ಹೊಟ್ಟೆ ಪಾಡಿಗಾಗಿ ಕೆಲಸ ಹುಡುಕುತ ಮುಂಬೈ ಹೋದ ಯುವಕರಿಗೆ ಒಲಿಯಿತು 23. ಕೋಟಿ ರೂ. ಲಾಟರಿ.!

0
310

ಯಾರಿಗೆ ಯಾವಾಗ ಅದೃಷ್ಟ ಒಲಿದು ಬರುತ್ತೆ ಗೊತ್ತಿಲ್ಲ, ಆದರೆ ಈ ಯುವಕನಿಗೆ ಮಾತ್ರ ಭರ್ಜರಿ ಅದೃಷ್ಟ ಕುಲಾಯಿಸಿದೆ. ಬಡತನದ ಕುಟುಂಬದ ಯುವಕನೊಬ್ಬ ಹೊಟ್ಟೆ ಪಾಡಿಗಾಗಿ ಉದ್ಯೋಗ ಅರಸಿ ಮುಂಬೈ ಬಂದು ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ತಲೆಯಲ್ಲಿ ಅದೇನ್ ಹೊಳೆಯಿತೋ ಗೊತ್ತಿಲ್ಲ ಕೆಲಸದ ವೇಳೆ ರೂಮ್‍ಮೇಟ್ ಲಾಟರಿ ಟಿಕೆಟ್ ಖರೀದಿಸಿದ್ದಾರೆ ಅದನ್ನು ನೋಡಿದ ಮೊಹಮ್ಮದ್ ಫಯಾಜ್ ಜೆ.ಎ. ಎನ್ನುವ ಯುವಕ ಲಾಟರಿ ಖರೀದಿಸಿ 23 ಕೋಟಿ ಗೆದ್ದಿದ್ದಾರೆ.

ಹೌದು ಬಡತನದಿಂದ ಬೇಸತ್ತ ಯುವಕ ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ಒಬ್ಬ ಸಹೋದರ, ಇಬ್ಬರು ಸಹೋದರಿಯರನ್ನು ಸಾಕುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಹೆತ್ತವರನ್ನು ಕಳೆದುಕೊಂಡಿ ಕಾರಣ ಮನೆಯ ಜವಾಬ್ದಾರಿ 24 ವರ್ಷದ ಮೊಹಮ್ಮದ್ ಮೇಲಿಯೇ ಇದೆ. ಹೇಗಾದರೂ ಮಾಡಿ ಹಣ ಗಳಿಸಿ ಮನೆಯ ಕಷ್ಟವನ್ನು ಸರಿಮಾಡಬೇಕು ಎಂದು ಲಾಟರಿ ಖರೀದಿಸಲು ಪ್ರಾರಂಭಿಸಿದ್ದರು. ಲಾಟರಿ ಖರೀದಿಸಲು ಪ್ರಾರಂಭಿಸಿ ಕೇವಲ ಆರು ತಿಂಗಳಾಗಿತ್ತು. ಸತತ ಪ್ರಯತ್ನದಿಂದ ಅಬುಧಾಬಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಬಿಗ್ ಟಿಕೆಟ್ ರಾಫೆಲ್ ಡ್ರಾದಲ್ಲಿ 32.18 ಕೋಟಿ ರೂ. ಒಲಿದಿದೆ.

