ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಇದು ಮಥುರೆಯ ರೈಲ್ವೆ ನಿಲ್ದಾಣ, ಯಾವ ಏರ್ಪೋರ್ಟ್-ಗೇನೂ ಕಮ್ಮಿಯಿಲ್ಲ!! ಇದೇ ಅಲ್ಲವಾ “ಅಚ್ಛೇ ದಿನ್” ಅಂದ್ರೆ..

0
564

ಭಾರತದಲ್ಲಿ ರೈಲ್ವೆ ನಿಲ್ದಾಣಗಳ ಸ್ವಚತೆ ಮತ್ತು ವ್ಯವಸ್ಥೆಗಳನ್ನು ಕುರಿತು ಹಲವು ಅಭಿವೃದ್ಧಿ ನಡೆಯುತ್ತಿವೆ ಎನ್ನುವುದು ಬರಿ ಗಾಳಿ ಮಾತು ಎಂದು ಹಲವರು ಟೀಕೆ ಮಾಡುತ್ತಿದರು ಇದಕ್ಕೆ ಉತ್ತರವಾಗಿ ಪಿಯುಶ್ ಗೋಯಲ್ ನೇತೃತ್ವದ ರೈಲ್ವೆ ಸಚಿವಾಲಯ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿ ಯೋಜನೆಯ ಒಂದು ಭಾಗವಾಗಿ ಮಥುರಾ ರೈಲ್ವೆ ನಿಲ್ದಾಣವನ್ನು ಯಶಸ್ವಿಯಾಗಿ ನವೀಕರಿಸಿದೆ, ಇದು ಭಾರತೀಯ ರೈಲ್ವೇಯಿಂದ ಪ್ರಯಾಣಿಕರಿಗೆ ನೀಡಿದ ಕೊಡುಗೆ ಎಂದು ಹೇಳಬಹುದು. ಇದರ ಹೊಸ ವಿನ್ಯಾಸವು ಯಾವುದೇ ಏರ್ಪೋರ್ಟ್ ಅಥವಾ ವಿದೇಶಿ ರೈಲು ನಿಲ್ದಾಣಗಳಿಗೆ ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ನವೀಕರಣವಾಗಿದೆ.

@financialexpress.com

ಹೌದು ಮಥುರಾ ಜಂಕ್ಷನ್ ರೈಲು ನಿಲ್ದಾಣವು ಸಂಪೂರ್ಣವಾಗಿ ಹೊಸದಾಗಿ ನಿರ್ಮಾಣವಾಗಿದೆ. ಇದನ್ನು ನೋಡಿದರೆ ಭಾರತೀಯ ರೈಲ್ವೆಯ ನಿಲ್ದಾಣವೆಂದು ನಂಬಲು ಕಷ್ಟವಾಗಬಹುದು ಅಷ್ಟೊಂದು ವಿಶೇಷತೆಯನ್ನು ಹೊಂದಿದ್ದು ವಿಶ್ವ ಮಟ್ಟದ ವಿವಿಧ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ ಎಂದು ಹೇಳಲು ಹರ್ಷವಾಗುತ್ತಿದೆ. ಏಕೆಂದರೆ ಮಥುರಾ ಜಂಕ್ಷನ್ ರೈಲು ನಿಲ್ದಾಣದ ಪುನರಾಭಿವೃದ್ಧಿ ಅಡಿಯಲ್ಲಿ, ಏರ್ಪೋರ್ಟ್ ಮಾದರಿಯಂತೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನವಿಕರಿಸಲಾಗಿದೆ. ಮೊದಲ ವರ್ಗ ರೈಲ್ವೆಯ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವೇಟಿಂಗ್ ರೂಮ್ ಮತ್ತು ಹೊಸ ಬೆಂಚುಗಳನ್ನು ಒದಗಿಸುವ ಮೂಲಕ ಸಂಪೂರ್ಣವಾಗಿ ಪರಿಷ್ಕರಿಸಲ್ಪಟ್ಟಿದೆ.

