ಚಿತ್ರಾನ್ನ ತಿಂದೂ ತಿಂದು ಬೇಜಾರಾಗಿದ್ರೆ, ಈ ಮಾವಿನ ಸೀಸನ್-ನಲ್ಲಿ ವಿಭಿನ್ನ ಮಾವಿನಕಾಯಿ ಚಿತ್ರಾನ್ನ ಮಾಡಿ ಮತ್ತೆ ಚಿತ್ರಾನ್ನನ ಇಷ್ಟ ಪಡ್ತೀರ!!

0
923

ಬೇಕಾಗುವ ಪದಾರ್ಥಗಳು

 • ಅಕ್ಕಿ– ಅರ್ಧ ಸ್ವಲ್ಪ
 • ಮಾವಿನಕಾಯಿ – 2
 • ತೆಂಗಿನಕಾಯಿ ತುರಿ – ಅರ್ಧ ಬಟ್ಟಲು
 • ಹಸಿಮೆಣಸಿನಕಾಯಿ – 6 ರಿಂದ 7
 • ಮೆಂತ್ಯ ಪೂಡಿ – ಅರ್ಧ ಚಮಚ
 • ಅರಿಶಿಣ – ಸ್ವಲ್ಪ
 • ಇಂಗು – ಒಂದು ಸಣ್ಣ ಚೂರು
 • ಕರಿಬೇವು ಸೊಪ್ಪು – ಸ್ವಲ್ಪ
 • ಎಣ್ಣೆ – ಬೇಕಾದಷ್ಟು
 • ಉಪ್ಪು- ರುಚಿಗೆ ತಕ್ಕಷ್ಟು
 • ಸಾಸಿವೆ – ಅರ್ಧ ಚಮಚ
 • ಕಡಲೆ ಬೇಳೆ- ಉದ್ದಿನಬೇಳೆ – 1 ಚಮಚ
 • ಕಡಲೇ ಬೀಜ- 1 ಚಮಚ

Also read: ರಕ್ತ ಶುದ್ಧಿ, ಕರುಳಿನ ಹುಣ್ಣು, ಮೂಲವ್ಯಾಧಿ ಹಾಗೂ ಕೆಮ್ಮು ನಿವಾರಣೆಗೆ ದಿವ್ಯಔಷಧಿ ಈ ಹಾಗಲಕಾಯಿ ಗೊಜ್ಜು!

ಮಾಡುವ ವಿಧಾನ

 1. ಮೊದಲಿಗೆ ಸಿಹಿ ಮವಿನ ಕಾಯಿಯ ಸಿಪ್ಪೆಯನ್ನು ಹೆರೆದು ಸಣ್ಣದಾಗಿ ತುರಿದು ಕೊಳ್ಳಿ.
 2. ಈಗ ಬಾಣಲೆಗೆ ಸ್ವಲ್ಪ ಎಣ್ಣೆ, ಸಾಸುವೆ -1 ಚಮಚ, ಉದ್ದನೆಯದಾಗಿ ಹೆಚ್ಚಿಕೊಂಡಿರುವ ಹಸಿಮೆಣಸಿನಕಾಯಿ, ಕರಿಬೇವು ಸ್ವಲ್ಪ ಅರಿಶಿಣಪುಡಿ ಮತ್ತು ಇಂಗನ್ನು ಹಾಕಿ ಬಡಿಸಿಕೊಳ್ಳಿ.
  ನೀರು ಹಾಕಬಾರದು. ಆನಂತರ, ಮೊದಲೇ ತುರಿದಿಟ್ಟುಕೊಂಡ ಮಾವಿನಕಾಯಿಯನ್ನು ಹಾಕಿ ಚೆನ್ನಾಗಿ ಬಾಡಿಸಿಕೊಂಡು, ನಂತರ ಪುಡಿ ಮಾಡಿದ ಮೆಂತೆ ಮಿಶ್ರಣವನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕೈಯಾಡಿಸಬೇಕು.
 3. ಈಗ ಹಸಿಕೊಬ್ಬರಿಯನ್ನು ಹಾಕಿ ಎರಡರಿಂದ ಮೂರು ನಿಮಿಷಗಳ ಕಾಲ ಸಣ್ಣ ಊರಿಯಲ್ಲಿ ಬಡಿಸಬೇಕು.
 4. ಆನಂತರ, ಕಡಲೇಬೇಳೆ, ಉದ್ದಿನಬೇಳೆ ಮತ್ತು ಶೇಂಗಾ ಬೀಜವನ್ನು ಬೇರೆ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕೆಂಪಗೆ ಆಗುವವರೆಗೂ ಹುರಿದುಕೊಂಡು ಒಗ್ಗರಣೆಗೆ ಸೇರಿಸಿಕೊಳ್ಳಿ.
 5. ಈಗ ಮೊದಲೇ ತಯಾರಿಸಿಟ್ಟಿದ್ದ ಅನ್ನವನ್ನು ಈ ಮಿಶ್ರಣಕ್ಕೆ ಬೆರೆಸಿ ಚೆನ್ನಾಗಿ ಕಲೆಸಿದರೆ ಮಾವಿನಕಾಯಿ ಚಿತ್ರಾನ್ನ ರೆಡಿ.