ಸಿದ್ಧರಾಮಯ್ಯಗೆ ಮತ್ತೆ ಭೇಟಿ ಅವಕಾಶ ಕೊಡದ ಪ್ರಧಾನಿ ಮೋದಿ

0
815

ಬರ ಮತ್ತು ಮಹದಾಯಿ ನದಿ ನೀರು ಹಂಚಿಕೆ ವಿವಾದ ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ತೆರಳಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮತ್ತೊಮ್ಮೆ ನಿರಾಸೆಯಾಗಿದೆ.

ಇದರೊಂದಿಗೆ ಕಾಂಗ್ರೆಸ್ ಆಡಳಿತ ಇರುವ ಮುಖ್ಯಮಂತ್ರಿಗಳನ್ನು ಕಡೆಗಣಿಸುತ್ತಿದ್ದಾರೆಯೇ ಎಂಬ ಅನುಮಾನ ಪಕ್ಷದ ಮುಖಂಡರಲ್ಲಿ ಕಾಡತೊಡಗಿದೆ.

ಪ್ರಧಾನಿ ಕರೆದಿದ್ದ ಸಂಸದರ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿರುವ ಸಿದ್ಧರಾಮಯ್ಯ, ಇದೇ ವೇಳೆ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಧಾನಿಗಳೊಂದಿಗೆ ಚರ್ಚಿಸಲು ಬಯಸಿದ್ದರು.
ಮೋದಿ ಅವರು ಭೇಟಿ ಅವಕಾಶ ನೀಡದೇ ಇರುವ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ಧರಾಮಯ್ಯ, ರಾಜ್ಯದಲ್ಲಿ ಪ್ರಸ್ತುತ ತೀವ್ರ ಬರಗಾಲ ಇದೆ. ಮಹದಾಯಿ ಜಲ ವಿವಾದ ನೆನೆಗುದಿಗೆ ಬಿದ್ದಿದೆ. ಹೀಗೆ ಹಲವಾರು ಬಾಕಿ ಇರುವ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಯವಕಾಶ ಕೇಳಿದ್ದೆ. ಆದರೆ ದೊರೆಯಲಿಲ್ಲ ಎಂದು ವಿಷಾದಿಸಿದರು
ಬರ ಪರಿಹಾರಕ್ಕಾಗಿ ೪೦೦೦ ಕೋಟಿ ಹಾಗೂ ಪ್ರವಾಹ ಸಂತ್ರಸ್ತರ ನೆರವಿಗೆ ೩೮೬ ಕೋಟಿ ಕೇಳಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು

ಸದರ ಸಭೆಯಲ್ಲಿ ೪೧ ಸದಸ್ಯರ ಪೈಕಿ ೩೦ ಮಂದಿ ಭಾಗವಹಿಸಿದ್ದರು. ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ನಿರ್ಮಲಾ ಚಂದ್ರಶೇಖರ್, ರಮೇಶ್ ಜಿಗಜಿಣಗಿ ಮುಂತಾದವರು ಪಾಲ್ಗೊಂಡಿದ್ದರು.

ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್, ಕೆ.ರೆಹಮಾನ್ ಖಾನ್, ಆಸ್ಕರ್ ಫರ್ನಾಂಡೀಸ್ ಮತ್ತಿತರರು ಭಾಗವಹಿಸಿದ್ದರು.