@financialexpress.com

ಅಲ್ಲದೆ, ಬುಕಿಂಗ್ ಹಾಲ್, ರೈಲ್ವೆ ನಿಲ್ದಾಣದ ವಿಐಪಿ ಕೋಣೆಗಳಿಗೆ ಸಂಪೂರ್ಣ ಬದಲಾವಣೆ ನೀಡಲಾಗಿದೆ. ಇದಲ್ಲದೆ, Circulation ಪ್ರದೇಶವನ್ನು ಪುನಃ ಅಭಿವೃದ್ಧಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ 2019 ರ ಫೆಬ್ರುವರಿ ಅಂತ್ಯದ ವೇಳೆಗೆ ಅದೇರೀತಿ 68 ಕೇಂದ್ರಗಳ ಮರುನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕೆಂದು ಪಿಯುಶ್ ಗೋಯಲ್ ಭಾರತೀಯ ರೈಲ್ವೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮತ್ತು ಡ್ಯಾಶ್ಬೋರ್ಡ್-ನಲ್ಲಿ ಈ ಯೋಜನೆಯ ಸಮಗ್ರ ಚಿತ್ರಗಳನ್ನು ಪೋಸ್ಟ್ ಮಾಡಲಾಗುತ್ತಿದೆ.

ಅದೇ ರೀತಿಯ ಯೋಜನೆಯಲ್ಲಿ ಇತ್ತೀಚೆಗೆ, ಜೈಪುರ ಜಂಕ್ಷನ್, ತಿರುಪತಿ ರೈಲ್ವೆ ನಿಲ್ದಾಣ, ಹರಿದ್ವಾರ ರೈಲ್ವೆ ನಿಲ್ದಾಣ, ನವದೆಹಲಿ ರೈಲ್ವೆ ನಿಲ್ದಾಣ (NDLS) ಸೇರಿದಂತೆ ಇತರ ಕೆಲವು ನಿಲ್ದಾಣಗಳು ಪುನಃ ಅಭಿವೃದ್ಧಿಗೊಂಡಿವೆ. ಅದರಲ್ಲಿ ಮಥುರಾ ಜಂಕ್ಷನ್ ರೈಲು ನಿಲ್ದಾಣದ ಹೊಸ ಮರು ನಿರ್ಮಾಣ ಮಾತ್ರ ಪ್ರಯಾಣಿಕರನ್ನು ಉಲ್ಲಾಸಗೊಳಿಸುತ್ತಿದೆ. ಏಕೆಂದರೆ ಇಂಡಿಯನ್ ರೈಲ್ವೆ, ಸ್ಟೇಷನ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (IRSDC) ಮರುನಿರ್ಮಾಣದ ಜವಾಬ್ದಾರಿ ಹೊತ್ತಿದು ಹಬ್ಸ್ ಅಥವಾ ವಿಶ್ವ-ವರ್ಗದ ಸಾರಿಗೆ ಕೇಂದ್ರಗಳನ್ನು ಬಹುಮಾದರಿಯಲ್ಲಿರುವ ಹವಾಯಿಗಾಂವ್ ಮತ್ತು ಗಾಂಧಿನಗರ ವಿಮಾನ ನಿಲ್ದಾಣದ ಶೈಲಿಯಲ್ಲಿ ಅಭಿವೃದ್ಧಿ ಕಾರ್ಯಚರಣೆ ಮಾಡುತ್ತಿದೆ. ಒಟ್ಟಾರೆಯಾಗಿ ಮಥುರೆಯ ರೈಲ್ವೆ ನಿಲ್ದಾಣ, ಯಾವ ಏರ್ಪೋರ್ಟ್-ಗೇನೂ ಕಮ್ಮಿಯಿಲ್ಲ ಅನ್ನೂ ಹಾಗೆ ಮರುನಿರ್ಮಾಣವಾಗಿ ಪ್ರಯಾಣಿಕರನ್ನು ಸೆಳೆಯುತ್ತಿದೆ.

Also read: ವಾಹನ ಪ್ರಿಯರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್; ಹೊಸ ಬೈಕ್ ಮತ್ತು ಸ್ಕೂಟರ್‌ಗಳ ಮೇಲೆ ಹೆಚ್ಚುವರಿ ತೆರಿಗೆ..