಲ್ಲೂ ನಾನು ಮೋಸ ಮಾಡಿಲ್ಲ. ಸೋಲನ್ನೆಂದೂ ನಾನು ಇಷ್ಟಪಟ್ಟಿಲ್ಲ. ಪ್ರತಿ ಎಸೆತದಲ್ಲಿ ರನ್ ಹೋಗಲಿ ಎಂದು ಹಾಕಿಲ್ಲ, ಹೀಗಿರೂ ನನ್ನ ಮೇಲೆ ದೊಡ್ಡ ಆರೋಪವೊಂದು ಹೊರಿಸಲಾಗಿತ್ತು..ಆದರೆ ಅವೆಲ್ಲವುಗಳಿಂದ ನಾನು ಗೆದ್ದು ಬಂದಿದ್ದೇನೆ ನನ್ನಿಷ್ಟದ ಕ್ರಿಕೇಟ್ ಆಟವನ್ನು ಮತ್ತೆ ಆಡಲಿದ್ದೇನೆ. ಇದು ಟೀಂ ಇಂಡಿಯಾದ ಮಾಜಿ ವೇಗಿ ಕೇರಳಾ ಎಕ್ಸಪ್ರೆಸ್ ಶ್ರೀಶಾಂತ್ ಅವರ ಮನದಾಳದ ಮಾತು.

ಹೌದು ಕ್ರಿಕೆಟ್ ಅನ್ನೇ ಜೀವನವನ್ನಾಗಿಸಿಕೊಂಡಿದ್ದ ಶ್ರೀಶಾಂತ್ ಗೆ ಈಗ ಹೊಸ ಬದುಕಿನ ಆರಂಭ. ತಮ್ಮ ಮೇಲಿದ್ದ ಏಳು ವರ್ಷದ ನಿಷೇಧ ಅವಧಿಯನ್ನು ಸೆಪ್ಟಂಬರ್ 13ಕ್ಕೆ ಅವರು ಮುಕ್ತಾಯಗೊಳಿಸಿಕೊಂಡಿದ್ದಾರೆ. 2013ರ ಐಪಿಎಲ್ ಟೂರ್ನಿಯಲ್ಲಿನ ಸ್ಫಾಟ್ ಫಿಕ್ಸಿಂಗ್ ಆರೋಪದಡಿ ಶ್ರೀಶಾಂತ್ ಗೆ ಬಿಸಿಸಿಐ ನಿಷೇಧ ಶಿಕ್ಷೆ ವಿಧಿಸಿತ್ತು. ಶಿಕ್ಷೆ ಮುಗಿಸಿದ ಸಂಭ್ರಮದಲ್ಲಿ ಶ್ರೀಶಾಂತ್ ತಮ್ಮ ಮಕ್ಕಳೊಂದಿಗೆ ಕ್ರಿಕೆಟ್ ಫೀಲ್ಟ್ ಮತ್ತು ಬೌಲ್ ಟಿಸೈನ್ ನ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಮರಳಿ ಕ್ರಿಕೇಟ್ ಬದುಕಿನತ್ತ ಹೊರಳಲು ಉತ್ಸುಕರಾಗುತ್ತಿರುವ ಶ್ರೀಶಾಂತ್ ಟ್ವೀಟ್ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಇಂದಿನಿಂದ ನಾನು ಸ್ವತಂತ್ರನಾಗಿದ್ದೇನೆ. ನನಗೆ ಸಿಕ್ಕ ಅತೀ ದೊಡ್ಡ ರಿಲೀಫ್ ಇದು. ಇತರರಿಗೆ ಎಷ್ಟು ಅರ್ಥವಾಗುತ್ತೋ ಗೊತ್ತಿಲ್ಲ, ಆದರೆ ನನಗೆ ಸಿಕ್ಕ ಅತಿ ದೊಡ್ಡ ಗೆಲುವಿದು ಎಂದು ಶ್ರೀಶಾಂತ್ ಹೇಳಿಕೊಂಡಿದ್ದಾರೆ.

