ಮಹಿಳೆಯರಿಗೆ ಪ್ರಸೂತಿ ಸಮಯದಲ್ಲಿ ಕಚೇರಿಗಳಲ್ಲಿ ರಜೆ ನೀಡುವುದು ಸಾಮಾನ್ಯ. ಮಗು ಜನಿಸುವ ಪೂರ್ವ ಹಾಗೂ ನಂತರದಲ್ಲಿ ರಜೆ ತೆಗೆದುಕೊಳ್ಳಬಹುದು. ಭಾರತದಲ್ಲಿ ಇದಕ್ಕಾಗಿ ಕಾನೂನು ಇದೆ. ಮೆಟನರಿ ಬೆನಿಫಿಟ್ ಆಕ್ಟ್ ೧೯೬೧. ಈ ಕಾಯ್ದೆಯ ಅನುಸಾರ ಮಗು ಜನಿಸು ಹಾಗೂ ಮಗು ಜನಿಸಿದ ಬಳಿಕ ಗರ್ಭಿಣಿಗೆ ರಜೆ ಪಡೆಯುವ ಹಕ್ಕು ಇರುತ್ತದೆ.
ಪ್ರಸೂತಿ ಕಾಯ್ದೆ ಇಲ್ಲೂ ಜಾರಿ
· ಎಲ್ಲ ಕಾರ್ಖಾನೆಗಳಲ್ಲಿ
· ಎಲ್ಲ ಅಂಗಡಿಗಳಲ್ಲಿ. ೧೦ಕ್ಕಿಂತ ಹೆಚ್ಚು ಕೆಲಸಗಾರರು ಹೊಂದಿರುವ ಕಚೇರಿಯಲ್ಲಿ ವನಿತೆಯರು ಇದರ ಲಾಭ ಪಡೆಯಬಹುದು.
· ಗರ್ಭಿಣಿ ಮಹಿಳೆ ತನ್ನ ಅಧಿಕಾರಿಗೆ ತಿಳಿಸಿ ಒಂದು ತಿಂಗಳು ಸಾಮನ್ಯ ಕೆಲಸ ಮಾಡಲು ಅನುವು ಕೋರಬಹುದು. ಹೆರಿಗೆ ದಿನಾಂಕವನ್ನು ೧೦ ವಾರಗಳ ಮುಂಚಿತವಾಗಿ ಮಹಿಳೆಯರು ತಿಳಿಸಬೇಕು. ಅಲ್ಲದೆ ವೈದ್ಯರಿಂದ ಗರ್ಭಿಣಿ ಎಂಬ ಪತ್ರವನ್ನು ಧೃಡಿಕರಿಸಿ ಸಂಸ್ಥೆಗೆ ನೀಡಬೇಕು.
· ಗರ್ಭಿಣಿ ಮಹಿಳೆಯರು ಹೆರಿಗೆ ದಿನಾಂಕಕ್ಕೂ ೭ ವಾರಗಳ ಮುನ್ನ ಸಂಸ್ಥೆಗೆ ಹೆರಿಗೆ ರಜೆ ಕೋರಿ ಅರ್ಜಿಯನ್ನು ಸಲ್ಲಿಸಬೇಕು.
ಪ್ರಸೂತಿ ರಜೆಯ ಲಾಭಗಳು
ಮಹಿಳೆಯರಿಗೆ ಈ ವೇಳ ೨೬ ವಾರಗಳ ರಜೆ ತೆಗೆದುಕೊಳ್ಳಬಹುದು.
ವೇತನ ಸಹಿತ ರಜೆ
- ಒಂದು ವೇಳೆ ಸಂಸ್ಥೆ ಮಹಿಳೆಯರಿಗೆ ಉಚಿತ ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸದೇ ಇದ್ದಲ್ಲಿ, ವೈದ್ಯಕೀಯ ಬೋನಸ್ ರೂಪದಲ್ಲಿ ನೀಡುವ ೧೦೦೦ ಬದಲಿಗೆ ೨೦೦೦೦ ರೂ. ನೀಡಬೇಕು.
- ಗರ್ಭಿಣಿ ಮಹಿಳೆಯರು ಬಹಿರಂಗ ಪಡೆಸದ ಅನಾರೋಗ್ಯ ಸಮಸ್ಯೆ, ಸೂಚಿತ ದಿನಾಂಕಕ್ಕೂ ಮುನ್ನ ಮಗುವಿನ ಜನ ಹಾಗೂ ಇತರೆ ಸಮಸ್ಯೆಗಳಿದ್ದರೆ ಅಗತ್ಯ ದಾಖಲೆಗಳನ್ನು ಒದಗಿಸಿ, ೧ ತಿಂಗಳು ವೇತನ ಸಹಿತ ರಜೆ ಪಡೆಯಬಹುದು.
- ಹೆರಿಗೆ ದಿನಾಂಕ್ಕೆ ಹಿಂದಿನ ಒಂದು ವರ್ಷ ಗರ್ಭಿಣಿ ಒಟ್ಟು ೮೦ ದಿನ ಕಚೇರಿಯಲ್ಲಿ ಕೆಲಸವನ್ನು ಮಾಡಿದ್ದರೂ, ಕಾನೂನಾತ್ಮಕ ಸೌಲಭ್ಯಗಳನ್ನು ಪಡೆಯಬಹುದು.
ಹೆರಿಗೆಗೆ ಮುನ್ನ ೬ ವಾರಗಗಳಿಗಿಂತ ಹೆಚ್ಚಿನ ರಜೆ ಪಡೆಯುವಂತಿಲ್ಲ. - ಗರ್ಭಪಾತವಾದರೆ, ವೈದ್ಯಕೀಯ ಗರ್ಭಪಾತಕ್ಕೆ ಒಳಗಾದಲ್ಲಿ ಅವರು ಆರು ವಾರಗಳ ರಜೆಯನ್ನು ಪಡೆಯಲು ಅರ್ಹರಾಗುತ್ತಾರೆ.
- ಇನ್ನು ಆಪರೇಷನ್ ಇದ್ದಲ್ಲಿ ಎರಡು ವಾರಗಳ ರಜೆ ಪಡೆಯಬಹುದು.
- ಈ ಅವಧಿಯಲ್ಲಿ ಗರ್ಭಿಣಿ ಎರಡು ಬಾರಿ ತಪಾಸಣಾ ರಜೆ ತೆಗೆದುಕೊಳ್ಳಬಹುದು.
- ಹೆರಿಗೆ ಸಂದರ್ಭದಲ್ಲಿ ಮುಂಗಡ ಹಣದ ಅವಶ್ಯಕತೆ ಇದ್ದಲ್ಲಿ ಸಂಸ್ಥೆಗೆ ದಾಖಲೆ ಒದಗಿಸಿ ಪಡೆಯಬಹುದು, ಇದನ್ನು ನೀಡಲು ಸಂಸ್ಥೆಗೆ ೪೮ ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ.
- ಗರ್ಭಿಣಿ ಸಾವು ಸಂಬಂಧಿಸಿದರೆ, ಆಕೆ ಮರಣ ಹೊಂದಿದ ದಿನಾಂಕದವರೆಗಿನ ಪ್ರಸೂತಿ ಸೌಲಭ್ಯ, ಆಕೆಗೆ ಹಕ್ಕುಳ್ಳ ಹಣವನ್ನು ಅವಳು ಸೂಚಿಸಿದ ವ್ಯಕ್ತಿಗೆ ನೀಡಲು ಸಂಸ್ಥೆ ಅಥವಾ ನಿಯೋಜಕ ಬದ್ಧ.
ಕೃಪೆ: the logical indian