ಈ ಕುರಿತು ಸಂತಸ ಹಂಚಿಕೊಂಡ ಅವರು ಮೂತ್ರಪಿಂಡದ ಖಾಯಿಲೆಯಿಂದ ನನ್ನ ಪೋಷಕರು ಇಬ್ಬರೂ ತೀರಿಕೊಂಡರು. ನನ್ನ ತಂದೆ ಸೌದಿ ಅರೇಬಿಯಾದಲ್ಲಿ ಬಹಳ ದಿನಗಳ ಕಾಲ ಕೆಲಸ ಮಾಡಿದ್ದರು. 12 ವರ್ಷಗಳಿಗೂ ಹೆಚ್ಚು ಕಾಲ ಮೂತ್ರಪಿಂಡ ವೈಫಲ್ಯದ ವಿರುದ್ಧ ಹೋರಾಡಿದ್ದರು. ನಮ್ಮ ಪೋಷಕರು ತುಂಬಾ ನೋವುಂಡಿದ್ದನ್ನು ನಾವು ನೋಡಿದ್ದೇವೆ. ನಮ್ಮ ಪೋಷಕರು ನಮ್ಮೊಂದಿಗೆ ಇಲ್ಲದಿರುವ ಆಘಾತದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದೇವೆ. ನನಗೆ ತಂಗಿ ಇದ್ದಾಳೆ, ಅಕ್ಕನ ಮದುವೆಯಾಗಿದೆ. ಮನೆ ನಿರ್ಮಿಸಲು ನಾನು ಸ್ವಲ್ಪ ಜಮೀನನ್ನು ಮಾರಿದ್ದೆವು. ಇದೀಗ ಮನೆ ನಿರ್ಮಿಸುವುದು ಬಾಕಿ ಇದೆ.

ಕುಟುಂಬದ ಹೊರೆ ನನ್ನ ಮೇಲೆಯೇ ಇದ್ದ ಕಾರಣ ಒಂದು ವರ್ಷದ ಹಿಂದೆ ಕೆಲಸಕ್ಕಾಗಿ ನಾನು ಮುಂಬೈಗೆ ಬಂದೆ. ಇಬ್ಬರು ಮಕ್ಕಳ ತಂದೆಯಾಗಿರುವ ನನ್ನ ಸಹೋದರ ಕರ್ನಾಟಕದಲ್ಲಿ ನಮ್ಮ ಹೊಲ ಮನೆಯನ್ನು ನೋಡಿಕೊಳ್ಳುತ್ತಿದ್ದಾನೆ. ಆನ್‍ಲೈನ್ ಮೂಲಕ ಲಾಟರಿ ಖರೀದಿಸುವ ಆಲೋಚನೆಯನ್ನು ನನ್ನ ರೂಮ್‍ಮೇಟ್ ನೀಡಿದ. ಗಡುವು ಮುಗಿದಿದ್ದರಿಂದ ಎರಡು ತಿಂಗಳುಗಳ ಕಾಲ ಲಾಟರಿ ಖರೀದಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಸರಿಯಾದ ಸಮಯಕ್ಕೆ ಖರೀದಿಸಿದೆ. ಸೆಪ್ಟೆಂಬರ್ ಕೊನೆಯ ದಿನ ನಿಜವಾಗಿಯೂ ವಿಜೇತನಾದೆ ಎಂದು ತಿಳಿಸಿದ್ದಾರೆ.

ಕುಟುಂಬದ ಹೊರೆ ನನ್ನ ಮೇಲೆಯೇ ಇದ್ದ ಕಾರಣ ಒಂದು ವರ್ಷದ ಹಿಂದೆ ಕೆಲಸಕ್ಕಾಗಿ ನಾನು ಮುಂಬೈಗೆ ಬಂದೆ. ಇಬ್ಬರು ಮಕ್ಕಳ ತಂದೆಯಾಗಿರುವ ನನ್ನ ಸಹೋದರ ಕರ್ನಾಟಕದಲ್ಲಿ ನಮ್ಮ ಹೊಲ ಮನೆಯನ್ನು ನೋಡಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ. ಆನ್‍ಲೈನ್ ಮೂಲಕ ಲಾಟರಿ ಖರೀದಿಸುವ ಆಲೋಚನೆಯನ್ನು ನನ್ನ ರೂಮ್‍ಮೇಟ್ ನೀಡಿದ. ಗಡುವು ಮುಗಿದಿದ್ದರಿಂದ ಎರಡು ತಿಂಗಳುಗಳ ಕಾಲ ಲಾಟರಿ ಖರೀದಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಸರಿಯಾದ ಸಮಯಕ್ಕೆ ಖರೀದಿಸಿದೆ. ಸೆಪ್ಟೆಂಬರ್ ಕೊನೆಯ ದಿನ ನಿಜವಾಗಿಯೂ ವಿಜೇತನಾದೆ ಎಂದು ತಿಳಿಸಿದ್ದಾರೆ.