ಶ್ರೀಶಾಂತ್ ಮೇಲಿದ್ದ ಆರೋಪ:

2013ರ ಐಪಿಎಲ್ ವೇಳೆ ಶ್ರೀಶಾಂತ್ ಸೇರಿದಂತೆ ಇರತ ಮೂವರು ಕ್ರಿಕೆಟಿಗರ ಮೇಲೆ ಮೇಲೆ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಶ್ರೀಶಾಂತ್ ಅವರನ್ನೂ ಒಳಗೊಂಡಂತೆ ಆರೋಪಿತ ಕ್ರಿಕೆಟಿಗರ ಮೇಲೆ ಅಜೀವ ನಿಷೇದ ಶಿಕ್ಷೆ ವಿಧಿಸಿತು. ಇದನ್ನು ಪ್ರಶ್ನಿಸಿ ಶ್ರೀಶಾಂತ್ ಕೋರ್ಟ್ ಮೆಟ್ಟಿಲೇರಿದ್ರು. ಇದಾದ ಬಳಿಕ ನಡೆದ ತನಿಖೆ,ವಿಚಾರಣೆ ನಂತರ ಕೋರ್ಟ್ ಶ್ರೀಶಾಂತ್ಗೆ ಕ್ಲೀನ್ ಚಿಟ್ ನೀಡಿತ್ತು. ಇಷ್ಟದರೂ ಬಿಸಿಸಿಐ ಮಾತ್ರ ಶ್ರೀ ಮೇಲಿನ ನಿಷೇಧ ವಾಪಸ್ ಪಡೆಯಲಿಲ್ಲ.

ಹೀಗಾಗಿ ಮರಳಿ ಶ್ರೀಶಾಂತ್ ಭಾರತೀಯ ಕ್ರಿಕೆಟ್ ಸಂಸ್ಥೆ ವಿರುದ್ದ ಕಾನೂನು ಹೋರಾಟ ನಡೆಸಿದ್ದರು.ಈ ವೇಳೆ ತನ್ನ ನಿರ್ಧಾರವನ್ನು ಕೊಂಚ ಸಡಿಲಿಸಿದ ಬಿಸಿಸಿಐ ಅಜೀವ ನಿಷೇಧ ಶಿಕ್ಷೆಯನ್ನು ಏಳು ವರ್ಷಕ್ಕಿಳಿಸಿತು. ಹೀಗೆ ಏಳು ವರ್ಷದ ವನವಾಸವನ್ನು ಈ ತಿಂಗಳ 13ಕ್ಕೆ ಕೊನೆಗೊಳಿಸಿಕೊಂಡ ಶ್ರೀಶಾಂತ್ ಈಗ ಮತ್ತೆ ಕ್ರಿಕೆಟ್ ಆಡಲು ಸಿದ್ದರಾಗ್ತಿದ್ದಾರೆ.

ನಿಷೇಧದ ವೇಳೆ ಸಿನೆಮಾ, ನಟನೆ, ಹಾಗೂ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದ ಶ್ರೀಶಾಂತ್ ತಮ್ಮ ಲೈಫ್ ಅನ್ನ ಬ್ಯುಸಿಯಾಗಿಟ್ಟುಕೊಂಡು ಜೀವನೋತ್ಸಾಹ ಕಾಪಾಡಿಕೊಂಡಿದ್ದರೆನ್ನುವುದು ಗಮನಾರ್ಹ. ಉತ್ತುಂಗದ ಶಿಖರದಿಂದ ಏಕಾಏಕಿ ಬಿದ್ದಿ ವ್ಯಕ್ತಿಗಳು ಬದುಕಿನಾಸೆ ಕಳೆದುಕೊಳ್ಳುವ ಸಮಯದಲ್ಲಿ ಅದೇ ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿಸಿಕೊಂಡಿದ್ದು ನಿಜಕ್ಕೂ ಆದರ್ಶನೀಯ.

ಬದಲಾದ ಕಾಲಘಟ್ಟದಲ್ಲಿ ವಿದಾಯದ ಯೋಚನೆ ಮಾಡಿದ್ದ ಶ್ರೀಶಾಂತ್ ನಿಷೇಧ ಅವಧಿ ಮುಕ್ತಾಯವಾಗುತ್ತಿದ್ದಂತೆ ಮರಳಿ ಅಂಗಳಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಅಂಗಳಕ್ಕಿಳಿಯಲು ಸಿದ್ದರಾಗಿರುವ ಶ್ರೀಶಾಂತ್ ಗೆ ಅವಕಾಶ ಹೇಗೆ ಸಿಗುತ್ತದೆನ್ನುವುದೇ ಈಗ ಎಲ್ಲರ ಮುಂದಿರುವ ಪ್ರಶ್ನೆ.